ಮಂಡ್ಯ : ನ್ಯಾಷನಲ್ ಲೀಡರ್ ಅಂತೆ ಪೋಸು ಕೊಟ್ಟು ಬರಿ ಪೇಪರ್ ಲೀಡರ್ ರಂತೆ ಮಾತನಾಡಿರುವ ಆರ್.ಅಶೋಕ್ ರವರು ಕಳೆದ ಚುನಾವಣೆಯಲ್ಲಿ ಕನಕಪುರದಲ್ಲಿ ಠೇವಣಿಯನ್ನೂ ಕಳೆದುಕೊಂಡಿದ್ರು ಇಲ್ಲಿ ಬಂದು ನನ್ನ ಬಗ್ಗೆ ಮಾತನಾಡಿದ್ದಾರೆ, ಮುಂದಿನ ಚುನಾವಣೆಯಲ್ಲಿ ಅವರ ಕ್ಷೇತ್ರವಾದ ಪದ್ಮನಾಭನಗರಕ್ಕೆ ಹೋಗಿ ಚುನಾವಣೆ ಮಾಡುತ್ತೇನೆ ಎಂದು ಶಾಸಕ ಉದಯ್ ಸವಾಲ್ ಹಾಕಿದರು.
ಪದ್ಮನಾಭನಗರದಲ್ಲಿ ಬೇರೆ ಬೇರೆ ರೀತಿಯ ಅಡ್ಜಸ್ಟ್ ಮೆಂಟ್ ರಾಜಕೀಯ ಇದೆ. ಒಬ್ಬ ನಾಯ್ಡು ನಿಲ್ಲಿಸಿದ್ರೆ ಮತ್ತೋಬ್ಬ ನಾಯ್ಡು ಗೆ ದುಡ್ಡು ಕೊಟ್ಟು ನಿಲ್ಲಿಸ್ತಾರೆ. ವಿಪಕ್ಷ ನಾಯಕ ಬಿಟಿಎಂ ಲೇಔಟ್ ಗೆ ಹೋಗಿ ಸ್ಪರ್ಧಿಸಿ ಗೆದ್ದು ತೋರಿಸಲಿ ನಾನು ಅಲ್ಲಿ ಹೋಗಿ ಚುನಾವಣೆಗೆ ಸ್ಪರ್ಧಿಸಲ್ಲ ಆದರೆ, ಆರ್.ಅಶೋಕ್ ವಿರುದ್ಧ 2028 ರ ಚುನಾವಣೆ ಮಾಡ್ತಿನಿ ಎಂದು ಶಾಸಕ ಉದಯ್ ಸವಾಲ್ ಹಾಕಿದರು.
ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಒಂದು ಪಂಚಾಯಿತಿ, ಕಾರ್ಪೋರೇಷನ್ ಚುನಾವಣೆಯಲ್ಲಿ ನಿಂತು ಗೆಲ್ಲೋದಕ್ಕೆ ಯೋಗ್ಯತೆ ಇಲ್ಲದವರು ನನ್ನನ್ನ ಫಾರಿನ್ ಶಾಸಕ ಅಂತ ಮಾತಾಡ್ತಾರೆ. ಅವರಿಗೆ ತಾಕತ್ತು ಇದ್ದರೆ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಜನಪ್ರತಿಯಾಗಲಿ ಎಂದು ಟೀಕಾಪ್ರಹಾರ ಮಾಡಿದರು.
ವರದಿ : ಗಿರೀಶ್ ರಾಜ್, ಮಂಡ್ಯ
ಯಾವುದೇ ರಾಜಕೀಯ ಪಕ್ಷಗಳ ಪ್ರೇರಿತದಿಂದ ಹೋರಾಟ ಮಾಡುತ್ತಿಲ್ಲ: ಮದ್ದೂರು ರೈತ ನಾಯಕಿ ಸುನಂದಾ ಜಯರಾಂ
ಟ್ರಸ್ಟ್ ಸುಪರ್ದಿಗೆ ತೋಪಿನ ತಿಮ್ಮಪ್ಪ ದೇವಸ್ಥಾನ ನೀಡಿ; ಮದ್ದೂರಿನ ಆಬಲವಾಡಿ ಗ್ರಾಮಸ್ಥರ ಆಗ್ರಹ








