ದಕ್ಷಿಣಕನ್ನಡ : ಕೊರೊನ ನಂತರ ರಾಜ್ಯದಲ್ಲಿ ಹಲವು ಅಪಾಯಕಾರಿ ವೈರಸ್ ಗಳು ಬಂದು ಹೋಗಿವೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿಕನ್ ಪಾಕ್ಸ್ ವೈರಸ್ ಹರಡಿದ್ದು ದಕ್ಷಿಣ ಕನ್ನಡದ ಒಂದೇ ಶಾಲೆಯಲ್ಲಿ ಒಟ್ಟು 17 ಮಕ್ಕಳಲ್ಲಿ ಚಿಕನ್ ಪಾಕ್ಸ್ ವೈರಸ್ ಪತ್ತೆಯಾಗಿದೆ.
ಚಿಕನ್ ಪಾಕ್ಸ್ ಮಕ್ಕಳಲ್ಲಿ, ಯಾವುದೇ ತೊಂದರೆ ಇಲ್ಲದೇ ಸಂಪೂರ್ಣವಾಗಿ ಗುಣವಾಗುತ್ತದೆ. ಒಮ್ಮೆ ಚಿಕನ್ ಪಾಕ್ಸ್ನಿಂದ ಬಳಲಿದ ವ್ಯಕ್ತಿ ಜೀವಿತಾವಧಿಯವರೆಗೂ ಅದರ ವಿರುದ್ಧ ರೋಗ ನಿರೋಧಕ ಶಕ್ತಿ ಹೊಂದುತ್ತಾನೆ. ಇದರಿಂದ ಒಮ್ಮೆ ಚಿಕನ್ ಪಾಕ್ಸ್ ಬಂದವರಿಗೆ ಜೀವಿತಾವಧಿಯಲ್ಲಿ ಮತ್ತೊಮ್ಮೆ ಯಾವತ್ತೂ ಬರುವುದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಆರ್.ತಿಮ್ಮಯ್ಯ ತಿಳಿಸಿದರು.
ಶಾಲಾ ಮಕ್ಕಳಲ್ಲಿ ಚಿಕನ್ ಪಾಕ್ಸ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಭೀತಿ ಬೇಡ ಮುನ್ನೆಚ್ಚರಿಕೆ ಇರಲಿ. ಇದೊಂದು ಸಾಂಕ್ರಾಮಿಕ ಖಾಯಿಲೆಯಾದ್ದರಿಂದ ಯಾವುದೇ ಕಾರಣಕ್ಕೆ ಒಬ್ಬನಿಂದ ಮತ್ತೊಬ್ಬನಿಗೆ ಹರಡದಂತೆ ಜಾಗ್ರತೆ ವಹಿಸುವುದು ಅಗತ್ಯ. ಒಂದು ಬಾರಿ ಚಿಕನ್ ಪಾಕ್ಸ್ ಕಾಣಿಸಿಕೊಂಡರೆ ಗುಣಮುಖರಾಗಲು ಸುಮಾರು 2 ವಾರಗಳ ಸಮಯ ಬೇಕಾಗುತ್ತದೆ ಎಂದರು.








