ಬೆಂಗಳೂರು; ಸಾರಿಗೆ ಸಂಘಟನೆಗಳ ಬೇಡಿಕೆ ಈಡೇರಿಕೆಯಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದಂತ ಕಾರ್ಮಿಕ ಕಣ್ಮಣಿ ಎಂಬುದಾಗಿಯೇ ಕರೆಸಿಕೊಂಡಿದ್ದಂತ ಅನಂತ ಸುಬ್ಬರಾವ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷರಾಗಿದ್ದಂತ ಹೆಚ್.ವಿ ಅನಂತಸುಬ್ಬರಾವ್ ಅವರು, ಸಾರಿಗೆ ನೌಕರರ ಹಲವು ಬೇಡಿಕೆ ಈಡೇರಿಸುವಲ್ಲಿ ಹೋರಾಡಿದ್ದರು. ಹೋರಾಟವನ್ನೇ ತಮ್ಮ ಜೀವನದ ವೃತ್ತಿಯನ್ನಾಗಿಸಿಕೊಂಡಿದ್ದರು.
ನಾಳೆಯಿಂದ ವಿವಿಧ ಬೇಡಿಕೆ ಈಡೇರಿಕೆಗೂ ಕೆ ಎಸ್ ಆರ್ ಟಿಸಿ ನೌಕರರು ಮುಂದಾಗಿದ್ದರು. ಈ ಮುಷ್ಕರದ್ಲೂ ಪಾಲ್ಗೊಳ್ಳುವ ನಿರೀಕ್ಷೆಯಿತ್ತು. ಆದರೇ ಅವರು ಇದೀಗ ಹೃದಯಾಘಾತದಿಂದ ನಿಧನರಾಗಿರುವುದಾಗಿ ತಿಳಿದು ಬಂದಿದೆ. ಆ ಮೂಲಕ ಕಾರ್ಮಿಕ ಕಣ್ಮಣಿ ಹೆಚ್.ವಿ ಅನಂತಸುಬ್ಬರಾವ್ ಇನ್ನಿಲ್ಲವಾಗಿದ್ದಾರೆ.
ಈ ಬಗ್ಗೆ ಎಂ.ಸತ್ಯಾನಂದ ಎಂಬುವರು ಮಾಹಿತಿಯೊಂದನ್ನು ಹಂಚಿಕೊಂಡಿದ್ದು, ಆತ್ಮೀಯ ಸಂಗಾತಿಗಳೇ, ಇದೀಗ ಎಐಟಿಯುಸಿ ಮಾಜಿ ರಾಜ್ಯಾಧ್ಯಕ್ಷರು ಕರ್ನಾಟಕ ಕಾರ್ಮಿಕ ವರ್ಗದ ಹಿರಿಯ ನಾಯಕರಾದ ಕಾಂ. ಹೆಚ್. ವಿ. ಅನಂತ ಸುಬ್ಬರಾವ್ ಅವರು ಇದೀಗ ಹೃದಯಾಘಾತದಿಂದ ನಿಧನರಾದ ವಿಷಯ ತಿಳಿಸಲು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ ಎಂದಿದ್ದಾರೆ.
ಪಾರ್ಥಿವ ಶರೀರ ದರ್ಶನಕ್ಕೆ ಈಗ ಅವರ ಮನೆಯಲ್ಲಿ ಅವಕಾಶವಿದ್ದು. ನಾಳೆ ಪಾರ್ಥಿವ ಶರೀರದ ಅಂತಿಮ ದರ್ಶನ ಸ್ಥಳದ ಮಾಹಿತಿ ತಿಳಿಸುತ್ತೇವೆ ಎಂಬುದಾಗಿ ಹೇಳಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು








