ಮೈಸೂರು : ಮೈಸೂರಲ್ಲಿ ವಿಚಿತ್ರವದ ಘಟನೆಯೊಂದು ನಡೆದಿದ್ದು, ಪತ್ನಿ ಮರ್ಯಾದೆ ಕೊಡ್ಲಿಲ್ಲ ಅಂತ ಕೊಲೆಗೆ ಯತ್ನ ನಡೆದಿರುವ ಘಟನೆ ಮೈಸೂರಿನ ಬಿಎಂಶ್ರೀ ನಗರದಲ್ಲಿ ನಡೆದಿದೆ.
ಹೆಂಡತಿ ಹತ್ಯೆಗೆ ಪಾಪಿ ಪತಿ ಸುಪಾರಿ ನೀಡಿದ್ದಾನೆ. ಮೈಸೂರಿನ ಬಿಎಂಶ್ರೀ ನಗರದಲ್ಲಿ ಪತಿ ಮಹೇಶ್ ಈ ಒಂದು ಕೃತ್ಯ ಎಸಗಿದ್ದು, ಪತ್ನಿ ನಾಗರತ್ನ ಕೊಲೆಗೆ 5 ಲಕ್ಷ ಸುಪಾರಿ ಕೊಟ್ಟಿದ್ದಾನೆ. ಭಾಸ್ಕರ್ ಮತ್ತು ಅಭಿಷೇಕಗೆ ಮಹೇಶ್ ಸುಪಾರಿ ನೀಡಿದ್ದಾನೆ. ನಿನ್ನೆ ಮನೆಗೆ ನುಗ್ಗಿದ ಭಾಸ್ಕರ್ ಹಾಗು ಅಭಿಷೇಕ್ ನಾಗರತ್ನ ತಲೆಗೆ ಪಾಪಿಗಳು ಸುತ್ತಿಗೆಯಿಂದ ಹೊಡೆದಿದ್ದಾರೆ.
ಮನೆಗೆ ಎಂಟ್ರಿ ಕೊಟ್ಟ ಪಾಪಿಗಳು ಸುತ್ತಿಗೆಯಿಂದ ಹೊಡೆದಿದ್ದಾರೆ. ಬಳಿಕ ಗ್ಯಾಸ್ ಬೈಕ್ ಕತ್ತರಿಸಿ ಬೆಂಕಿ ಇಟ್ಟಿದ್ದಾರೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚಿ ಅಗ್ನಿ ಅನಾಹುತ ಆಗಿದೆ ಅಂತ ಬಿಂಬಿಸಲು ಯತ್ನಿಸಿದ್ದಾರೆ. ಬಳಿಕ ಇದೀಗ ಗಂಭೀರವಾಗಿ ಗಾಯಕೊಂಡ ನಾಗನೂರು ತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದು ಸುಪಾರಿಕೊಟ್ಟ ಪತಿ ಮಹೇಶ್ ಹಾಗೂ ಆರೋಪಿಗಳಾದ ಭಾಸ್ಕರ್ ಹಾಗೂ ಅಭಿಷೇಕ್ ನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ಒಳಪಡಿಸಿದ್ದಾರೆ.








