ಶಿವಮೊಗ್ಗ : ಗಾಂಜಾ ನಿಷೇದಿಸುವಂತೆ ವೀರಾವೇಶದ ಪ್ರತಿಭಟನೆ ಮಾಡಿದ ಮಾಜಿ ಶಾಸಕ ಹರತಾಳು ಹಾಲಪ್ಪ ಪ್ರತಿಭಟನೆಯಲ್ಲಿ ಓಸಿ ಮಟ್ಕಾ ನಿಲ್ಲಿಸಿ ಎಂದು ಏಕೆ ಹೇಳಿಲ್ಲ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಪ್ರಶ್ನೆ ಮಾಡಿದ್ದಾರೆ.
ಇಂದು ಶಿವಮೊಗ್ಗದ ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಓಸಿ ದಂಧೆ ಮಾಡುವ ಕಿಂಗ್‌ಪಿನ್ ಆಡಿಸಿ ಇಡೀ ಕುಟುಂಬ ಹಾಳು ಮಾಡುವವರ ಬಗ್ಗೆ ಮಾತನಾಡುವುದಿಲ್ಲ. ಮೊದಲು ಅದರ ಬಗ್ಗೆ ಬಿಜೆಪಿಯವರು ಮಾತನಾಡಲಿ ಎಂದು ಸವಾಲು ಹಾಕಿದರು.
ಸಾಗರ ತಾಲ್ಲೂಕಿನಲ್ಲಿ ಓಸಿ ಮಟ್ಕಾ, ಗಾಂಜಾ ಇಸ್ಪೀಟ್ ಸಂಪೂರ್ಣವಾಗಿ ನಿಷೇಧಿಸುವಂತೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದ್ದೇನೆ. ಇದಕ್ಕೆ ಅವರು ಪೂರಕವಾಗಿ ಸ್ಪಂದಿಸಿ, ಅಂತಹವರನ್ನು ರೌಡಿಲೀಸ್ಟ್ಗೆ ಸೇರಿಸುವುದರ ಜೊತೆಗೆ ಗಡಿಪಾರು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಬಿಜೆಪಿಯವರ ಪ್ರತಿಭಟನೆ ಹುರುಳಿಲ್ಲದ್ದು, ಹೊಸನಗರದಲ್ಲಿ ನಮ್ಮ ಪಕ್ಷದ ಮಾಧವ ಶೆಟ್ಟಿ ಎಂಬುವವರಿಗೆ ಜೀವ ಹೋಗುವಂತೆ ಹೊಡೆದಿದ್ದಾರೆ. ಹಾಲಪ್ಪ ಎಲ್.ಬಿ.ಕಾಲೇಜು ಗಲಾಟೆಯಲ್ಲಿ ಬ್ರಾಹ್ಮಣ ಮತ್ತು ಲಿಂಗಾಯಿತ ಮುಖಂಡರಿಗೆ ಹೊಡೆದ ವಿಡಿಯೋಗಳು ನಮ್ಮ ಬಳಿ ಇದೆ. ಹಾಗಾದರೆ ಇವರು ಹಲ್ಲೆ ಮಾಡಿದ್ದನ್ನೆಲ್ಲಾ ನೋಡಿಕೊಂಡು ಸುಮ್ಮನೆ ಕುಳಿತು ಕೊಳ್ಳಲು ಆಗುತ್ತದೆಯಾ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶ್ನಿಸಿದರು.
ಇವರ ಅವಧಿಯಲ್ಲಿ ಮೂಲೆಮೂಲೆಗೆ ಎಣ್ಣೆ ಅಂಗಡಿ ಕೊಟ್ಟು ಕುಟುಂಬ ಹಾಳು ಮಾಡಿದ್ದಾರೆ. ಇವರ ಕಾಲದಲ್ಲೂ ವಿದ್ಯುತ್ ಸಮಸ್ಯೆ ಇತ್ತು, ರೈತರು ಪ್ರತಿಭಟನೆ ಮಾಡಿದ್ದಾರೆ. ತಾನೊಬ್ಬ ಮಾಜಿ ಶಾಸಕ ಇದ್ದೇನೆ ಎಂದು ತೋರಿಸಲು ಹರತಾಳು ಹಾಲಪ್ಪ ಈ ಹೋರಾಟ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ನಾನು ಅಮ್ಮನ ದುಡ್ಡು ತಿನ್ನೋದಿಲ್ಲ, ಹಾಗೆ ಅಂದವರು ನರಕಕ್ಕೆ ಹೋಗ್ತಾರೆ: ಶಾಸಕ ಗೋಪಾಲಕೃಷ್ಣ ಬೇಳೂರು
BREAKING: ರಾಜ್ಯದಲ್ಲಿ ವಾಹನಗಳ FC, ಸಾಗರೇತರ ನೋಂದಣಿ ನವೀಕರಣಕ್ಕೆ ಮಾರ್ಗಸೂಚಿ ಪ್ರಕಟ: ಈ ನಿಯಮ ಪಾಲನೆ ಕಡ್ಡಾಯ








