ಬೆಂಗಳೂರು : ಸರ್ಕಾರ, ಸಚಿವರ ವಿರುದ್ಧ ಗುತ್ತಿಗೆದಾರರಿಂದ ಕಮಿಷನ್ ಆರೋಪ ವಿಚಾರವಾಗಿ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದಿಂದಲೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೆಂದಲೇ ಭ್ರಷ್ಟಾಚಾರದ ಡಿಲ್ ನಡೆಸಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಭ್ರಷ್ಟಾಚಾರದ ಡೀಲ್ ಗೆ ಸಂಬಂಧಿಸಿದ ಆಡಿಯೋ ಈಗ ವೈರಲಾಗಿದ್ದು, ಆಡಿಯೋದಲ್ಲಿ ಗುತ್ತಿಗೆದಾರರ ಸಂಘದ ಪದಾಧಿಕಾರಿಯ ಡೀಲ್ ಕುರಿತು ಮಾಹಿತಿ ಇದೆ. ಗುತ್ತಿಗೆದಾರರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಸಂಘದ ಪದಾಧಿಕಾರಿಗಳು ಅಂತ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಗುತ್ತಿಗೆದಾರರ ಸಂಘದ ಬಗ್ಗೆಯೇ ಅನುಮಾನ ಶುರುವಾಗಿದೆ. ಬಡ ಗುತ್ತಿಗೆದಾರರಿಂದ ಕಮಿಷನ್ ಗೌರವಾಧ್ಯಕ್ಷ ಮತ್ತು ನಿರ್ದೇಶಕ ಸರ್ಕಾರಿ ಯೋಜನೆಗಳ ಕಾಮಗಾರಿಗೆ ಬಿಡ್ ಮಾಡುವ ಗುತ್ತಿಗೆದಾರರ ಜೊತೆಗೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಮತ್ತು ಸಂಘಟನೆಗಳಿಂದಲೂ ಬಿಡ್ ಮಾಡಲಾಗಿದ್ದು ಲೋಕೋಪಯೋಗಿ, ಇಂಧನ ಇಲಾಖೆ, ನಗರಾಭಿವೃದ್ಧಿ, ನೀರಾವರಿ ಸೇರಿದಂತೆ ಇಲ್ಲ ಇಲಾಖೆಗಳ ಟೆಂಡರ್ ನಲ್ಲಿ ಭಾರಿ ಗೋಲ್ಮಾಲ್ ನಡೆದಿದೆ.
ಬಿಡ್ ವಾಪಸ್ ಪಡೆಯಲು ಗುತ್ತಿಗೆದಾರರಿಗೆ ಅವಾಜ್ ಹಾಕಿದ್ದಾರೆ ಗುತ್ತಿಗೆದಾರರ ಸಂಘದ ನಿರ್ದೇಶಕ ಮಂಡಳಿ ಗೌರವಾಧ್ಯಕ್ಷ ಜಗನ್ನಾಥ ಶಿವಾಜಿ ನಿರ್ದೇಶಕ ಎಚ್ ಆರ್ ಚಿಂಚಲಿಯಿಂದ ಬಡ ಗುತ್ತಿಗೆದಾರರಿಗೆ ಬೆದರಿಕೆ ಹಾಕಿದ್ದಾರೆ. ಬಿಡ್ ವಾಪಸ್ ಪಡೆಯುವ ವಿಚಾರಕ್ಕೆ ಬಡಗುತ್ತಿಗೆದಾರರಿಗೆ ಧಮ್ಕಿ ಬೆಡ್ ವಾಪಸ್ ಪಡೆಯಬೇಕೆಂದರೆ ಗುತ್ತಿಗೆ ಹಣದಲ್ಲಿ, ನಮಗೆ ಶೇಕಡ ಮೂರರಷ್ಟು ಕಮಿಷನ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಅಂತ್ಯವಾಗಿ ಶೇಕಡ 2.5 ರಷ್ಟು ಕಮಿಷನ್ ಗೆ ಒಪ್ಪಿಗೆ ನೀಡಿದ್ದಾರೆ. ಗುತ್ತಿಗೆ ಸಿಕ್ಕ ತಕ್ಷಣ ಡೀಲಿಂಗ್ ಹಣ ನೀಡುವಂತೆ ತಾಕಿದ್ದು ಮಾಡಿದ್ದಾರೆ.








