ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ, ಬೆಂಗಳೂರಲ್ಲಿ ಟೆಕ್ಕಿ ಶರ್ಮಿಳಾ ಕೊಲೆ ಪ್ರಕರಣಕ್ಕೆ ಇದೀಗ ಮತ್ತೊಂದು ಸಿಕ್ಕಿದೆ. ತನಿಖೆ ವೇಳೆ ಬೆಚ್ಚಿ ಬೆಳಿಸುವ ಮಾಹಿತಿಯನ್ನು ಆರೋಪಿ ಕರ್ನಲ್ ಕುರೈ ಬಿಚ್ಚಿಟ್ಟಿದ್ದಾನೆ. ಆರೋಪಿಗೆ ಪ್ರೀತಿಗಿಂತ ಆಕೆಯ ಮೇಲೆ ವಿಕೃತಿ ಮನಸ್ಸು ಇತ್ತು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಆರೋಪಿ ಕರ್ನಲ್ ಶರ್ಮಿಳಾ ಮೇಲೆ ಲೈಂಗಿಕ ವಿಕೃತಿ ಹೊಂದಿದ್ದ ಅಲ್ಲದೇ ಶರ್ಮಿಳಾ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ವಿಚಾರಣೆಯ ವೇಳೆ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ತನಿಖೆ ಬೆಳೆ ಈ ಒಂದು ಕೊಲೆಯ ರಹಸ್ಯ ಬಯಲಾಗಿದೆ. ಕೊಲೆಯ ದಿನ ಶರ್ಮಿಳಾ ಕೂಗುತ್ತಿದ್ದಂತೆ ಪಾಪಿ ಕರ್ನಲ್ ಬಾಯಿ ಹೊತ್ತಿ ಹಿಡಿದಿದ್ದಾನೆ.
ನನ್ನ ಬಿಟ್ಟುಬಿಡು ಅಂತ ಶರ್ಮಳ ಆರೋಪಿಗೆ ಬೇಡಿಕೊಂಡಿದ್ದಾಳೆ. ಈ ವೇಳೆ ಆಕೆಯ ಕುತ್ತಿಗೆ ಒತ್ತಿದ್ದಾನೆ ಅಷ್ಟೆ ಶರ್ಮಿಳಾ ಉಸಿರು ಚೆಲ್ಲಿದ್ದಾಳೆ. ಬಳಿಕ ಟಿಶ್ಯೂ ಪೇಪರ್ ಹಾಸಿಗೆ ಮೇಲೆ ಇಟ್ಟು ಕಿರಾತಕ ಬೆಂಕಿ ಹಚ್ಚಿದ್ದಾನೆ. ಇದು ಆಕಸ್ಮಿಕ ಘಟನೆ ಎಂದು ಬಿಂಬಿಸಲು ಯತ್ನಿಸಿದ್ದಾನೆ ಇದೀಗ ಪೊಲೀಸರ ತನಿಖೆಯ ವೇಳೆ ಮತ್ತೊಂದು ಸತ್ಯ ಬಯಲಾಗಿದೆ.








