ಬೆಂಗಳೂರು : ಜನಪ್ರಿಯ ಬ್ರಾಂಡ್ ಗಳ ಮೊಟ್ಟೆಯಲ್ಲಿ ಇದೀಗ ಕ್ಯಾನ್ಸರ್ ಅಂಶ ಪತ್ತೆಯಾಗಿದೆ. ಹೊಟ್ಟೆಯಲ್ಲಿ ಕ್ಯಾನ್ಸರ್ ಇದೆ ಎಂಬ ಚರ್ಚೆ ಇದೀಗ ಆತಂಕ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಮೊಟ್ಟೆ ಕುರಿತು ಭಾರಿ ಚರ್ಚೆ ಆಗುತ್ತಿದೆ ಮೊಟ್ಟೆಗಳಲ್ಲಿ AOZ ಕ್ಯಾನ್ಸರ್ ಕಾರಕ ಅಂಶ ಪಟ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಸಾಮಾನ್ಯವಾಗಿ ಆರೋಗ್ಯ ದೃಷ್ಟಿಯಿಂದ ರೋಗಿಗಳಿಗೆ ಮೊಟ್ಟೆ ನೀಡುತ್ತಾರೆ. ಇನ್ನು ಸರ್ಕಾರಿ ಶಾಲೆಗಳಲ್ಲಿ ಕೂಡ ಆರೋಗ್ಯದ ದೃಷ್ಟಿಯಿಂದ ಪುಟ್ಟ ಪುಟ್ಟ ಮಕ್ಕಳಿಗೆ ಮೊಟ್ಟೆ ಕೊಡುತ್ತಾರೆ ಇದೀಗ ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಈ ವಿಚಾರವಾಗಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ ಕೆಲ ತಿಂಗಳ ಹಿಂದೆ ಈ ಮೊಟ್ಟೆಗಳ ಟೆಸ್ಟ್ ಮಾಡಲಾಗಿತ್ತು. ಟೆಸ್ಟ್ ಮಾಡಿದಾಗ ಹಾನಿಕಾರಕ ಅಂಶ ಪತ್ತೆ ಆಗಿಲ್ಲ. ಕೇಂದ್ರದಿಂದಲೂ ಯಾವುದೇ ಮಾರ್ಗಸೂಚಿ ಬಂದಿಲ್ಲ. ಆರೋಗ್ಯ ಇಲಾಖೆಯಿಂದ ಮೊಟ್ಟೆ ಟೆಸ್ಟ್ ಗೆ ಸೂಚನೆ ನೀಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.








