ಕಲಬುರ್ಗಿ : ಪಿಎಸ್ಐ ನೇಮಕಾತಿ ಹಗರಣದ ಕಿಂಗ್ ಪಿನ್ ಆದಂತಹ RD ಪಾಟೀಲ್ ಸದ್ಯ ಕಲಬುರ್ಗಿ ಸೆಂಟ್ರಲ್ ಜೈಲಿನಲ್ಲಿದ್ದು, ಸಿಬ್ಬಂದಿಗಳ ಜೊತೆ ಕಿರಿಕ್ ಮಾಡಿರುವ ಆರೋಪ ಹಿನ್ನೆಲೆ RD ಪಾಟೀಲನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಲ್ಬುರ್ಗಿಯ ಫರಹತಾಬಾದ್ ಪೊಲೀಸರು RD ಪಾಟೀಲನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಲ್ಬುರ್ಗಿ ಸೆಂಟ್ರಲ್ ಜೈಲು ಸಿಬ್ಬಂದಿ ತಪಾಸಣೆ ಹೋಗಿದ್ದಾಗ ಆರ್‌ಡಿ ಪಾಟೀಲ್ ಕಿರಿಕ್ ಮಾಡಿದ್ದಾನೆ ಜೈಲು ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ವಾರ ಸಿಬ್ಬಂದಿಗಳ ಜೊತೆಗೆ ಕಿರಿಕ್ ಮಾಡಿದ ಹಿನ್ನೆಲೆ ಜೈಲಾಧಿಕಾರಿಗಳು ಆತನ ವಿರುದ್ಧ ಕೆಎಸ್ ದಾಖಲಿಸಿದ್ದಾರೆ.








