Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ 5 ಕೆಲಸ ಮಾಡದಿದ್ದರೆ ಸಬ್ಸಿಡಿ, ಕನೆಕ್ಷನ್ ಕಟ್.!

ಡೀಸೆಲ್, ಎಟಿಎಫ್ ರಫ್ತು ಸುಂಕ ಹೆಚ್ಚಿಸಿದ ಕೇಂದ್ರ ಸರ್ಕಾರ: ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ!

ಐತಿಹಾಸಿಕ ಜಾಗತಿಕ ಬೆಳವಣಿಗೆ: ಯುದ್ಧಕ್ಕೆ ಬ್ರೇಕ್ ಹಾಕಲು ಅಮೆರಿಕ-ಇರಾನ್ ನಡುವೆ ಡಿಜಿಟಲ್ ಸಹಿ; ಶುಕ್ರವಾರ ಸ್ವಿಟ್ಜರ್ಲೆಂಡ್‌ನಲ್ಲಿ ಅಧಿಕೃತ ಸಮಾರಂಭ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆತ್ಮವಿಶ್ವಾಸ ಇದ್ದರೆ, ಸಾಧನೆ ಸಾಧ್ಯ: ವಿದ್ಯಾರ್ಥಿಗಳಿಗೆ BWSSB ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ಸಲಹೆ
KARNATAKA

ಆತ್ಮವಿಶ್ವಾಸ ಇದ್ದರೆ, ಸಾಧನೆ ಸಾಧ್ಯ: ವಿದ್ಯಾರ್ಥಿಗಳಿಗೆ BWSSB ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ಸಲಹೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು : ತಂದೆ ಪೋಸ್ಟ್‌ ಮಾಸ್ಟರ್‌, ತಾಯಿ ಅಂಗನವಾಡಿ ಕಾರ್ಯಕರ್ತೆ. ನಾನು ಬಡ ಕುಟುಂಬದಿಂದ ಬಂದವನು. ಜೀವನದಲ್ಲಿ ನಿಖರ ಗುರಿ, ಕಠಿಣ ಪರಿಶ್ರಮ, ಶಿಸ್ತು, ಸಚ್ಚಾರಿತ್ರ್ಯ ಇದ್ದಲ್ಲಿ ಯಾವುದೇ ಪರೀಕ್ಷೆಯಲ್ಲಾದರೂ ಯಶಸ್ವಿಯಾಗಿ ಉತ್ತೀರ್ಣರಾಗಬಹುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡ್ಲ್ಯೂಎಸ್‌ ಎಸ್‌ ಬಿ) ಅಧ್ಯಕ್ಷರಾದ ರಾಮ್‌ ಪ್ರಸಾತ್‌ ಮನೋಹರ್‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿರುವ ಆಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಆರಂಭಿಸಿರುವ “ಅಸ್ಪೈರ್‌ ವಿತ್‌ ರಾಮ್‌ ಐಎಎಸ್‌” ಎಂಬ ಉಪನ್ಯಾಸಕ ಮಾಲಿಕೆಯ ಭಾಗವಾಗಿ ವಿಜಯನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಜೀವನದಲ್ಲಿ ಕುಟುಂಬ ಸಮಸ್ಯೆಗಳು ನಮ್ಮ ಸಾಧನೆಗೆ ಅಡ್ಡಿಯಾಗಬಾರದು. ನಮ್ಮಲ್ಲಿರುವ ನಮ್ಮ ಶಕ್ತಿಯನ್ನು ನಾವೇ ಎಚ್ಚರಗೊಳಿಸಿಕೊಳ್ಳಬೇಕು. ಸಮಾಜಕ್ಕೆ ಯಾವುದೇ ಸೋಲುಗಳು ಬೇಕಿಲ್ಲ. ಬೇಕಿರುವುದು ಗೆಲುವು ಅಷ್ಟೇ. ಇದನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದಲೇ ನಿಮ್ಮ ವ್ಯಾಸಂಗ ಮುಂದುವರಿಸಿ ಎಂದು ಅತ್ಮವಿಶ್ವಾಸ ತುಂಬಿದರು.

ನಮ್ಮ ತಂದೆಗೆ ಬರುತ್ತಿದ್ದ ವೇತನದಲ್ಲಿ ನಮ್ಮ ಕುಟುಂಬ ನಡೆಸುವುದು ಕಷ್ಟವಾಗಿತ್ತು. ಈ ವೇಳೆ ನನಗೆ ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್‌ ಸೀಟು ಸಿಕ್ಕಿದರೂ ನಾನು ಓದಲು ಸಾಧ್ಯವಾಗಿಲ್ಲ. ಕೊನೆಯದಾಗಿ ಸರಕಾರಿ ಕಾಲೇಜಿನಲ್ಲಿ ಪಶುವೈದ್ಯಕೀಯ ಪದವಿ ಮುಗಿಸಿದೆ. ನನಗೆ ವಿಜ್ಞಾನಿಯಾಗಬೇಕೆಂಬ ಬಯಕೆ ಇತ್ತು. ಇದಕ್ಕಾಗಿ ಕೆಲವು ಯೋಜನೆ ರೂಪಿಸಿದ್ದೆ. ಅದನ್ನು ಒಪ್ಪಿ ಕೇಂದ್ರ ಸರಕಾರ ಶಿಷ್ಯವೇತನ ನೀಡಲು ಮುಂದಾಗಿತ್ತು. ಇದುವೇ ನನ್ನ ಜೀವನದ ಆಧಾರಸ್ತಂಭವಾಗಿತ್ತು. ಮುಷ್ಕರದಿಂದಾಗಿ ಕಾಲೇಜು ಸ್ಥಗಿತಗೊಂಡ ಕಾರಣದಿಂದ ಶಿಷ್ಯವೇತನ ಕೈತಪ್ಪಿ ಹೋಯಿತು. ಆ ವೇಳೆ ನಾನು ಆತ್ಮವಿಶ್ವಾಸ ಕಳೆದುಕೊಂಡೆ. ಎಷ್ಟೋ ದಿನ ಕಣ್ಣೀರಿನಲ್ಲೇ ಕಳೆದೆ. ನನ್ನ ಸ್ನೇಹಿತನ ಪ್ರೋತ್ಸಾಹಧಾಯಕ ಮಾತುಗಳಿಂದ ಯುಪಿಎಸ್‌ಸಿ ಪರೀಕ್ಷೆ ಸಿದ್ಧತೆ ಆರಂಭಿಸಿ ಇಂದು ನಿಮ್ಮ ಮುಂದೆ ನಿಂತಿದ್ದೇನೆ ಎಂದರು.

ಕಷ್ಟಗಳು ನಮ್ಮ ಜೀವನವನ್ನು ಬುಡಮೇಲು ಮಾಡುತ್ತವೆ. ಆದರೆ, ನಮ್ಮ ಛಲ ಬಿಡಬಾರದು. ನಾನು 300 ರೂ. ದಿನಗೂಲಿಗಾಗಿ ಪಶುವೈದ್ಯಕೀಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡಿದ್ದೇನೆ. ಜೀವನದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದೇ ಧೈರ್ಯದಿಂದ ಮುನ್ನುಗಿದ್ದರೆ, ಯಶಸ್ವು ಕಟ್ಟಿಟ್ಟ ಬುತ್ತಿ.

ದುಶ್ಚಟಗಳಿಂದ ದೂರವಿರಿ. ಇದು ನಿಮ್ಮನ್ನು ವಿನಾಶಕ್ಕೆ ಕರೆದೊಯ್ಯಲಿದೆ. ಒಳ್ಳೆಯ ಪುಸ್ತಕಗಳನ್ನು ಓದಿ. ಒಳ್ಳೆಯ ಆರೋಗ್ಯ ಕಾಯ್ದುಕೊಳ್ಳಿ. ಉತ್ತಮ ಸಂವಹನ ಕೌಶಲ್ಯ ರೂಢಿಸಿಕೊಳ್ಳಿ ಎಂದು ತಿಳಿಸಿದರು.

ಏನೇನು ಓದಬೇಕು

ಸ್ಪರ್ಧಾತ್ಮಕ ಪರೀಕ್ಷೆಗೆ ಏನನ್ನು ಓದಬೇಕು ಎಂಬುದನ್ನು ವಿದ್ಯಾರ್ಥಿಗಳು ಮೊದಲು ಅರಿತುಕೊಳ್ಳಬೇಕು. ಸುಖಾ ಸುಮ್ಮನೆ ಎಲ್ಲವನ್ನು ಆಳವಾಗಿ ಓದುವುದರಿಂದ ಪ್ರಯೋಜನವಿಲ್ಲ. ದಿನಪತ್ರಿಕೆಗಳು, ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಚೆನ್ನಾಗಿ ಓದಬೇಕು. ಇದರ ಜತೆಗೆ ಬರವಣಿಗೆಯ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಉಚಿತ ಮಾರ್ಗದರ್ಶನ

ನನ್ನಂತೆ ಬಹಳಷ್ಟು ಬಡ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ, ಕೆಪಿಎಸ್ಸಿ ಹಾಗೂ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವು ಕಾಣಬೇಕೆಂಬ ಬಯಕೆ ಇದೆ. ಆದರೆ, ಆರ್ಥಿಕ ಪರಿಸ್ಥಿತಿ ಇದಕ್ಕೆ ಸಹಾಯ ಮಾಡದೇ ಇರುಬಹುದು. ಇದಕ್ಕಾಗಿ ನಾನು ಈ ಕಾರ್ಯಕ್ರಮ ಆರಂಭಿಸಿದ್ದೇನೆ. ಇದರಲ್ಲಿ ಉಚಿತವಾಗಿ ಮಾರ್ಗದರ್ಶನ ಸಿಗಲಿದೆ. ನನ್ನ ಪ್ರಕಾರ ತರಬೇತಿಗಿಂತ ಮಾರ್ಗದರ್ಶನ ಬಹಳ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರಲ್ಲಿದ್ದ ಪ್ರಶ್ನೆಗಳಿಗೆ ಉತ್ತರಿಸಿದರು.

ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಾ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೋಶದ ಸಮನ್ವಯಾಧಿಕಾರಿ ಡಾ.ಎನ್‌.ಶೋಭಾ ರಾಣಿ ಇತರರು ಇದ್ದರು.

ಕುದುರೆಮುಖ ಅರಣ್ಯದಿಂದ ಕುಟುಂಬಗಳ ಸ್ಥಳಾಂತರ: ಸಚಿವ ಈಶ್ವರ ಖಂಡ್ರೆ

GOOD NEWS: ರಾಜ್ಯದಲ್ಲಿ ‘ಭೂ ಪರಿವರ್ತನೆ ನಿಯಮ’ ಸರಳೀಕರಣ: 2 ಎಕರೆಗಿನ ಸಣ್ಣ ಕೈಗಾರಿಕೆಗಳಿಗೆ ‘ಕನ್ವರ್ಷನ್’ ಬೇಕಿಲ್ಲ

Share. Facebook Twitter LinkedIn WhatsApp Email

Related Posts

ALERT : `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ 5 ಕೆಲಸ ಮಾಡದಿದ್ದರೆ ಸಬ್ಸಿಡಿ, ಕನೆಕ್ಷನ್ ಕಟ್.!

2 Mins Read

₹30,000 ಸಂಬಳದಲ್ಲೂ ಶ್ರೀಮಂತರಾಗಬಹುದು : 50-30-20 ಸೂತ್ರದಿಂದ ಹಣ ಉಳಿಸುವ ಸುಲಭ ಮಾರ್ಗ

2 Mins Read

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ |Lokayukta Raid

1 Min Read
Recent News

ALERT : `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ 5 ಕೆಲಸ ಮಾಡದಿದ್ದರೆ ಸಬ್ಸಿಡಿ, ಕನೆಕ್ಷನ್ ಕಟ್.!

ಡೀಸೆಲ್, ಎಟಿಎಫ್ ರಫ್ತು ಸುಂಕ ಹೆಚ್ಚಿಸಿದ ಕೇಂದ್ರ ಸರ್ಕಾರ: ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ!

ಐತಿಹಾಸಿಕ ಜಾಗತಿಕ ಬೆಳವಣಿಗೆ: ಯುದ್ಧಕ್ಕೆ ಬ್ರೇಕ್ ಹಾಕಲು ಅಮೆರಿಕ-ಇರಾನ್ ನಡುವೆ ಡಿಜಿಟಲ್ ಸಹಿ; ಶುಕ್ರವಾರ ಸ್ವಿಟ್ಜರ್ಲೆಂಡ್‌ನಲ್ಲಿ ಅಧಿಕೃತ ಸಮಾರಂಭ!

₹30,000 ಸಂಬಳದಲ್ಲೂ ಶ್ರೀಮಂತರಾಗಬಹುದು : 50-30-20 ಸೂತ್ರದಿಂದ ಹಣ ಉಳಿಸುವ ಸುಲಭ ಮಾರ್ಗ

State News
KARNATAKA

ALERT : `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ 5 ಕೆಲಸ ಮಾಡದಿದ್ದರೆ ಸಬ್ಸಿಡಿ, ಕನೆಕ್ಷನ್ ಕಟ್.!

By kannadanewsnow57 KARNATAKA 2 Mins Read

ನವದೆಹಲಿ: ಭಾರತೀಯ ಕುಟುಂಬಗಳ ಎಲ್ಪಿಜಿ ಸಿಲಿಂಡರ್ ಬುಕಿಂಗ್ಗೆ ಸಂಬಂಧಿಸಿದಂತೆ ಜೂನ್ 30, 2026 ರೊಳಗೆ ಹಲವು ಪ್ರಮುಖ ಗಡುವುಗಳು ಎದುರಾಗಲಿವೆ.…

₹30,000 ಸಂಬಳದಲ್ಲೂ ಶ್ರೀಮಂತರಾಗಬಹುದು : 50-30-20 ಸೂತ್ರದಿಂದ ಹಣ ಉಳಿಸುವ ಸುಲಭ ಮಾರ್ಗ

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ |Lokayukta Raid

LPG Gas Subsidy: `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ಸಬ್ಸಿಡಿ ಬಂದ್.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.