ಬೆಂಗಳೂರು: ಜನವರಿ.14, 2026ರಂದು ಬಿಎಂಟಿಸಿ ಬಸ್ ಮಾರ್ಗ 375D/18ರಲ್ಲಿ ಅಪರೂಪದ ಘಟನೆ ನಡೆದಿದೆ. ರಾತ್ರಿ ತಂಗುವ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಒಬ್ಬ ವಯಸ್ಕ ಪ್ರಯಾಣಿಕರು ಫೋನ್ ಪೇ ಮೂಲಕ ಟಿಕೆಟ್ ಶುಲ್ಕ ಪಾವತಿಸುವಾಗ ಅಚಾತುರ್ಯದಿಂದ ರೂ.6ರ ಬದಲಾಗಿ ರೂ.62,316 ಪಾವತಿಸಿದ್ದನು. ಆದರೇ ಕಂಡಕ್ಟರ್ ಮಾಡಿದಂತ ಆ ಕಾರ್ಯದಿಂದ ಭಾರೀ ಮೆಚ್ಚುಗೆಯೇ ವ್ಯಕ್ತವಾಗಿದೆ. ಆ ಬಗ್ಗೆ ಮುಂದೆ ಓದಿ..
ದಿನಾಂಕ 14-01-2026ರಂದು ಬಿಎಂಟಿಸಿ ಬಸ್ಸನ್ನು ರಾತ್ರಿ 8.30ರ ಸುಮಾರಿಗೆ ಪ್ರಯಾಣಿಕರೊಬ್ಬರು ಏರಿದ್ದರು. ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರ ಆಧಾರ್ ಪರಿಶೀಲಿಸಿ ಉಚಿತ ಪ್ರಯಾಣ ಚೀಟಿ ನೀಡಲಾಗುತ್ತಿತ್ತು. ಇದೇ ವೇಳೆ ಓರ್ವ ಪ್ರಯಾಣಿಕ ಫೋನ್‌ಪೇ ಮೂಲಕ 6 ರೂಪಾಯಿ ಟಿಕೆಟ್ ದರ ಪಾವತಿಸುವ ಬದಲು , ತಪ್ಪಾಗಿ ₹62,316 ಪಾವತಿಸಿದ್ದಾರೆ. ಪ್ರಯಾಣಿಕರು ವಿಷಯವನ್ನು ಗಮನಕ್ಕೆ ತಂದ ಕೂಡಲೇ ಕಂಡಕ್ಟರ್ ಪರಿಶೀಲನೆ ನಡೆಸಿದ್ದು, ಹಣ ತಪ್ಪಾಗಿ ವರ್ಗಾಯಿಸಿರುವುದು ದೃಢಪಟ್ಟಿತ್ತು.
ಕಂಡಕ್ಟರ್ ಪ್ರಯಾಣಿಕರಿಗೆ ಆತಂಕಪಡಬೇಡಿ ಎಂದು ಭರವಸೆ ನೀಡಿ, ಹಣ ಮರುಪಾವತಿ ಪ್ರಕ್ರಿಯೆಯ ಕುರಿತು ವಿವರವಾಗಿ ಮಾಹಿತಿ ನೀಡುತ್ತಾರೆ. ಇದರಿಂದಾಗಿ ತಪ್ಪಾಗಿ ರೂ.62,316 ಹಣ ಪಾವತಿಸಿದಂತ ಪ್ರಯಾಣಿಕ ಕೊಂಚ ನಿರಾಳರಾಗುತ್ತದೆ. ಆ ಬಳಿಕ ಕಂಡಕ್ಟರ್ ತಮ್ಮ ಸಂಪರ್ಕ ಸಂಖ್ಯೆಯೊಂದಿಗೆ ಘಟಕದ ವಿಳಾಸವನ್ನೂ ನೀಡಿದ್ದಲ್ಲದೇ, ಘಟಕದ ವ್ಯವಸ್ಥಾಪಕರ ಗಮನಕ್ಕೆ ವಿಷಯ ತರುತ್ತಾರೆ.
ಹಣ ಕಳೆದುಕೊಂಡಿದ್ದರೂ ಪ್ರಯಾಣಿಕ ಯಾವುದೇ ಗದ್ದಲ ಅಥವಾ ಅಸಮಾಧಾನ ತೋರಿಸದೆ ಸಹನಶೀಲತೆಯಿಂದ ವರ್ತಿಸುತ್ತಾರೆ. ಅವರ ನಡವಳಿಕೆ ಸಾರ್ವಜನಿಕರಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ರಾತ್ರಿ ಮನೆಗೆ ತಲುಪಿದ ಬಳಿಕವೂ ಅವರು ವಾಟ್ಸಪ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯುತ್ತಾರೆ. ಇದಾದ ಬಳಿಕ ಸಾರಿಗೆ ಸಂಸ್ಥೆಯ ನಿಯಮಾನುಸಾರ ತಪ್ಪಾಗಿ ರೂ.62,316 ಹಣ ಪಾವತಿಸಿದ ಬಗ್ಗೆ ಪ್ರಯಾಣಿಕ ಅಗತ್ಯ ದಾಖಲೆ ನೀಡಿದ್ದರಿಂದ ಅವರ ಹಣವನ್ನು ಬಿಎಂಟಿಸಿ ಮರು ಪಾವತಿಸಿದೆ.
ಇದೀಗ ಪ್ರಯಾಣಿಕನನ್ನು ತಪ್ಪಾಗಿ ಹಣ ಪಾವತಿಸಿದ ನಂತ್ರ ಬಿಎಂಟಿಸಿ ಬಸ್ ಕಂಡಕ್ಟರ್ ಸಮಾಧಾನಿಸಿ, ಅವರ ಹಣವನ್ನು ಹಿಂಪಡೆಯುವುದು ಹೇಗೆ ಎನ್ನುವ ಮಾಹಿತಿ ನೀಡಿದ್ದಲ್ಲದೇ, ಅವರಿಗೆ ಮರಳಿ ಹಣ ಪಾವತಿಸುವ ವ್ಯವಸ್ಥೆಯನ್ನು ಮೇಲಧಿಕಾರಿಗಳ ಮೂಲಕ ಮಾಡಿದ್ದಾರೆ. ಇಂತಹ ಬಿಎಂಟಿಸಿ ಕಂಡಕ್ಟರ್ ನಡೆಗೆ ಭಾರೀ ಮೆಚ್ಚುಗೆಯೇ ವ್ಯಕ್ತವಾಗಿದೆ.
ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ಯಾವುದೇ ಅರ್ಜಿ ಗ್ರಾಮ ಪಂಚಾಯ್ತಿಗೆ ಸಲ್ಲಿಸಿದ್ರೆ ಈ ಕರ್ತವ್ಯ ಕಡ್ಡಾಯ








