Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಇಂಧನಕ್ಕಾಗಿ ಆತಂಕ ಬೇಡ, ಭಾರತದ ತೈಲ ಪೂರೈಕೆ ಸಂಪೂರ್ಣ ಸುರಕ್ಷಿತ’: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ಹರ್ದೀಪ್ ಸಿಂಗ್ ಪುರಿ ಭರವಸೆ!

13/03/2026 7:25 AM

ನಿಮ್ಮ ಮಗಳಿಗೆ 18 ವರ್ಷ ತುಂಬಿದ್ದರೆ `ಭಾಗ್ಯಲಕ್ಷ್ಮಿ ಬಾಂಡ್’ ನ ₹1 ಲಕ್ಷ ಹಣ ಪಡೆಯಬಹುದು.!

13/03/2026 7:22 AM

ಭಾರತ ಸೇರಿದಂತೆ 16 ದೇಶಗಳ ಮೇಲೆ ಟ್ರಂಪ್ ‘ಸೆಕ್ಷನ್ 301’ ಅಸ್ತ್ರ: ಏನಿದು ತನಿಖೆ? ಭಾರತಕ್ಕೆ ಎದುರಾಗಿದೆಯೇ ವ್ಯಾಪಾರ ಯುದ್ಧದ ಭೀತಿ?

13/03/2026 7:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ `ಶಾಮನೂರು ಶಿವಶಂಕರಪ್ಪ’ ಕಾರಣ : ಸದನದಲ್ಲಿ CM ಸಿದ್ದರಾಮಯ್ಯ ಸಂತಾಪ
KARNATAKA

BIG NEWS : ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ `ಶಾಮನೂರು ಶಿವಶಂಕರಪ್ಪ’ ಕಾರಣ : ಸದನದಲ್ಲಿ CM ಸಿದ್ದರಾಮಯ್ಯ ಸಂತಾಪ

By kannadanewsnow5715/12/2025 12:45 PM

ದಾವಣಗೆರೆ :ದಾವಣಗೆರೆ ಜಿಲ್ಲೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಿದ್ದಾರೆ ಅದಕ್ಕೆ ಶಾಮನೂರು ಶಿವಶಂಕರಪ್ಪ ಅವರು ಕಾರಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

-ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಇಂದು ಸಂತಾಪ ಸೂಚಿಸಿ, ಮಾತನಾಡಿದ ಸಿಎಂ ಸಿದ್ದರಾಮಯ್ಯ,ಶಾಮನೂರು ಶಿವಶಂಕರಪ್ಪ ಅವರು ತಮ್ಮ 63ನೇ ವಯಸ್ಸಿನಲ್ಲಿ ವಿಧಾನಸಭೆ ಪ್ರವೇಶಿಸಿ ಆರು ಬಾರಿ ಶಾಸಕರಾದವರು. ಒಮ್ಮೆ ಸಂಸತ್ ಸದಸ್ಯರಾಗಿದ್ದರು. ದೀರ್ಘ ಕಾಲದ ರಾಜಕೀಯದಲ್ಲಿದ್ದರು.

ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದರು. 1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗಿ ನಂತರ ನಗರಸಭೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ದಾವಣಗೆರೆಯಲ್ಲಿ ಬಾಪೂಜಿ ವಿದ್ಯಾ ಕೇಂದ್ರದ ಮೂಲಕ  ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು ಸೇರಿದಂತೆ ಅನೇಕ ಸಂಸ್ಥೆಗಳನ್ನು ಕಟ್ಟಿ ಜಿಲ್ಲೆಯನ್ನು ವಿದ್ಯಾಕಾಶಿಯಾಗಿಸಿದರು. ಉದ್ಯಮಿಯಾಗಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಜವಳಿ ಕ್ಷೇತ್ರದ ಅವನತಿ ಪ್ರಾರಂಭವಾದಾಗ ದಾವಣಗೆರೆಗೆ ಒಂದು ಬ್ರಾಂಡ್ ಹೆಸರನ್ನು ಶಿವಶಂಕರಪ್ಪ ಅವರು ತಂದುಕೊಟ್ಟರು. ದೀರ್ಘಕಾಲ ಎಐಸಿಸಿ ಖಜಾಂಚಿ ಆಗಿದ್ದರು. ಎಲ್ಲರೊಂದಿಗೂ ಸ್ನೇಹ ಸಂಪಾದಿಸಿದ್ದವರು, ಅಜಾತಶತ್ರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ದಾವಣಗೆರೆಗೆ ಭೇಟಿ ನೀಡಿದಾಗಲೆಲ್ಲ ಅವರ ಗೆಸ್ಟ್ ಹೌಸ್ ನಲ್ಲಿ ಉಳಿಯುತ್ತಿದ್ದೆ, ಅವರ ಒತ್ತಾಯದ ಮೇರೆಗೆ ಅವರ ಮನೆಯಲ್ಲಿಯೇ ಊಟ ಮಾಡುತ್ತಿದ್ದೆ. ನನ್ನ 75ನೇ ಜನ್ಮದಿನವನ್ನು ದಾವಣಗೆರೆಯಲ್ಲಿಯೇ ಆಚರಿಸಿಕೊಂಡಿದ್ದೆ, ಅದಕ್ಕೂ ಸಾಕಷ್ಟು ಸಹಕಾರ ನೀಡಿದ್ದರು.

ಶಾಮನೂರು ಶಿವಶಂಕರಪ್ಪ ಕಷ್ಟದ ಸಂದರ್ಭಗಳಲ್ಲಿ ಜನರಿಗೆ ಸಹಾಯಹಸ್ತ ಚಾಚುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಆರು ಕೋಟಿಗೂ ಹೆಚ್ಚು ವೆಚ್ಚ ಮಾಡಿ ಆಕ್ಸಿಜನ್ ಸರಬರಾಜು ಮಾಡಿದ್ದರು.

ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗ ಮಂತ್ರಿ ಮಂಡಲದಲ್ಲಿ ಶಾಮನೂರು ಶಿವಶಂಕರಪ್ಪ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2016ರಲ್ಲಿ ಸಂಪುಟ ಪುನರ್ ರಚನೆಯಾದಾಗ ಅವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ್ ಅವರನ್ನು ಸಚಿವರನ್ನಾಗಿ ಮಾಡಲು ಕೋರಿಕೊಂಡಿದ್ದರು. ಮಲ್ಲಿಕಾರ್ಜುನ್ ಅವರು ನಮ್ಮ ಈಗಿನ ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

15 ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಿದಾಗ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅವರ ನಿಧನದಿಂದ ಜನಪರ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರು ದೊಡ್ಡ ಕುಟುಂಬ ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದು, ಭಗವಂತ ಅವರೆಲ್ಲರಿಗೂ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಹಾಗೂ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಪ್ರಾರ್ಥಿಸುತ್ತೇನೆ ಎಂದರು.

ದಾವಣಗೆರೆ ಜಿಲ್ಲೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಿದ್ದಾರೆ ಅದಕ್ಕೆ ಶಾಮನೂರು ಶಿವಶಂಕರಪ್ಪ ಅವರು ಕಾರಣ.
ಶಾಮನೂರು ಶಿವಶಂಕರಪ್ಪ ಅವರು ತಮ್ಮ 63ನೇ ವಯಸ್ಸಿನಲ್ಲಿ ವಿಧಾನಸಭೆ ಪ್ರವೇಶಿಸಿ ಆರು ಬಾರಿ ಶಾಸಕರಾದವರು. ಒಮ್ಮೆ ಸಂಸತ್ ಸದಸ್ಯರಾಗಿದ್ದರು. ದೀರ್ಘ ಕಾಲದ ರಾಜಕೀಯದಲ್ಲಿದ್ದರು.
ಅಖಿಲ ಭಾರತ ವೀರಶೈವ… pic.twitter.com/UTLxHhMfCW

— Siddaramaiah (@siddaramaiah) December 15, 2025

BIG NEWS : `Shamanur Shivashankarappa' is the reason for the development of Davanagere district: CM Siddaramaiah
Share. Facebook Twitter LinkedIn WhatsApp Email

Related Posts

ನಿಮ್ಮ ಮಗಳಿಗೆ 18 ವರ್ಷ ತುಂಬಿದ್ದರೆ `ಭಾಗ್ಯಲಕ್ಷ್ಮಿ ಬಾಂಡ್’ ನ ₹1 ಲಕ್ಷ ಹಣ ಪಡೆಯಬಹುದು.!

13/03/2026 7:22 AM2 Mins Read

ಗ್ರಾಹಕರೇ ಗಮನಿಸಿ : `ವಾಟ್ಸಾಪ್’ನಲ್ಲಿ ‘HI’ ಅಂದ್ರೆ ಸಾಕು ಮನೆ ಬಾಗಲಿಗೆ ಬರಲಿದೆ `ಗ್ಯಾಸ್ ಸಿಲಿಂಡರ್’!

13/03/2026 7:18 AM2 Mins Read

ರೈತರೇ ಗಮನಿಸಿ : ‘ಪೌತಿ ಖಾತೆ’ ಬದಲಾವಣೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

13/03/2026 7:16 AM2 Mins Read
Recent News

‘ಇಂಧನಕ್ಕಾಗಿ ಆತಂಕ ಬೇಡ, ಭಾರತದ ತೈಲ ಪೂರೈಕೆ ಸಂಪೂರ್ಣ ಸುರಕ್ಷಿತ’: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ಹರ್ದೀಪ್ ಸಿಂಗ್ ಪುರಿ ಭರವಸೆ!

13/03/2026 7:25 AM

ನಿಮ್ಮ ಮಗಳಿಗೆ 18 ವರ್ಷ ತುಂಬಿದ್ದರೆ `ಭಾಗ್ಯಲಕ್ಷ್ಮಿ ಬಾಂಡ್’ ನ ₹1 ಲಕ್ಷ ಹಣ ಪಡೆಯಬಹುದು.!

13/03/2026 7:22 AM

ಭಾರತ ಸೇರಿದಂತೆ 16 ದೇಶಗಳ ಮೇಲೆ ಟ್ರಂಪ್ ‘ಸೆಕ್ಷನ್ 301’ ಅಸ್ತ್ರ: ಏನಿದು ತನಿಖೆ? ಭಾರತಕ್ಕೆ ಎದುರಾಗಿದೆಯೇ ವ್ಯಾಪಾರ ಯುದ್ಧದ ಭೀತಿ?

13/03/2026 7:18 AM

ಗ್ರಾಹಕರೇ ಗಮನಿಸಿ : `ವಾಟ್ಸಾಪ್’ನಲ್ಲಿ ‘HI’ ಅಂದ್ರೆ ಸಾಕು ಮನೆ ಬಾಗಲಿಗೆ ಬರಲಿದೆ `ಗ್ಯಾಸ್ ಸಿಲಿಂಡರ್’!

13/03/2026 7:18 AM
State News
KARNATAKA

ನಿಮ್ಮ ಮಗಳಿಗೆ 18 ವರ್ಷ ತುಂಬಿದ್ದರೆ `ಭಾಗ್ಯಲಕ್ಷ್ಮಿ ಬಾಂಡ್’ ನ ₹1 ಲಕ್ಷ ಹಣ ಪಡೆಯಬಹುದು.!

By kannadanewsnow5713/03/2026 7:22 AM KARNATAKA 2 Mins Read

ಬೆಂಗಳೂರು: ಕರ್ನಾಟಕ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆಯಾದ ‘ಭಾಗ್ಯಲಕ್ಷ್ಮಿ’ ಯೋಜನೆಯಡಿ ನೋಂದಾಯಿತರಾಗಿರುವ ಹೆಣ್ಣು ಮಕ್ಕಳಿಗೆ ಈಗ ಸಿಹಿ ಸುದ್ದಿ. ಬಾಂಡ್…

ಗ್ರಾಹಕರೇ ಗಮನಿಸಿ : `ವಾಟ್ಸಾಪ್’ನಲ್ಲಿ ‘HI’ ಅಂದ್ರೆ ಸಾಕು ಮನೆ ಬಾಗಲಿಗೆ ಬರಲಿದೆ `ಗ್ಯಾಸ್ ಸಿಲಿಂಡರ್’!

13/03/2026 7:18 AM

ರೈತರೇ ಗಮನಿಸಿ : ‘ಪೌತಿ ಖಾತೆ’ ಬದಲಾವಣೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

13/03/2026 7:16 AM

ಸರ್ಕಾರಿ vs ಖಾಸಗಿ ಲಸಿಕೆ: ನಿಮ್ಮ ಮಗುವಿಗೆ ಯಾವುದು ಬೆಸ್ಟ್? ಪೋಷಕರ ಗೊಂದಲಕ್ಕೆ ಇಲ್ಲಿದೆ ಕಂಪ್ಲೀಟ್ ಮಾಹಿತಿ

13/03/2026 7:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.