ಬೆಂಗಳೂರು : ಬೆಂಗಳೂರಲ್ಲಿ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇದೀಗ ಪ್ರಕರಣದ ಚಾರ್ಜ್ ಶೀಟ್ ತಯಾರಿಸಿದ್ದಾರೆ. ನಾಳೆ ಬೆಂಗಳೂರಿನ ACJM ಕೋರ್ಟ್ ಗೆ ಸುಮಾರು 1,200 ಪುಟಗಳ ಚಾರ್ಜ್ ಶೀಟ್ ಅನ್ನು ಪೊಲೀಸರು ಸಲ್ಲಿಸಲಿದ್ದಾರೆ.
ಕೃತಿಕಾ ಪತಿ ಮಹೇಂದ್ರ ರೆಡ್ಡಿ ವಿರುದ್ಧ ಚಾರ್ಜ್ ಶೀಟ್ ತಯಾರಿಸಿದ್ದು ಶುಕ್ರವಾರ ಅಂದರೆ ನಾಳೆ ಎಸಿಜೆಎಂ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ. ಸುಮಾರು 1,200 ಪುಟಗಳ ಚಾರ್ಜಿಶೀಟ್ ಇದೀಗ ಪೊಲೀಸರು ಸಿದ್ಧಪಡಿಸಿದ್ದಾರೆ. ಮಾರತಹಳ್ಳಿ ಪೊಲೀಸರಿಂದ ಚಾರ್ಜ್ ಶೀಟ್ ರೆಡಿ ಮಾಡಿದ್ದು ಎಸ್ಟಿಪಿ ಪ್ರಸನ್ನ ಕುಮಾರ್ ಅದನ್ನು ಪರಿಶೀಲನೆ ಮಾಡಲಿದ್ದಾರೆ. ಹಲವು ಅಂಶಗಳು ಈ ಒಂದು ವಿಚಾರ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಚಾರ್ಜ್ ಶೀಟ್ ನಲ್ಲಿ ಹಲವು ಪ್ರಮುಖ ಅಂಶಗಳ ಉಲ್ಲೇಖ ಆಗಿದ್ದು 72ಕ್ಕೂ ಹೆಚ್ಚು ಸಾಕ್ಷಿಗಳನ್ನು ಸಂಗ್ರಹಿಸಿದ ಬಗ್ಗೆ ಉಲ್ಲೇಖವಾಗಿದೆ.
ಕೃತಿಕಾಗೆ ನೀಡಿದ್ದ ಅನಸ್ತೇಷಿಯ ಖರೀದಿಸಿದ ಮಾಹಿತಿ, ಮೆಡಿಕಲ್ ಸ್ಟೋರ್ ಗೆ ಹೋಗಿದ್ದ ಸಿಸಿಟಿವಿ ದೃಶ್ಯಾವಳಿ, ಆರೋಪಿ ಮಹೇಂದ್ರ ರೆಡ್ಡಿ ಔಷಧ ಖರೀದಿಸಿದ ದಾಖಲೆ ಹಾಗೂ ಅನಸ್ತೇಶಿಯ ಖರೀದಿಗೆ ಯುಪಿಐ ಹಣ ಪಾವತಿ ವಿವರ ಇವೆಲ್ಲ ಅಂಶಗಳು ಉಲ್ಲೇಖವಾಗಿದೆ. ಜೊತೆಗೆ ಕೃತಿಕಾ ಕೊಲೆ ಬಗ್ಗೆ ಫೋನ್ ಪೇ ಮೂಲಕ ಚಾಟಿಂಗ್ ಮಾಡಿದ್ದು ಅದರ ವಿವರ ಕೂಡ ಚಾರ್ಜ್ ಶೀಟ್ ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಮಹೇಂದ್ರ ರೆಡ್ಡಿ ಚಾಟಿಂಗ್ ವಿವರ ಪೊಲೀಸರು ಮಾಡಿದ್ದಾರೆ. ಪ್ರಮುಖವಾಗಿ 8 ಮೆಸೇಜುಗಳಲ್ಲಿ ಕೊಲೆ ಸೀಕ್ರೆಟ್ ಅಡಗಿತ್ತು ಎನ್ನಲಾಗಿದೆ.








