ಗದಗ: ಜಿಲ್ಲೆಯಲ್ಲಿ ಪ್ರಾಚೀನ ಆಭರಣ ದೊರೆತಂತ ಸ್ಥಳದಲ್ಲಿ ಉತ್ಖನನ ಕಾರ್ಯ ನಡೆಸಲಾಗುತ್ತಿದೆ. ಇಂದು ಲಕ್ಕುಂಡಿಯಲ್ಲಿ ಮತ್ತೊಂದು ಅಪರೂಪದ ವಸ್ತು ಪತ್ತೆಯಾಗಿದೆ.
ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮತ್ತೊಂದು ಅಪರೂಪದ ವಸ್ತು ಪತ್ತೆಯಾಗಿದೆ. ಅದನ್ನು ಪಚ್ಚೆ ಕಲ್ಲು ಎಂಬುದಾಗಿ ಹೇಳಲಾಗುತ್ತಿದೆ. ಹೀಗಾಗಿ ಕೆಲ ಗಂಟೆಗಳ ಮೊದಲು ಲೋಹದ ವಸ್ತುವೊಂದು ಪತ್ತೆಯಾಗಿತ್ತು. ಇದೀಗ ಪಚ್ಚೆ ಕಲ್ಲು ಪತ್ತೆಯಾಗಿದೆ.
ಕೆಲ ದಿನಗಳ ಹಿಂದೆ ಲಕ್ಕುಂಡಿಯ ವೀರಭದ್ರೇಶ್ವ ದೇವಾಲಯದ ಬಳಿಯಲ್ಲಿ ಮನೆ ನಿರ್ಮಾಣಕ್ಕೆ ಪಾಯ ತೆಗೆಯುತ್ತಿದ್ದಂತ ಸಂದರ್ಭದಲ್ಲಿ ಪ್ರಾಚೀನ ಬಂಗಾರ ದೊರೆತಿತ್ತು. ಆ ಬಳಿಕ ಅದನ್ನು ಸಂರಕ್ಷಿತ ಸ್ಥಳವಾಗಿ ಪುರಾತತ್ವ ಇಲಾಖೆ ಗುರುತಿಸಿ, ಉತ್ಖನನಕ್ಕೆ ನಿರ್ಧರಿಸಿತ್ತು.
ಅದರಂತೆ ಉತ್ಖನನ ಕಾರ್ಯ ನಡೆಸಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ನಡೆಯತ್ತಿರುವಂತ ಉತ್ಖನನದ ವೇಳೆಯಲ್ಲಿ ಐತಿಹಾಸಿಕ ಅಪರೂಪದ ವಸ್ತುಗಳೇ ಪತ್ತೆಯಾಗುತ್ತಿವೆ.
BREAKING: ಪೌರಾಯುಕ್ತಗೆ ನಿಂದನೆ, ಬೆದರಿಕೆ: ಕಾಂಗ್ರೆಸ್ ಪಕ್ಷದಿಂದ ರಾಜೀವ್ ಗೌಡ ಅಮಾನತುಗೊಳಿಸಿ ಕೆಪಿಸಿಸಿ ಆದೇಶ
ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೆ ಮುನ್ನವೇ ಕಾಡ್ಗಿಚ್ಚು ನಿಯಂತ್ರಣಕ್ಕೆ ಈ ಖಡಕ್ ಸೂಚನೆ ಕೊಟ್ಟ ಸಚಿವ ಈಶ್ವರ್ ಖಂಡ್ರೆ








