ಚಾಮರಾಜನಗರ : ಚಾಮರಾಜನಗರದಲ್ಲಿ ಬೇವಿನ ಮರ ಒಂದು ವಿಸ್ಮಯಕ್ಕೆ ಕಾರಣವಾಗಿದೆ. ಬೇವಿನ ಮರದಿಂದ ಬಿಳಿ ಬಣ್ಣದ ದ್ರಾವಣ ನಿರಂತರವಾಗಿ ಜಿನುಗುತ್ತಿದೆ. ಬೇವಿನ ಮರದ ಮೂರರಿಂದ ನಾಲ್ಕು ಕಡೆಯಿಂದ ದ್ರಾವಣ ಹರಿಯುತ್ತಿದೆ. ಚಾಮರಾಜನಗರ ಜಿಲ್ಲೆಯ ಕೊರಟ್ಟಿ ಹೊಸೂರು ಗ್ರಾಮದಲ್ಲಿ ಬೇವಿನ ಮರದಲ್ಲಿ ಈ ಒಂದು ವಿಸ್ಮಯ ಕಾರಿ ಘಟನೆ ನಡೆದಿದೆ.
ಮರಕಹಿ ಆದರೆ ಆ ಮರದಿಂದ ಬರುತ್ತಿರುವ ದ್ರಾವಣ ಮಾತ್ರ ಸಿಹಿಯಾಗಿದೆ. ಸಕ್ಕರೆ ಅಷ್ಟೇ ಬಿಳಿ ಬಣ್ಣದ ದ್ರಾವಣ ಸಿಹಿಯಾಗಿದೆ ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ. ಮರದಿಂದ ಬರುತ್ತಿರುವ ದ್ರಾವಣವನ್ನು ಗ್ರಾಮಸ್ಥರು ಸೇವಿಸಿದ್ದು, ಬರದಿಂದ ಬರುತ್ತಿರುವ ಬಿಳಿ ದ್ರಾವಣ ಸಕ್ಕರೆ ಹಾಗೂ ಜೇನುತುಪ್ಪದ ರುಚಿಯಂತೆ ಇದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.







