ಬೆಂಗಳೂರು: ರಾಜ್ಯ ಸರ್ಕಾರದಿಂದ ಸ್ಮಾರ್ಟ್ ಕ್ಲಾಸ್ ಗಳನ್ನು ಸರ್ಕಾರಿ ಶಾಲೆಗಳಲ್ಲಿ ನಿರ್ಮಿಸೋದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಕೇಂದ್ರ ಪುರಸ್ಕೃತ ಕಾರ್ಯಕ್ರಮವಾದಂತ ಸಮಗ್ರ ಶಿಕ್ಷಣ ಕರ್ನಾಟಕದಡಿ 2022-23, 2024-25 ಮತ್ತು 2025-26ನೇ ಸಾಲಿನ ಕೇಂದ್ರ ಶಿಕ್ಷಣ ಸಚಿವಾಲಯದ ಯೋಜನಾ ಅನುಮೋದನಾ ಮಂಡಳಿ ಅನುಮೋದಿ ರಾಜ್ಯದ 3862 ಪ್ರಾಥಮಿಕ, ಪ್ರೌಢ ಮತ್ತು ಕೆ ಜಿ ಬಿ ವಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ರೂಂ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಟಿಸಿದ್ದು, ಮೇಲೆ ಓದಲಾದ ಕ್ರಮಾಂಕ (1)ರಲ್ಲಿನ 2022-23ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುವ ಯೋಜನಾ ಅನುಮೋದನಾ ಮಂಡಳಿ (PAB)ಯ ದಿನಾಂಕ: 09.05.2022ರ ಸಭೆಯಲ್ಲಿ 1631 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಘಟಕ ವೆಚ್ಚ ರೂ. 2.4 ಲಕ್ಷದಂತೆ ಒಟ್ಟು ವೆಚ್ಚ ರೂ.3914.40ಲಕ್ಷಗಳಲ್ಲಿ ಸ್ಮಾರ್ಟ್ ಕ್ಲಾಸ್ ಸ್ಥಾಪಿಸಲು ಅನುಮೋದನೆ ನೀಡಲಾಗಿರುತ್ತದೆ ಎಂದಿದ್ದಾರೆ.
2024-25ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುವ ಪೂರಕ ಯೋಜನಾ ಅನುಮೋದನಾ ಮಂಡಳಿ (PAB)ಯ ದಿನಾಂಕ: 12.08.2025ರ ಸಭೆಯಲ್ಲಿ 95 ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳಲ್ಲಿ ಘಟಕ ವೆಚ್ಚ ರೂ. 1.2 ಲಕ್ಷದಂತೆ ಒಟ್ಟು ವೆಚ್ಚ ರೂ.114.00 ಲಕ್ಷಗಳಲ್ಲಿ ಸ್ಮಾರ್ಟ್ ಕ್ಲಾಸ್ ಸ್ಥಾಪಿಸಲು ಅನುಮೋದನೆ ನೀಡಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (3)ರಲ್ಲಿನ 2025-26ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುವ ಯೋಜನಾ ಅನುಮೋದನಾ ಮಂಡಳಿ (PAB)ಯ ದಿನಾಂಕ: 26.03.2025ರ ಸಭೆಯಲ್ಲಿ 1326 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 651 ಪ್ರೌಢ/ಉನ್ನತ ಪ್ರೌಢ ಶಾಳೆಗಲು ಸೇರಿದಂತೆ ಒಟ್ಟು 1977 ಶಾಲೆಗಳಲ್ಲಿ ಘಟಕ ವೆಚ್ಚ ರೂ.2.4 ಲಕ್ಷದಂತೆ ಒಟ್ಟು ವೆಚ್ಚ ರೂ.4744.80 ಲಕ್ಷಗಳಲ್ಲಿ ಸ್ಮಾರ್ಟ್ ಕ್ಲಾಸ್ ಸ್ಥಾಪಿಸಲು ಅನುಮೋದನೆ ನೀಡಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (4)ರಲ್ಲಿನ 2025-26ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುವ ಪೂರಕ ಯೋಜನಾ ಅನುಮೋದನಾ ಮಂಡಳಿ (PAB)ಯ ದಿನಾಂಕ: 28.05.2025ರ ಸಭೆಯಲ್ಲಿ 159 ಪ್ರೌಢ /ಉನ್ನತ ಪ್ರೌಢ ಶಾಲೆಗಳಲ್ಲಿ ಘಟಕ ವೆಚ್ಚ ರೂ.2.4 ಲಕ್ಷದಂತೆ ಒಟ್ಟು ವೆಚ್ಚ ರೂ.381.6 ಲಕ್ಷಗಳಲ್ಲಿ ಸ್ಮಾರ್ಟ್ ಕ್ಲಾಸ್ ಸ್ಥಾಪಿಸಲು ಅನುಮೋದನೆ ನೀಡಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (5)ರಲ್ಲಿ ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ಇವರಿಂದ ಸ್ವೀಕೃತವಾದ ಪ್ರಸ್ತಾವನೆಯಲ್ಲಿ 2022-23, 2024-25 ಹಾಗೂ 2025-26ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆಗೆ PAB ಸಭೆಯ ಅನುಮೋದನೆಯಂತೆ ಒಟ್ಟು 3862 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆಗಳು ಮತ್ತು KGBV ಶಾಲೆಗಳಲ್ಲಿ ICT & Digital Initiatives ಚಟುವಟಿಕೆಯಡಿಯಲ್ಲಿ ಒಟ್ಟು ರೂ. 9154.80 ಲಕ್ಷ ಮೊತ್ತದಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಯೋಜನೆ ಅನುಷ್ಠಾನಗೊಳಿಸಲು ಅನುಮೋದನೆ ಕೋರಲಾಗಿರುತ್ತದೆ. ಮುಂದುವರೆದು ದಿನಾಂಕ 16.09.2025ರಂದು ಹಾಗೂ 06.01.2026ರಂದು ನಡೆದ TAP ಸಭೆಯಲ್ಲಿ ಸ್ಮಾರ್ಟ್ ಕ್ಲಾಸ್‌ಗೆ ಅಗತ್ಯವಿರುವ ಉಪಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ಇವರ ಪ್ರಸ್ತಾವನೆಯಲ್ಲಿ ಸಲ್ಲಿಸಿರುವ ತಾಂತ್ರಿಕ ನಿರ್ದಿಷ್ಟತೆಯಂತೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಲಾಗಿದೆ.









