ಬೆಂಗಳೂರು : ದೃಷ್ಟಿದೋಷವುಳ್ಳ/ದೃಷ್ಟಿಮಾಂದ್ಯ (Visually Impaired) ವಿದ್ಯಾರ್ಥಿಗಳಿಗೆ 2025-26 ನೇ ಸಾಲಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಡಿಜಿಟಲ್ ರೂಪದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ದೃಷ್ಟಿದೋಷವುಳ್ಳ/ದೃಷ್ಟಿಮಾಂದ್ಯ (Visually Impaired) ವಿದ್ಯಾರ್ಥಿಗಳಿಗೆ ಸಿ.ಬಿ.ಎಸ್.ಇ ಮಂಡಳಿಯಲ್ಲಿ ಕಂಪ್ಯೂಟರ್ಗಳನ್ನು ಬಳಸಿ 12ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯಲು ಅವಕಾಶವಿದ್ದು, ಅದೇ ರೀತಿ ರಾಜ್ಯ ಪಠ್ಯಕ್ರಮದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ದೃಷ್ಟಿದೋಷವುಳ್ಳ/ದೃಷ್ಟಿಮಾಂದ್ಯ (Visually Impaired) ವಿದ್ಯಾರ್ಥಿಗಳಿಗೆ 2025-26ನೇ ಸಾಲಿನಿಂದ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ವಿದ್ಯಾರ್ಥಿಗಳಿರುವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧಿಕ್ಷಕರು ಪರೀಕ್ಷಾ ಪೂರ್ವ ಹಾಗೂ ಪರೀಕ್ಷಾ ದಿನಗಳಂದು ಕೆಳಕಂಡಂತೆ ಕ್ರಮವಹಿಸಲು ತಿಳಿಸಿದೆ.
1. ಪರೀಕ್ಷಾ ಕೇಂದ್ರದಲ್ಲಿ ದೃಷ್ಟಿದೋಷವುಳ್ಳ/ದೃಷ್ಟಿಮಾಂದ್ಯ (Visually Impaired) ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮಾಡುವುದು.
2. ದೃಷ್ಟಿದೋಷವುಳ್ಳ/ದೃಷ್ಟಿಮಾಂದ್ಯ ಕಾಲೇಜುಗಳಲ್ಲಿ (Visually Impaired) ವಿದ್ಯಾರ್ಥಿಗಳಿರುವ ಕಾರ್ಯನಿರ್ವಹಿಸುವ ಮೇಲ್ವಿಚಾರಕರಾಗಿ ನೇಮಿಸಿಕೊಳ್ಳುವುದು. ವಿಶೇಷ ಉಪನ್ಯಾಸಕರನ್ನು ಕೊಠಡಿ
3. ಪರೀಕ್ಷೆಯ ದಿನದಂದು ಸದರಿ ವಿಷಯವನ್ನು ಬೋಧಿಸುವ ಉಪನ್ಯಾಸಕರನ್ನು ಕೊಠಡಿ ಮೇಲ್ವಿಚಾರಕರಾಗಿ ನೇಮಿಸಬಾರದು ಮತ್ತು ಅವರು ವಿದ್ಯಾರ್ಥಿಯ ಕಾಲೇಜಿನ ಉಪನ್ಯಾಸಕರಾಗಿರಬಾರದು.
4. ದೃಷ್ಟಿದೋಷವುಳ್ಳ/ದೃಷ್ಟಿಮಾಂದ್ಯ (Visually Impaired) ವಿದ್ಯಾರ್ಥಿಗಳು ಉತ್ತರಗಳನ್ನು ಬರೆಯಲು ಕಂಪ್ಯೂಟರ್ಗಳನ್ನು ಬಳಸಲು ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಇವರ ಪೂರ್ವಾನುಮತಿಯನ್ನು ಪಡೆಯಬೇಕು.
5. ಉತ್ತರಗಳನ್ನು ಟೈಪ್ ಮಾಡಲು ಮಾತ್ರ ಕಂಪ್ಯೂಟರ್ ಬಳಕೆ ಸೀಮಿತವಾಗಿರುತ್ತದೆ.
6. ಸಂಬಂಧಪಟ್ಟ ವಿದ್ಯಾರ್ಥಿಯು ತನ್ನ ಸ್ವಂತ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಅನ್ನು ತರುವುದು.
7. ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ಅನ್ನು ಸರಿಯಾಗಿ format ಮಾಡಿ ಪರೀಕ್ಷಾ ಕೇಂದ್ರಕ್ಕೆ ತರಬೇಕು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಅಂತಹ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಅನ್ನು ಕಂಪ್ಯೂಟರ್ ಜ್ಞಾನವುಳ್ಳ ಉಪನ್ಯಾಸಕರಿಂದ ತಪಾಸಣೆ ಮಾಡಿಸಿ ಸರಿಯಾಗಿ format ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಅಂತಹ ವಿದ್ಯಾರ್ಥಿಗೆ ತನ್ನ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಅನ್ನು ಬಳಸಲು ಅನುಮತಿಸಬೇಕು.









