ಬೆಂಗಳೂರು: ಈ ಬಾರಿ ದೆಹಲಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡಿರಲ್ಲ ಎನ್ನಲಾಗಿತ್ತು. ಆದರೇ ಇದೀಗ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ಥಬ್ತಚಿತ್ರ ಭಾಗಿಯಾಗುವುದಾಗಿ ತಿಳಿದು ಬಂದಿದೆ.
ಕರ್ನಾಟಕ ವಾರ್ತಾ ಇಲಾಖೆಯಿಂದ ಸಿದ್ಧಪಡಿಸಿದಂತ ಸಿರಿಧಾನ್ಯಗಳ ಸಂಪತ್ತು ಅನಾವರಣಗೊಳ್ಳಲಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ಸಿರಿಧಾನ್ಯಗಳ ಸಂಪತ್ತು ಟ್ಯಾಬ್ಲೋ ಅನಾವರಣಗೊಳ್ಳಲಿದೆ.
ಮಿಲೆಟ್ಸ್ ಟು ಮೈಕ್ರೋಚಿಪ್ ಪರಿಕಲ್ಪನೆಯಲ್ಲಿ ತಯಾರಾಗಿರುವ ಸ್ತಬ್ಧಚಿತ್ರ ಇದಾಗಿದೆ. ಕರ್ನಾಟಕದ ಬೆಳಗಳಾದ ರಾಗಿ, ಜೋಳ, ನವಣೆ, ಸಜ್ಜೆ ಬೆಳೆ ಬಗ್ಗೆ ಟ್ಯಾಬ್ಲೋ ಇದಾಗಿದೆ. ಕರ್ನಾಟಕದ ಮಾಹಿತಿ ತಂತ್ರಜ್ಞಾನ ಬೆಳವಣಿಗೆ ಕುರಿತು ಟ್ಯಾಬ್ಲೋ ಮಾಹಿತಿ ನೀಡಲಿದೆ. ಗಣರಾಜ್ಯೋತ್ಸವ ದಿನ ದೆಹಲಿಯ ಕರ್ತವ್ಯ ಪಥದಲ್ಲಿ ಟ್ಯಾಬ್ಲೋ ಸಾಗಲಿದೆ.
BREAKING: ಶಿಡ್ಲಘಟ್ಟ ಪೌರಾಯುಕ್ತೆಗೆ ಧಮ್ಕಿ ಕೇಸ್: ಕಾಂಗ್ರೆಸ್ ಪಕ್ಷದಿಂದ ರಾಜೀವ್ ಗೌಡ ಅಮಾನತ್ತಿಗೆ ಶಿಫಾರಸ್ಸು
BREAKING: ರಾಜ್ಯದಲ್ಲಿ ವಾಹನಗಳ FC, ಸಾಗರೇತರ ನೋಂದಣಿ ನವೀಕರಣಕ್ಕೆ ಮಾರ್ಗಸೂಚಿ ಪ್ರಕಟ: ಈ ನಿಯಮ ಪಾಲನೆ ಕಡ್ಡಾಯ








