ಬೆಂಗಳೂರು : ಬೆಂಗಳೂರಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇಬ್ಬರು ವಿದೇಶಿ ಪ್ರಜೆಗಳು ಸೇರಿ ಮೂವರು ಡ್ರಗ್ ಪೆಡ್ಲರ್ ಗಳನ್ನು ಅರೆಸ್ಟ್ ಮಾಡಿದ್ದಾರೆ.
ನೈಜರಿಯಾ ಮೂಲದ ಒಬಿಜೆಸಿ ಚಿಗೋಜೈ ದಾವಿ, ಸನಿ ಸಾದಿಕ್, ಬೆಂಗಳೂರಿನ ಮೊಹಮ್ಮದ್ ಮುಸ್ತಫಾ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಆರೋಪಿಗಳಿಂದ 4.20 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಬಾಗಲೂರು, ಅಶೋಕ್ ನಗರ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದರು.
ಪರಿಚಯಸ್ಥರು, ವಿದ್ಯಾರ್ಥಿಗಳು IT-BT ಉದ್ಯೋಗಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು.
ಬಾಗಲೂರು ವ್ಯಾಪ್ತಿಯಲ್ಲಿ 1 ಕೆಜಿ 20 ಗ್ರಾಂ MDMA, ಅಶೋಕನಗರದಲ್ಲಿ 2 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಸೀಜ್ ಮಾಡಿದ್ದಾರೆ. ಒಟ್ಟು 4.20 ಕೋಟಿ ಮೌಲ್ಯದ ಡ್ರಗ್ ಸೀಜ್ ಮಾಡಿದ್ದಾರೆ.








