ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಎಸಗಿರೋ ಘಟನೆ ನಡೆದಿದೆ. ಹೂವು ಮಾರುತ್ತಿದ್ದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ.
ಹೂವು ಮಾರುತ್ತಿದ್ದಂತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವನ್ನು ಆಟೋ ಚಾಲಕ ಎಸಗಿದ್ದಾನೆ. ಟ್ರಾಫಿಕ್ ಸಿಗ್ನಲ್ ಬಳಿ ಹೂವು ಮಾರುತ್ತಿದ್ದಂತ 11 ವರ್ಷದ ಬಾಲಕಿಯನ್ನು ಅಪಹರಿಸಿ ಈ ಕೀಚಕ ಕೃತ್ಯ ಎಸಗಲಾಗಿದೆ,.
ಸಿಗ್ನಲ್ ನಲ್ಲಿ ಹೂ ಮಾರುತ್ತಿದ್ದಂತ ಬಾಲಕಿಯನ್ನು ಅಪಹರಿಸಿದಂತ ಆಟೋ ಚಾಲಕ, ಕಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ವಿಷಯ ತಿಳಿದು ಸ್ಥಳಕ್ಕೆ ತೆರಳಿದಂತ ಪೊಲೀಸರು ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಸಾಗರದ ‘ಗಣಪತಿ ದೇವಸ್ಥಾನ’ಕ್ಕೆ ಹರಿದು ಬಂದ ಕಾಣಿಕೆ: ಈ ಬಾರಿ ಹುಂಡಿಯಲ್ಲಿ ‘9 ಲಕ್ಷ’ಕ್ಕೂ ಹೆಚ್ಚು ಹಣ ಸಂಗ್ರಹ








