Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಹಾರ ತಿಂದ ಬಳಿಕ ‘ಶುಗರ್’ ಜಾಸ್ತಿ ಆಗ್ತಿದ್ಯಾ? 10 ರೂಪಾಯಿ ಅದ್ಭುತ ಟಿಪ್ಸ್ ಅನುಸರಿಸಿ, ಥಟ್ ಅಂತಾ ಇಳಿಯುತ್ತೆ!

03/02/2026 3:02 PM

ನಿಮ್ಮ ಬಳಿ ‘ಆಧಾರ್ ಕಾರ್ಡ್’ ಇದ್ರೆ ಸಾಕು, ಸರ್ಕಾರದಿಂದ 90 ಸಾವಿರ ರೂ. ಸಾಲ ಲಭ್ಯ ; ಹೀಗೆ ಅರ್ಜಿ ಸಲ್ಲಿಸಿ!

03/02/2026 2:53 PM

BIG UPDATE : ಅನೈತಿಕ ಸಂಬಂಧದ ಗಲಾಟೆಯಲ್ಲಿ ಓರ್ವನ ಹತ್ಯೆ : ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಜನ ಅರೆಸ್ಟ್

03/02/2026 1:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ರಾಜ್ಯದ ಜನತೆಗೆ ಗುಡ್ ನ್ಯೂಸ್ : ಸರ್ಕಾರದಿಂದ ‘BPL ಕಾರ್ಡ್’ ಆದಾಯ ಮಿತಿ ಪರಿಷ್ಕರಣೆ.!
KARNATAKA

GOOD NEWS : ರಾಜ್ಯದ ಜನತೆಗೆ ಗುಡ್ ನ್ಯೂಸ್ : ಸರ್ಕಾರದಿಂದ ‘BPL ಕಾರ್ಡ್’ ಆದಾಯ ಮಿತಿ ಪರಿಷ್ಕರಣೆ.!

By kannadanewsnow5719/12/2025 5:28 AM

ರಾಜ್ಯ ಸರ್ಕಾರ ಬಿ.ಪಿ.ಎಲ್.ಕಾರ್ಡ್ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆಸಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಹಾಗೂ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ.ಸಿ.ಎನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಬಿ.ಪಿ.ಎಲ್ ಕಾರ್ಡ್‍ದಾರರ ಆದಾಯ ಮಿತಿಯನ್ನು ರೂ.1.20 ಲಕ್ಷಕ್ಕೆ ಮಿತಿಗೊಳಿಸಿದೆ. ಆದರೆ ಕೂಲಿ ಕೆಲಸಗಾರರಿಗೂ ಪ್ರತಿದಿನ ರೂ.500 ಕೂಲಿ ದೊರೆಯುತ್ತದೆ. ಇದರ ಆಧಾರದಲ್ಲಿ ಕೂಲಿ ಮಾಡುವವರ ಆದಾಯವೂ ವರ್ಷಕ್ಕೆ ರೂ.1.80 ಲಕ್ಷಕ್ಕೂ ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಪರಿಷ್ಕರಿಸಲು ಚಿಂತನೆ ನಡೆದಿದೆ ಎಂದರು.

ಕೇಂದ್ರ ಸರ್ಕಾರ ರಾಜ್ಯದಲ್ಲಿ 7,75,206 ಶಂಕಾಸ್ಪದ ಪಡಿತರ ಫಲಾನುಭವಿಗಳನ್ನು ಗುರುತಿಸಿದೆ. ರಾಜ್ಯದಲ್ಲಿ 4.53 ಲಕ್ಷ ಬಿ.ಪಿ.ಎಲ್ ಹಾಗೂ 1.25 ಲಕ್ಷ ಎ.ಪಿ.ಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿವೆ. ರಾಜ್ಯದ ಜನಸಂಖ್ಯೆಗೆ ಹೊಲಿಸಿದರೆ ಶೇ.73 ರಷ್ಟು ಕುಟುಂಬಗಳು ಬಿ.ಪಿ.ಎಲ್ ಕಾರ್ಡು ಪಡೆದಿವೆ. ರಾಜ್ಯವು ಜಿ.ಎಸ್.ಟಿ ಪಾವತಿ, ಆದಾಯ ತೆರಿಗೆ ಪಾವತಿಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿದೆ. ಈ ಅಂಶವನ್ನು ಪರಿಗಣಿಸಿದರೆ ಬಿ.ಪಿ.ಎಲ್. ಕುಟುಂಬಗಳ ಪ್ರಮಾಣ ಶೇ.50 ರಷ್ಟು ಇರಬೇಕಿತ್ತು. ಆದರೆ ಇದಕ್ಕೂ ಹೆಚ್ಚಿನ ಕುಟುಂಬ ಬಿ.ಪಿ.ಎಲ್. ಕಾರ್ಡು ಪಡೆದಿವೆ ಎಂದರು.

ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿಗಳನ್ನು ಪಡೆಯುವ ಹಾಗೂ ಹೊರಗಿಡುವ ಬಗ್ಗೆ 2017ರಲ್ಲಿ ಮಾನದಂಡಗಳನ್ನು ರೂಪಿಸಿದೆ. ಇದರ ಅನ್ವಯ ಸರ್ಕಾರಿ, ಅನುದಾನಿತ ಸಂಸ್ಥೆಗಳು, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು, ಆದಾಯ, ಸೇವಾ ಹಾಗೂ ಜಿ.ಎಸ್.ಟಿ ತೆರಿಗೆ ಪಾವತಿ ಮಾಡುವ ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ನೀಡುವುದಿಲ್ಲ. ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆಸಿರುವುದರಿಂದ, ತಾತ್ಕಾಲಿಕವಾಗಿ ಯಾವುದೇ ಬಿ.ಪಿ.ಎಲ್.ಕಾರ್ಡುಗಳನ್ನು ರದ್ದು ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.

ಸದ್ಯ ವೈದ್ಯಕೀಯ ಆಧಾರದಲ್ಲಿ ಮಾತ್ರ ಬಿ.ಪಿ.ಎಲ್ ಕಾರ್ಡು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಕುಟುಂಬದ ಸದಸ್ಯರು ನೌಕರಿಗೆ ಸೇರಿದ್ದಾರೆ ಎನ್ನುವ ಕಾರಣದಿಂದ ಬಿ.ಪಿ.ಎಲ್ ಕಾರ್ಡು ರದ್ದಾಗಿದ್ದರೆ, ಬಾದಿತ ಕುಟುಂಬದವರು ನೌಕರಿಗೆ ಸೇರಿದವರು ತಮ್ಮೊಂದಿಗೆ ವಾಸವಾಗಿಲ್ಲ ಎನ್ನುವ ಕಾರಣ ನೀಡಿ, ಸಂಬಂದಪಟ್ಟ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದರೆ 15 ದಿನದ ಒಳಗಾಗಿ ಬಿ.ಪಿ.ಎಲ್ ಕಾರ್ಡು ನೀಡಲಾಗುವುದು. ಬಂಟ್ವಾಳ ಕ್ಷೇತ್ರದಲ್ಲಿ 2023-24ನೇ ಸಾಲಿನವರೆಗೆ ರೂ.48,715 ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡು ನೀಡಲಾಗಿದೆ. 2023 ರಿಂದ ಜನವರಿ 2025ವರೆಗೆ ಒಟ್ಟು 688 ಬಿ.ಪಿ.ಎಲ್ ಕಾರ್ಡು ವಿತರಿಸಲಾಗಿದೆ. 99 ಕುಟಂಬಗಳ ಬಿ.ಪಿ.ಎಲ್ ಕಾರ್ಡು ರದ್ದುಪಡಿಸಲಾಗಿದೆ. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 930 ಬಿ.ಪಿ.ಎಲ್ ಕಾರ್ಡುಗಳನ್ನು ಎ.ಪಿ.ಎಲ್ ಕಾರ್ಡುಗಳಾಗಿ ಪರಿವರ್ತಿಸಲಾಗಿದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 964 ಹೊಸ ಬಿ.ಪಿ.ಎಲ್ ಕಾರ್ಡು ನೀಡುವ ಅರ್ಜಿಗಳು ಬಾಕಿಯಿವೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಶಾಸಕ ಬಾಲಕೃಷ್ಣ.ಸಿ.ಎನ್ ಅವರು ಸಚಿವರಲ್ಲಿ ಕೋರಿದರು.

ಬಿಪಿಎಲ್ ಕಾರ್ಡ್ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ

– @KHMuniyappaklr , ಆಹಾರ ಸಚಿವರು pic.twitter.com/13Y59s2Hfm

— DIPR Karnataka (@KarnatakaVarthe) December 18, 2025

GOOD NEWS : Good news for the people of the state : 'BPL card' income limit revision by government.!
Share. Facebook Twitter LinkedIn WhatsApp Email

Related Posts

BIG UPDATE : ಅನೈತಿಕ ಸಂಬಂಧದ ಗಲಾಟೆಯಲ್ಲಿ ಓರ್ವನ ಹತ್ಯೆ : ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಜನ ಅರೆಸ್ಟ್

03/02/2026 1:36 PM2 Mins Read

BIG NEWS : ಅಬಕಾರಿ ಮಂತ್ರಿಗಳಿಗೆ ತಿಂಗಳು, ತಿಂಗಳು ಕಮಿಷನ್ ಕೊಡಬೇಕು : ಸದನದಲ್ಲಿ ಆರ್.ಅಶೋಕ್ ಬಾಂಬ್!

03/02/2026 1:28 PM1 Min Read

ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರನ್ನು ಕೋಣೆಗೆ ಕರೆದು ‘ಲೈಂಗಿಕ ಕಿರುಕುಳ’ ಆರೋಪ : ಖಾಸಗಿ ಶಾಲಾ ಶಿಕ್ಷಕ ಅರೆಸ್ಟ್

03/02/2026 1:23 PM1 Min Read
Recent News

ಆಹಾರ ತಿಂದ ಬಳಿಕ ‘ಶುಗರ್’ ಜಾಸ್ತಿ ಆಗ್ತಿದ್ಯಾ? 10 ರೂಪಾಯಿ ಅದ್ಭುತ ಟಿಪ್ಸ್ ಅನುಸರಿಸಿ, ಥಟ್ ಅಂತಾ ಇಳಿಯುತ್ತೆ!

03/02/2026 3:02 PM

ನಿಮ್ಮ ಬಳಿ ‘ಆಧಾರ್ ಕಾರ್ಡ್’ ಇದ್ರೆ ಸಾಕು, ಸರ್ಕಾರದಿಂದ 90 ಸಾವಿರ ರೂ. ಸಾಲ ಲಭ್ಯ ; ಹೀಗೆ ಅರ್ಜಿ ಸಲ್ಲಿಸಿ!

03/02/2026 2:53 PM

BIG UPDATE : ಅನೈತಿಕ ಸಂಬಂಧದ ಗಲಾಟೆಯಲ್ಲಿ ಓರ್ವನ ಹತ್ಯೆ : ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಜನ ಅರೆಸ್ಟ್

03/02/2026 1:36 PM

BIG NEWS : ಅಬಕಾರಿ ಮಂತ್ರಿಗಳಿಗೆ ತಿಂಗಳು, ತಿಂಗಳು ಕಮಿಷನ್ ಕೊಡಬೇಕು : ಸದನದಲ್ಲಿ ಆರ್.ಅಶೋಕ್ ಬಾಂಬ್!

03/02/2026 1:28 PM
State News
KARNATAKA

BIG UPDATE : ಅನೈತಿಕ ಸಂಬಂಧದ ಗಲಾಟೆಯಲ್ಲಿ ಓರ್ವನ ಹತ್ಯೆ : ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಜನ ಅರೆಸ್ಟ್

By kannadanewsnow0503/02/2026 1:36 PM KARNATAKA 2 Mins Read

ಉತ್ತರಕನ್ನಡ : ಅನೈತಿಕ ಸಂಬಂಧ ಬಯಲು ಮಾಡಿದ್ದಕ್ಕೆ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ನೆಲೆಯಲ್ಲಿ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್…

BIG NEWS : ಅಬಕಾರಿ ಮಂತ್ರಿಗಳಿಗೆ ತಿಂಗಳು, ತಿಂಗಳು ಕಮಿಷನ್ ಕೊಡಬೇಕು : ಸದನದಲ್ಲಿ ಆರ್.ಅಶೋಕ್ ಬಾಂಬ್!

03/02/2026 1:28 PM

ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರನ್ನು ಕೋಣೆಗೆ ಕರೆದು ‘ಲೈಂಗಿಕ ಕಿರುಕುಳ’ ಆರೋಪ : ಖಾಸಗಿ ಶಾಲಾ ಶಿಕ್ಷಕ ಅರೆಸ್ಟ್

03/02/2026 1:23 PM

BREAKING : ‘ಲ್ಯಾಂಡ್ ಲಾರ್ಡ್’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ : ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

03/02/2026 1:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.