Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಆಧುನಿಕ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳು: ಇಲ್ಲಿದೆ ಕಾರಣ ಹಾಗೂ ಪರಿಹಾರ

15/03/2026 9:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತೊಗರಿ, ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಿ: ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ
KARNATAKA

ತೊಗರಿ, ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಿ: ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

By kannadanewsnow0910/12/2025 6:54 PM

ದಾವಣಗೆರೆ/ನವದೆಹಲಿ; ಕರ್ನಾಟಕ ರಾಜ್ಯದಲ್ಲಿ‌ ಭಾರತದ ರಾಷ್ಟ್ರೀಯ ಕೃಷಿ‌ ಸಹಕಾರಿ ಮಾರುಕಟ್ಟೆ ಒಕ್ಕೂಟ ಹಾಗೂ ಭಾರತದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ ಮೂಲಕ ತೊಗರಿಬೇಳೆ‌ ಹಾಗೂ ಕಬ್ಬು ಬೆಳೆಗೆ ಕನಿಷ್ಠ ಬೆಂಬಲ‌ ಬೆಲೆ ನಿಗದಿಗೆ ಕೂಡಲೇ ಅನುಮೋದನೆ ನೀಡಬೇಕೆಂದು ನವದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಕರ್ನಾಟಕದ ಸಂಸದರ ನಿಯೋಗ ತೆರಳಿ ಮನವಿ ಸಲ್ಲಿಸಿದ್ದಾರೆ.

ಈಗಾಗಲೇ ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ ಅವರ ಮನವಿಯನ್ನು ಪರಿಗಣಿಸುವಂತೆ ಈ‌ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದರು ಉಲ್ಲೇಖಿಸಿದ್ದಾರೆ.

ಕೇಂದ್ರ ಸರ್ಕಾರದ ವಿಳಂಬದ ಪರಿಣಾಮವಾಗಿ ಕರ್ನಾಟಕದ ತೊಗರಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಪ್ರಸ್ತುತ ಖಾರೀಫ್‌ ಹಂಗಾಮು 2025–26 ರಲ್ಲಿ, ಕರ್ನಾಟಕದಲ್ಲಿ ಸುಮಾರು 16.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಬಿತ್ತನೆಗೊಂಡಿದ್ದು, 12.60 ಲಕ್ಷ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚಿನ ಉತ್ಪಾದನೆಯ ನಿರೀಕ್ಷೆಯಿದೆ. ಈ ಬೆಳೆ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು, ವಿಜಯಪುರ, ಕೊಪ್ಪಳ, ಬೆಳಗಾವಿ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಸೇರಿ ರಾಜ್ಯದ ಪ್ರಮುಖ ಜಿಲ್ಲೆಗಳ ಲಕ್ಷಾಂತರ ರೈತರಿಗೆ ಆರ್ಥಿಕ ಬೆನ್ನೆಲುಬಾಗಿದೆ ಎಂದು ಕೇಂದ್ರ ಸಚಿವರ ಗಮನಸೆಳೆದರು.

ಪ್ರಸ್ತುತ ಮಾರುಕಟ್ಟೆಯ ಬೆಲೆ ಕ್ವಿಂಟಾಲ್‌ಗೆ ₹5,830ರಿಂದ ₹6,700ರ ನಡುವೆ ಇದೆ. ಆದರೆ 2025–26ರ ತೊಗರಿಬೆಳೆಗೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಕನಿಷ್ಠ ಬೆಂಬಲ ಬೆಲೆ (MSP) ಕ್ವಿಂಟಾಲ್‌ಗೆ ಸುಮಾರು ₹8,000. ಬೆಳೆಯ ಆಗಮನದ ಗರಿಷ್ಠ ಅವಧಿ ಡಿಸೆಂಬರ್ 2025–ಜನವರಿ 2026ರೊಳಗೆ ಶುರುವಾಗಲಿದ್ದು, ಖರೀದಿ ಕೇಂದ್ರಗಳನ್ನು ಕೇಂದ್ರ ಸರ್ಕಾರ ಫೆಬ್ರವರಿ,ಮಾರ್ಚ್ ತಿಂಗಳಲ್ಲಿ ಮಾತ್ರ ಆರಂಭಿಸಲು ನಿರ್ಧರಿಸಿದೆ.

ಇದರಿಂದಾಗಿ ರೈತರು ತೀವ್ರ ಆದಾಯ ನಷ್ಟದ ಅಪಾಯವನ್ನು ಎದುರಿಸುತ್ತಿದ್ದಾರೆ.

ಮಾರುಕಟ್ಟೆ ಬೆಲೆ ಎಂಎಸ್ ಪಿ ಗಿಂತ ಕಡಿಮೆಯಾಗುವಾಗ, ಅದು ಕೇವಲ ಆರ್ಥಿಕತೆಯ ಪ್ರಶ್ನೆಯಲ್ಲ, ಅದು ರೈತ ಮತ್ತು ಸರ್ಕಾರದ ನಡುವಿನ ನಂಬಿಕೆಯ ಪ್ರಶ್ನೆಯಾಗಿದೆ. ಸರ್ಕಾರ ನೀಡಿದ ಎಂಎಸ್ ಪಿ ಭರವಸೆಯನ್ನು ನಂಬಿ ರೈತರು ಬಿತ್ತಿರುತ್ತಾರೆ. ಪ್ರತಿಯೊಂದು ವಿಳಂಬದ ದಿನವೂ ಕರ್ನಾಟಕದ ರೈತರನ್ನು ಬಲವಂತದ ನಷ್ಟದಲ್ಲಿ ಮಾರಾಟಕ್ಕೆ, ಸಾಲದ ಬಲೆಗೆ ಮತ್ತು ಶಾಶ್ವತ ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ, 2025ರ ನವೆಂಬರ್‌ 6ರಂದು ಕರ್ನಾಟಕ ಸರ್ಕಾರವು ತೊಗರಿಬೇಳೆಗೆ ತಕ್ಷಣದ MSP ಖರೀದಿಗೆ ಸಂಬಂಧಿಸಿದಂತೆ NAFED ಮತ್ತು NCCF ಮುಖಾಂತರ ಖರೀದಿ ಪ್ರಕ್ರಿಯೆ ಆರಂಭಿಸಲು ಅಧಿಕೃತ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಮಾರುಕಟ್ಟೆಗೆ ಬೆಳೆ ಬರುವ ಹಂತಕ್ಕೆ ತಲುಪುತ್ತಿರುವುದರೂ, ಈವರೆಗೆ ಕೇಂದ್ರದಿಂದ ಯಾವುದೇ ಅನುಮೋದನೆ ಲಭಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರೈತರಿಗೆ ಖರೀದಿ ವಿಳಂಬದಿಂದ ಉಂಟಾಗುವ ಹಾನಿ ಒಂದು ಹಂಗಾಮಿನಷ್ಟಕ್ಕೆ ಸೀಮಿತವಲ್ಲ. ಇದು ಸಾರ್ವಜನಿಕ ಸಂಸ್ಥೆಗಳ ಮೇಲಿನ ಅವರ ನಂಬಿಕೆಯ ಪ್ರಶ್ನೆಯಾಗಿದೆ. ಆದ್ದರಿಂದ ಕರ್ನಾಟಕದ ರೈತರಿಗೆ ನೆರವಾಗುವಂತೆ ಕೇಂದ್ರ ಸರ್ಕಾರವೇ ಘೋಷಿಸಿರುವ ಎಂಎಸ್ ಪಿಯನ್ನು ಸಮಯಕ್ಕೆ ಸರಿಯಾಗಿ ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ.

ನಿಯೋಗದಲ್ಲಿ ಸಂಸದರುಗಳಾದ ಜಿ.ಕುಮಾರ್ ನಾಯಕ್, ಇ.ತುಕಾರಾಂ, ಶ್ರೇಯಸ್ ಪಟೇಲ್, ಸುನೀಲ್ ಬೋಸ್, ಸಾಗರ್ ಖಂಡ್ರೆ ಅವರುಗಳು‌ ಉಪಸ್ಥಿತರಿದ್ದರು

ರಾಷ್ಟ್ರದ ಆಹಾರ ಭದ್ರತೆಯಲ್ಲಿ ಕರ್ನಾಟಕ ಯಾವಾಗಲೂ ಮುಂಚೂಣಿಯಲ್ಲಿದೆ. ಬರ, ಪ್ರವಾಹ, ಆರ್ಥಿಕ ಆಘಾತ ಯಾವ ಸಂದರ್ಭದಲ್ಲೂ ನಮ್ಮ ರೈತರು ದೇಶವನ್ನು ನಿರಾಶ್ರಿತರನ್ನಾಗಿಲ್ಲ. ಈಗ ದೇಶವು ಅವರೊಂದಿಗೆ ನಿಲ್ಲಬೇಕಾದ ಸಮಯವಾಗಿದೆ. ಈ ನಿರ್ಧಾರವು ಕೇವಲ ಆಡಳಿತಾತ್ಮಕ ವಿಷಯವಲ್ಲ. ಇದು ಭಾರತದ ಅನ್ನದಾತರ ಮೇಲಿನ ನಮ್ಮ ನೈತಿಕ ಬದ್ಧತೆಯ ದೊಡ್ಡ ಪರೀಕ್ಷೆ. ರೈತರ ಹಿತ, ರಾಜ್ಯ, ಕೇಂದ್ರ ಸಹಕಾರ ಮತ್ತು ರಾಷ್ಟ್ರೀಯ ಆಹಾರ ಭದ್ರತೆಯ ದೃಷ್ಟಿಯಿಂದ, ಕೇಂದ್ರ ಸರ್ಕಾರದಿಂದ ತಕ್ಷಣದ ಮತ್ತು ದೃಢವಾದ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕದ ಕಾಂಗ್ರೆಸ್ ಸಂಸದರು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.

ಆತ್ಮವಿಶ್ವಾಸ ಇದ್ದರೆ, ಸಾಧನೆ ಸಾಧ್ಯ: ವಿದ್ಯಾರ್ಥಿಗಳಿಗೆ BWSSB ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ಸಲಹೆ

ಹೀಗಿದೆ ಇಂದು ಬೆಳಗಾವಿಯ ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕರಿಸಿದ ವಿಧೇಯಕಗಳ ಪಟ್ಟಿ

Share. Facebook Twitter LinkedIn WhatsApp Email

Related Posts

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM1 Min Read

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM2 Mins Read

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

15/03/2026 9:00 PM2 Mins Read
Recent News

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಆಧುನಿಕ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳು: ಇಲ್ಲಿದೆ ಕಾರಣ ಹಾಗೂ ಪರಿಹಾರ

15/03/2026 9:49 PM

ಸುರಕ್ಷಿತ ಲೈಂಗಿಕತೆ: ಆರೋಗ್ಯಕರ ಜೀವನಕ್ಕೆ ಒಂದು ಮಾರ್ಗದರ್ಶಿ, ಇಲ್ಲಿದೆ ಟಿಪ್ಸ್

15/03/2026 9:43 PM
State News
KARNATAKA

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

By kannadanewsnow0915/03/2026 10:37 PM KARNATAKA 1 Min Read

​ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿವಂಗತ ಸಾಹಿತಿ ಹಾಗೂ ಪತ್ರಕರ್ತ ಪಿ. ಲಂಕೇಶ್‌ ಅವರೊಂದಿಗಿನ ತಮ್ಮ ಒಡನಾಟ ಮತ್ತು ಲಂಕೇಶ್‌ ಪತ್ರಿಕೆಯಲ್ಲಿ…

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

15/03/2026 9:00 PM

ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಬರಬೇಕು: ಸಂಸದ ಬಸವರಾಜ ಬೊಮ್ಮಾಯಿ

15/03/2026 7:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.