ನವದೆಹಲಿ : 2026 ನೇ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದರು. 9ನೇ ಬಾರಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದು ರವಿದಾಸ್ ಅವರ ಜನ್ಮ ದಿನಾಚರಣೆ ಹಾಗೂ ಮಾಘ ಪೂರ್ಣಿಮೆ ದಿನ ಬಜೆಟ್ ಮಂಡಿಸುತ್ತಿದ್ದೇನೆ ಎಂದು ನಿರ್ಮಲ ಸೀತಾರಾಮನ್ ಬಜೆಟ್ ಭಾಷಣದಲ್ಲಿ ತಿಳಿಸಿದರು. ಮೇಘ ಪೂರ್ಣಿಮಾ ಮತ್ತು ರವಿದಾಸ್ ಜಯಂತಿಯ ಶುಭಾಶಯಗಳು ಎಂದು ತಿಳಿಸಿದರು.
ಹೊಸದಾಗಿ 20 ರಾಷ್ಟ್ರೀಯ ಜಲಮಾರ್ಗ ನಿರ್ಮಾಣ ಯೋಜನೆ ನಿರ್ಮಾಣ ಗುರಿ ಹೊಂದಿದ್ದು ಮುಂದಿನ ವರ್ಷಗಳಲ್ಲಿ 20 ಜಲಮಾರ್ಗದ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ನಿರ್ಮಲ ಸೀತಾರಾಮನ್ ಘೋಷಣೆ ಮಾಡಿದರು.ಹೈ ಸ್ಪೀಡ್ ರೈಲ್ವೆ ಕಾಲಿಡಾರ್ ಅನ್ನು ನಿರ್ಮಲ ಸೀತಾರಾಮನ್ ಘೋಷಣೆ ಮಾಡಿದರು. ಪ್ರಮುಖ ಏಳು ನಗರಗಳನ್ನು ಜೋಡಿಸಲು ಹೈ ಸ್ಪೀಡ್ ರೈಲ್ವೆ ಯೋಜನೆ ಘೋಷಿಸಿದ್ದು ಮುಂಬೈ ಟು ಪುಣೆ, ಪುಣೆ ಟು ಹೈದರಾಬಾದ್, ಹೈದರಾಬಾದ್ ಟು ಬೆಂಗಳೂರು, ಹೈದರಾಬಾದ್ ಟು ಚೆನ್ನೈ, ಚೆನ್ನೈ ಟು ಬೆಂಗಳೂರು, ದೆಲ್ಲಿ ಟು ವಾರಣಾಸಿ, ವಾರಣಾಸಿ ಟು ಸಿಲಿಗುರಿ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಅನ್ನು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.






