ಬೆಂಗಳೂರು : ನಗರದ ಕುಮಾರಕೃಪಾ ರಸ್ತೆಯಲ್ಲಿನ ಚಿತ್ರಕಲಾ ಪರಿಷತ್ನಲ್ಲಿ ಆಯೋಜಿಸಿರುವ ಪ್ರತಿಷ್ಟಿತ 23ನೇ ಚಿತ್ರಸಂತೆಯನ್ನು ಕ್ವಾನ್ವಸ್ ಮೇಲೆ ಬರೆಯುವ ಮೂಲಕ ಸಿಎಂ ಸಿದ್ದರಾಮಯ್ಯ ಇಂದು ಉದ್ಘಾಟಿಸಿದರು. ಈ ಮೂಲಕ 8ನೇ ಬಾರಿ ಚಿತ್ರಸಂತೆಗೆ ಅವರು ಚಾಲನೆ ನೀಡಿದಂತಾಯಿತು.
ಬಳಿಕ ಮಾತನಾಡಿದ ಸಿಎಂ, ಅತ್ಯಂತ ಸಂತೋಷದಿದ 23ನೇ ಚಿತ್ರಸಂತೆ ಉದ್ಘಾಟಿಸಿದ್ದೇನೆ. ಇದು ನಾನು 8ನೇ ಬಾರಿ ಚಿತ್ರಸಂತೆಯಲ್ಲಿ ಭಾಗವಹಿಸುತ್ತಿರುವುದು. ಕಲಾವಿದರನ್ನು ಪ್ರೋತ್ಸಾಹಿಸಲು ಚಿತ್ರ ಪ್ರದರ್ಶನ ಹಾಗೂ ಮಾರಾಟದ ವೇದಿಕೆಯನ್ನು ಚಿತ್ರಕಲಾ ಪರಿಷತ್ ಅನೇಕ ವರ್ಷದಿಂದ ಮಾಡುತ್ತಿದೆ. 2003ರಲ್ಲಿ ಆರಂಭವಾಗಿದ್ದ ಚಿತ್ರಸಂತೆ ಇದೀಗ 23ನೇ ಚಿತ್ರಸಂತೆಯಾಗಿದೆ. 22 ರಾಜ್ಯ ಹಾಗೂ 4 ಕೇಂದ್ರಾಡಳಿತ ಪ್ರದೇಶದ ಕಲಾವಿದರು ಭಾಗಿಯಾಗಿದ್ದಾರೆ. ಕಲಾವಿದರು, ಜನರು ಸೇರಲು ಒಂದು ವೇದಿಕೆ ಬೇಕಾಗುತ್ತದೆ. ಅದನ್ನು ಚಿತ್ರಕಲಾ ಪರಿಷತ್ ಮಾಡ್ತಿದೆ. ನಾವು ಸಹಾಯ ಮಾಡುತ್ತಾ ಬಂದಿದ್ದೇವೆ. ಮುಂದೆಯೂ ಸಹಾಯ ಮಾಡ್ತೇವೆ ಎಂದು ಭರವಸೆ ನೀಡಿದರು.
ಟ್ವೀಟ್ ನಲ್ಲಿ ಸಹ ಸಿಎಂ ಸಿದ್ದರಾಮಯ್ಯ ಪೋಸ್ಟ್ ಹಂಚಿಕೊಂಡಿದ್ದು, ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ಆವರಣದಲ್ಲಿ ಇಂದು ಆಯೋಜಿಸಿದ್ದ ಚಿತ್ರಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಲಾವಿದರು ಪ್ರೀತಿಯಿಂದ ನೀಡಿದ ಕಲಾತ್ಮಕ ಉಡುಗೊರೆಗಳನ್ನು ಸ್ವೀಕರಿಸಿದೆ. ನಾಡಿನ ವಿವಿಧ ಕಲಾವಿದರ ಕೈಗಳಲ್ಲಿ ಅರಳಿರುವ ವರ್ಣಚಿತ್ರಗಳು, ಕಲಾಕೃತಿಗಳು ಅತ್ಯಂತ ಸೊಗಸಾಗಿವೆ. ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರಿನಂತಹ ವಾಣಿಜ್ಯ ನಗರದಲ್ಲಿ ಪ್ರತೀ ವರ್ಷ ಇಂತದ್ದೊಂದು ಸುಂದರ ಕಾರ್ಯಕ್ರಮವನ್ನು ಆಯೋಜಿಸುತ್ತ, ಕರಕುಶಲಕರ್ಮಿಗಳು, ವರ್ಣಚಿತ್ರಕಾರರ ವೈವಿದ್ಯಮಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತಿರುವುದು ಶ್ಲಾಘನೀಯ.
ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ಆವರಣದಲ್ಲಿ ಇಂದು ಆಯೋಜಿಸಿದ್ದ ಚಿತ್ರಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಲಾವಿದರು ಪ್ರೀತಿಯಿಂದ ನೀಡಿದ ಕಲಾತ್ಮಕ ಉಡುಗೊರೆಗಳನ್ನು ಸ್ವೀಕರಿಸಿದೆ.
ನಾಡಿನ ವಿವಿಧ ಕಲಾವಿದರ ಕೈಗಳಲ್ಲಿ ಅರಳಿರುವ ವರ್ಣಚಿತ್ರಗಳು, ಕಲಾಕೃತಿಗಳು ಅತ್ಯಂತ ಸೊಗಸಾಗಿವೆ. ಕರ್ನಾಟಕ ಚಿತ್ರಕಲಾ ಪರಿಷತ್ತು… pic.twitter.com/0SZPeisl3R
— Siddaramaiah (@siddaramaiah) January 4, 2026








