Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

KUWJ ಸಂಘದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

14/03/2026 10:50 PM

ಹಿಂದುಳಿದ ಸಮಾಜದ ಎಂ.ಡಿ.ಆನಂದ್, ಸಾಗರದ ಮಾರಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಸೃಷ್ಟಿಯಾಗಲಿದೆಯೇ ಹೊಸ ಇತಿಹಾಸ?

14/03/2026 10:41 PM

ನಿಮ್ಮ ಮನೆಯಲ್ಲಿರುವ ‘ಇಲಿ’ಗಳನ್ನ ಕೊಲ್ಲದೇ ಓಡಿಸೋದು ಹೇಗೆ ಗೊತ್ತಾ? ಕೇವಲ 10 ರೂ.ಗೆ ಶಾಶ್ವತ ಪರಿಹಾರ!

14/03/2026 10:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಸ್ವಯಂ ಚಾಲಿತ ಭೂ ಪರಿವರ್ತನೆಗೆ ತಂತ್ರಾಂಶ: ಸಚಿವ ಕೃಷ್ಣಬೇರೇಗೌಡ ಚಾಲನೆ
KARNATAKA

ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಸ್ವಯಂ ಚಾಲಿತ ಭೂ ಪರಿವರ್ತನೆಗೆ ತಂತ್ರಾಂಶ: ಸಚಿವ ಕೃಷ್ಣಬೇರೇಗೌಡ ಚಾಲನೆ

By kannadanewsnow0923/01/2026 5:50 PM

ಬೆಂಗಳೂರು : ರಾಜ್ಯದಲ್ಲಿ ಸುಲಲಿತ ವ್ಯವಹಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಅಗತ್ಯ ಇರುವ ಭೂಮಿಯ ಸ್ವಯಂ ಚಾಲಿತ ಭೂ ಪರಿವರ್ತನೆಗಾಗಿ ಅಭಿವೃದ್ಧಿಪಡಿಸಿರುವ ತಂತ್ರಾಂಶಕ್ಕೆ ರಾಜ್ಯ ಸರ್ಕಾರ ಶುಕ್ರವಾರ ಚಾಲನೆ ನೀಡಿದೆ.

ನವೀಕರಿಸಬಹುದಾದ ಇಂಧನ ಯೋಜನೆಯ ಸ್ಥಾಪನೆಗೆ ಭೂಪರಿರ್ವತನೆಯಿಂದ ವಿನಾಯಿತಿ ನೀಡಿ, ಪರಿಭಾವಿತ (ಡೀಮ್ಡ್‌) ಭೂ ಪರಿವರ್ತನೆಗೆ 30 ದಿನಗಳ ಗಡುವಿನ ನಂತರ ಸ್ವಯಂ ಚಾಲಿತ ಭೂ ಪರಿವರ್ತನೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಕಂದಾಯ ಇಲಾಖೆ ಅಭಿವೃದ್ಧಿಪಡಿಸಿರುವ ತಂತ್ರಾಂಶಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಕಾಸಸೌಧದಲ್ಲಿ ಶುಕ್ರವಾರ ಚಾಲನೆ ನೀಡಿದರು.

ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 95 ಮತ್ತು ಕರ್ನಾಟಕ ಭೂ ಕಂದಾಯ ನಿಯಮಗಳ 1996ರ ನಿಯಮ 106(ಇ), 106(ಎಫ್‌)ರ ತಿದ್ದುಪಡಿಯಂತೆ ನವೀಕರಿಸಬಹುದಾದ ಇಂಧನಗಳ ಭೂ ಪರಿವರ್ತನೆಗೆ ಸಂಬಂಧಿಸಿದ ಸ್ವಯಂ ಚಾಲಿತವಾಗಿ ಭೂ ಪರಿವರ್ತನೆ ಮಾಡಲು ಕಂದಾಯ ಇಲಾಖೆ ಅಭಿವೃದ್ಧಿ ಪಡಿಸಿದ್ದ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಳವಡಿಸಲಾಗಿತ್ತು. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈ ತಂತ್ರಾಂಶ ಅಳವಡಿಕೆಗೆ ಚಾಲನೆ ನೀಡಲಾಗಿದೆ.

ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ” 2030ರ ವೇಳೆಗೆ 500 ಗಿಗಾವ್ಯಾಟ್‌ಗಳಷ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದುವ ದೇಶದ ಗುರಿಗೆ ಪೂರಕವಾಗಿ ಯೋಜನೆಗಳ ಅನಷ್ಠಾನಕ್ಕೆ ಕರ್ನಾಟಕ ಬದ್ಧವಾಗಿದೆ. ಇಂಧನ ಭದ್ರತೆ ಒದಗಿಸುವ ಜವಾಬ್ದಾರಿ ಜತೆಗೆ ಪರಿಸರ ಸಂರಕ್ಷಣೆಯೂ ಅತಿ ಮುಖ್ಯ. ಈ ನಿಟ್ಟಿನಲ್ಲಿ ಪಳಿಯುಳಿಕೆ ಇಂಧನದ ಬಳಕೆ ತಗ್ಗಿಸಿ, ನವೀಕರಿಸಬಹುದಾದ ಇಂಧನದ ಬಳಕೆಗೆ ಒತ್ತು ನೀಡಬೇಕಿದೆ. ಹಾಗಾಗಿ, ನವೀಕರಿಸಬಹುದಾದ ಯೋಜನೆಗಳಿಗೆ ಭೂ ಮಾಲೀಕರಿಂದ ಭೂಮಿ ಪಡೆಯಲು ಅನುಕೂಲವಗುವಂತೆ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ,” ಎಂದರು.

“ಕರ್ನಾಟಕವು ಜಾಗತಿಕ ಮಟ್ಟದಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದರಲ್ಲೂ ಮುಂಚೂಣಿಯಲ್ಲಿದ್ದು, 2025ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ನವೀಕರಿಸಬಹುದಾದ ಇಂಧನ ವಲಯಕ್ಕೆ 4 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ಹೂಡಿಕೆ ಒಪ್ಪಂದಗಳಾಗಿವೆ. ಇದು ರಾಜ್ಯವು ಪಡೆದುಕೊಂಡಿರುವ ಒಟ್ಟು ಹೂಡಿಕೆಯ ಸುಮಾರು ಶೇ. 40 ರಷ್ಟು. ಸುಲಲಿತ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಭೂ ಪರಿವರ್ತನೆಯ ನಿಯಮಗಳನ್ನು ಸರಳಗೊಳಿಸುವ ಬಗ್ಗೆ ಸಮಾವೇಶದಲ್ಲಿ ನೀಡಿದ್ದ ಭರವಸೆಯನ್ನ ಈ ತಂತ್ರಾಂಶ ಬಿಡುಗಡೆ ಮೂಲಕ ಈಡೇರಿಸಲಾಗಿದೆ. ಭೂ ಪರಿವರ್ತನೆಯ ಕಾನೂನು ಸರಳಗೊಳಿಸುವ ಜತೆಗೆ ಪ್ರಕ್ರಿಯೆಯನ್ನು ಆನ್‌ಲೈನ್‌ ನಲ್ಲಿ ನಡೆಸುವ ಮೂಲಕ ಪಾರದರ್ಶಕತೆಗೆ ಒತ್ತು ನೀಡಲಾಗಿದೆ,” ಎಂದರು.

ರಾಜಸ್ಥಾನ ಹಾಗೂ ಗುಜರಾತಿನಲ್ಲಿ ಬರಡು ಭೂಮಿ ಹೆಚ್ಚಿದ್ದು, ಅಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಯೆಥೇಚ್ಛವಾಗಿ ಭೂಮಿ ದೊರೆಯುತ್ತದೆ. ಕರ್ನಾಟಕದಲ್ಲಿ ಫಲವತ್ತಾದ ಕೃಷಿ ಭೂಮಿ ಹೆಚ್ಚಿದ್ದು, ಕೃಷಿಯೇತರ ಭೂಮಿ ಲಭ್ಯತೆ ಕಡಮೆ ಇದ್ದರೂ, ನವೀಕರಿಸಬುದಾದ ಯೋಜನೆಗಳ ಅನುಷ್ಠಾನದಲ್ಲಿ ನಾವು ಹಿಂದೆ ಉಳಿದಿಲ್ಲ ಎಂಬದು ಹೆಮ್ಮೆಯ ವಿಷಯ. ಇಂಧನ ಸಚಿವರಾದ ಕೆ.ಜೆ ಜಾರ್ಜ್‌ ಅವರೂ ನವೀಕರಿಸಬಹುದಾದದ ಯೋಜನೆಗಳ ಭೂ ಪರಿವರ್ತನೆಯ ಕಾನೂನು ಸರಳಗೊಳಿಸಲು ಕೋರಿ ಹಲವಾರು ಸಭೆಗಳನ್ನು ನಡೆಸಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಮೆಗಾ ಇಂಜಿನಿಯರಿಂಗ್ ಅಂಡ್‌ ಇನ್ ಫ್ರಾಸ್ಟ್ರಕ್ಷನ್‌ ಕಂಪನಿಯ ಸಿಇಓಗೆ ಸ್ವಯಂ ಚಾಲಿತ ಭೂ ಪರವರ್ತನೆಯ ದಾಖಲೆಗಳನ್ನು ಕಂದಾಯ ಸಚಿವರು ಹಸ್ತಾಂತರಿಸಿದರು. ತಂತ್ರಾಂಶ ಚಾಲನೆಗೂ ಮೊದಲು ನವೀಕರಿಸಬಹುದಾದ ಇಂಧನ ಸಂಸ್ಥೆಗಳ ಮುಖ್ಯಸ್ಥರು, ನವೀಕರಿಸಬಹುದಾದ ಇಂಧನ ಸಂಸ್ಥೆಗಳ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಸಚಿವರು ಮತ್ತು ಅಧಿಕಾರಿಗಳು ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ಕ್ರೆಡಲ್‌ ಅಧ್ಯಕ್ಷ ಟಿ.ಡಿ ರಾಜೇಗೌಡ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ, ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ, ಕಂದಾಯ ಇಲಾಖೆ ಆಯುಕ್ತರಾದ ಮೀನಾ ನಾಗರಾಜ್‌, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್‌.ಶಿವಶಂಕರ್‌, ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಉಪಸ್ಥಿತರಿದ್ದರು.

ನವೀಕರಿಸಬಹುದಾದ ಇಂಧನ ಯೋಜನೆಗಳ ಅನುಷ್ಠಾನಕ್ಕೆ ಭೂಮಿ ಪಡೆಯಲು ಎದುರಾಗಿದ್ದ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದೆ. ಈ ನಿಟ್ಟಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ಕ್ಕೆ ಕಳೆದ 3 ವರ್ಷಗಳಲ್ಲಿ ತರಲಾದ ತಿದ್ದುಪಡಿಗಳ ಅನ್ವಯ ಹೊಸ ನಿಯಮಗಳನ್ನು ರಚಿಸಿ ಸರಕಾರ ಅಧಿಸೂಚನೆ ಹೊರಡಿಸಿತು. ಅದರಂತೆ ನವೀಕರಿಸಬಹುದು ಇಂಧನ ಘಟಕಗಳ ಸ್ಥಾಪೆಗೆ ಭೂಪರಿವರ್ತನೆಯಿದ ವಿನಾಯಿತಿ ನೀಡಲಾಗಿದ್ದು, ಪರಿಭಾವಿತ (ಡೀಮ್ಡ್‌) ಭೂ ಪರಿವರ್ತನೆಗೆ 30 ದಿನಗಳ ಗಡುವು ನಿಗದಿ ಮಾಡಲಾಗಿದೆ. ಭೂ ಪರಿವರ್ತನೆಗೆ ಆನ್‌ಲೈನ್‌ ಮೂಲಕ ಸಲ್ಲಿಕೆಯಾದ ಅರ್ಜಿಗಳಿಗೆ ಆಯಾ ಜಿಲ್ಲೆ ಜಿಲ್ಲಾಧಿಕಾರಿಗಳು 30 ದಿನಗಳಿಗೆ ಅನುಮತಿ ನೀಡಬೇಕು. ದಾಖಲೆಗಳು ಸರಿ ಇಲ್ಲದಿದ್ದರೆ ಸಕಾರಣ ನೀಡಿ, ಅರ್ಜಿ ತಿರಸ್ಕರಿಸಬಹುದು. ನಿಗದಿತ ಅವಧಿಯೊಳಗ ನಿರ್ಧಾರ ತೆಗೆದುಕೊಳ್ಳದಿದ್ದರೆ ಸ್ವಯಂ ಚಾಲಿತವಾಗಿ ಭೂಮಿ ಪರಿವರ್ತನೆ ಆಗುತ್ತದೆ.

-ಕೆ.ಜೆ.ಜಾರ್ಜ್‌, ಇಂಧನ ಸಚಿವರು

ಈಸ್‌ ಆಪ್‌ ಲ್ಯಾಡ್‌ ಉಪಕ್ರಮವು ದೇಶದಲ್ಲೇ ಒಂದು ಮಾದರಿ ವ್ಯವಸ್ಥೆಯಾಗಿದ್ದು, ನವೀಕರಿಸಬಹುದಾದ ಇಂಧನ ವಲಯದ ಉದ್ಯಮಿಗಳು ಈ ತಂತ್ರಾಂಶ ಅಳವಡಿಸಿಕೊಂಡು ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರೆ ಮತ್ತಷ್ಟು ಸುಧಾರಣೆ ತರಲು ಸಾಧ್ಯ. ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳ ಅನಷ್ಠಾನಕ್ಕೆ ನೋಡಲ್‌ ಏಜೆನ್ಸಿಯಾದ ಕ್ರೆಡಲ್‌ ಸಹ ಆನ್‌ಲೈನ್‌ ಪ್ರಕ್ರಿಯೆಗೆ ಒತ್ತು ನೀಡುತ್ತದೆ.

-ಗೌರವ್‌ ಗುಪ್ತ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ

ನಕಲಿ ದಾಖಲೆ ಸೃಷ್ಠಿಸಿ ಸರ್ಕಾರಿ ಭೂಮಿ ಮಂಜೂರು ಪ್ರಕರಣ: ತಾಲ್ಲೂಕು ಕಚೇರಿಗೆ ED ಅಧಿಕಾರಿಗಳು ಭೇಟಿ, ದಾಖಲೆ ಪರಿಶೀಲನೆ

ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೆ ಮುನ್ನವೇ ಕಾಡ್ಗಿಚ್ಚು ನಿಯಂತ್ರಣಕ್ಕೆ ಈ ಖಡಕ್ ಸೂಚನೆ ಕೊಟ್ಟ ಸಚಿವ ಈಶ್ವರ್ ಖಂಡ್ರೆ

Share. Facebook Twitter LinkedIn WhatsApp Email

Related Posts

KUWJ ಸಂಘದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

14/03/2026 10:50 PM1 Min Read

ಹಿಂದುಳಿದ ಸಮಾಜದ ಎಂ.ಡಿ.ಆನಂದ್, ಸಾಗರದ ಮಾರಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಸೃಷ್ಟಿಯಾಗಲಿದೆಯೇ ಹೊಸ ಇತಿಹಾಸ?

14/03/2026 10:41 PM2 Mins Read

ಕರ್ನಾಟಕದಲ್ಲಿ ಎಲ್‌ಪಿಜಿ ಅಭಾವ ಎಫೆಕ್ಟ್; ‘ಇಂದಿರಾ ಕ್ಯಾಂಟೀನ್’​​ಗಳು ಬಂದ್ ಭೀತಿ!

14/03/2026 9:08 PM1 Min Read
Recent News

KUWJ ಸಂಘದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

14/03/2026 10:50 PM

ಹಿಂದುಳಿದ ಸಮಾಜದ ಎಂ.ಡಿ.ಆನಂದ್, ಸಾಗರದ ಮಾರಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಸೃಷ್ಟಿಯಾಗಲಿದೆಯೇ ಹೊಸ ಇತಿಹಾಸ?

14/03/2026 10:41 PM

ನಿಮ್ಮ ಮನೆಯಲ್ಲಿರುವ ‘ಇಲಿ’ಗಳನ್ನ ಕೊಲ್ಲದೇ ಓಡಿಸೋದು ಹೇಗೆ ಗೊತ್ತಾ? ಕೇವಲ 10 ರೂ.ಗೆ ಶಾಶ್ವತ ಪರಿಹಾರ!

14/03/2026 10:05 PM

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರನ್ ಔಟ್ ಡ್ರಾಮಾ ; ಪಾಕ್ ಆಟಗಾರ ‘ಸಲ್ಮಾನ್ ಆಘಾ’ಗೆ ‘ICC’ ಶಿಕ್ಷೆ!

14/03/2026 10:01 PM
State News
KARNATAKA

KUWJ ಸಂಘದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

By kannadanewsnow0914/03/2026 10:50 PM KARNATAKA 1 Min Read

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಸದಸ್ಯತ್ವವನ್ನು ಪಡೆಯಲು ಇಚ್ಛಿಸುವ ಅರ್ಹ ಪತ್ರಕರ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯದ ಎಲ್ಲಾ…

ಹಿಂದುಳಿದ ಸಮಾಜದ ಎಂ.ಡಿ.ಆನಂದ್, ಸಾಗರದ ಮಾರಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಸೃಷ್ಟಿಯಾಗಲಿದೆಯೇ ಹೊಸ ಇತಿಹಾಸ?

14/03/2026 10:41 PM

ಕರ್ನಾಟಕದಲ್ಲಿ ಎಲ್‌ಪಿಜಿ ಅಭಾವ ಎಫೆಕ್ಟ್; ‘ಇಂದಿರಾ ಕ್ಯಾಂಟೀನ್’​​ಗಳು ಬಂದ್ ಭೀತಿ!

14/03/2026 9:08 PM

ಮಂಡ್ಯ ಜಿಲ್ಲೆಯಲ್ಲಿ ಅನಿಲ ಸರಬರಾಜು ವ್ಯತ್ಯಯ ಆತಂಕ ಬೇಡ; ಜಿಲ್ಲಾಧಿಕಾರಿಗಳ ಅಭಯ

14/03/2026 9:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.