ಬೆಂಗಳೂರು : ಈಗಾಗಲೇ ಹಲವು ರಾಜ್ಯಗಳಲ್ಲಿ ನಿಫಾ ವೈರಸ್ ಮತ್ತೆ ಕಾಣಿಸಿಕೊಂಡಿದ್ದು, ಕರ್ನಾಟಕದಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಬಾವಲಿಗಳು, ಹಂದಿಗಳು ಮತ್ತು ಮನುಷ್ಯರಿಂದ ಮನುಷ್ಯರಿಗೆ ಹರಡುವ ಈ ವೈರಸ್‌ನಿಂದ ಮರಣ ಪ್ರಮಾಣ ಹೆಚ್ಚಿರುವ ಕಾರಣ, ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹೌದು ಮನುಷ್ಯರಿಂದ ಮನುಷ್ಯರಿಗೂ ಕೆಲವವೊಮ್ಮೆ ಇದು ವರ್ಗಾವಣೆ ಆಗಬಹುದು ಎನ್ನಲಾಗಿದೆ. ಅತ್ಯಂತ ಭಯಾನಕ ಅಂಶವೆಂದರೆ ನಿಫಾ ವೈರಸ್ ಸೋಂಕಿತರ ಮರಣ ಪ್ರಮಾಣ ಶೇ. 60-75 ರಷ್ಟಿರುವ ಕಾರಣ, ಈ ವೈರಸ್ ರಾಜ್ಯದಲ್ಲಿ ಕಾಲಿಡದಂತೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಶಂಕಿತ ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಆರೋಗ್ಯಾಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ.
ಇನ್ನು ನಿಫಾ ವೈರಸ್ನ ರೋಗ ಲಕ್ಷಣಗಲು ತಕ್ಷಣಕ್ಕೆ ಗೋಚರಿಸುವುದಿಲ್ಲ. ಸಾಮಾನ್ಯವಾಗಿ 4 ರಿಂದ 14 ದಿನಗಳಲ್ಲಿ ಇವು ಗಮನಕ್ಕೆ ಬರಲಿದ್ದು, ಆರೋಗ್ಯ ಇಲಾಖೆಯ ಸಲಹೆ ಮತ್ತು ಸೂಚನೆಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ಸೋಂಕಿತರು ಕಂಡುಬಂದಲ್ಲಿ ಅಂತವರ ಚಿಕಿತ್ಸೆಗೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ನಿಫಾ ವೈರಸ್ ನ ಲಕ್ಷಣಗಳೇನು?
* ಜ್ವರ
* ಮೈ ಕೈ ನೋವು
* ಸುಸ್ತು
* ತಲೆನೋವು
* ಶೀತ
* ಗಂಟಲು ಕೆರೆತ ಅಥವಾ ಗಂಟಲಿನಲ್ಲಿ ನೋವು
* ತಲೆನೋವು
* ಕುತ್ತಿಗೆಯ ಹಿಂದಿನ ಭಾಗದಲ್ಲಿ ಸೆಳೆತ








