Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದಲ್ಲಿ ವಿವಾಹೇತರ ಸಂಬಂಧದ ಕ್ರೇಜ್: 40 ಲಕ್ಷ ದಾಟಿದ ಬಳಕೆದಾರರು! ಯಾವ ನಗರಕ್ಕೆ ನಂ.1 ಸ್ಥಾನ?

10/03/2026 12:32 PM

ಕಾರ್ಮಿಕರಿಗೆ ಗುಡ್ ನ್ಯೂಸ್ : ಸರ್ಕಾರದ ಈ ಯೋಜನೆಯಡಿ ಪ್ರತಿ ತಿಂಗಳು ಸಿಗಲಿದೆ ₹3,000 ಪೆನ್ಷನ್ !

10/03/2026 12:30 PM

BIG NEWS : ‘ಗೃಹಲಕ್ಷ್ಮೀ’ ಯೋಜನೆಯಲ್ಲು ಭಾರಿ ಗೋಲ್ಮಾಲ್ : ಇದುವರೆಗೂ ಮೃತರ ಖಾತೆಗೆ 12 ಕೋಟಿ ಜಮೆ!

10/03/2026 12:25 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದಲ್ಲಿ ‘ಬಿಯರ್ ಮಾರಾಟ’ದಲ್ಲಿ ಭಾರೀ ಕುಸಿತ
KARNATAKA

BIG NEWS: ರಾಜ್ಯದಲ್ಲಿ ‘ಬಿಯರ್ ಮಾರಾಟ’ದಲ್ಲಿ ಭಾರೀ ಕುಸಿತ

By kannadanewsnow0908/12/2025 8:02 PM

ಬೆಳಗಾವಿ ಸುವರ್ಣಸೌಧ: ರಾಜ್ಯದಲ್ಲಿ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಸೆಪ್ಟೆಂಬರ್ 2025 ಅಂತ್ಯದವರೆಗೆ 195.27 ಲಕ್ಷ ಪೆಟ್ಟಿಗೆ ಬಿಯರ್ ಮಾರಾಟ ಮಾಡಲಾಗಿದ್ದು, ಇದು ಕಳೆದ ಇದೇ ಅವಧಿಗೆ ಹೋಲಿಸಿದಲ್ಲಿ 47.46 ಲಕ್ಷ ಪೆಟ್ಟಿಗೆಗಳು ಕಡಿಮೆ ಮಾರಾಟವಾಗಿ ಶೇ.19.55 ಋಣತ್ಮಾಕ ಬೆಳವಣಿಗೆಯಾಗಿರುತ್ತದೆ ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ತಿಳಿಸಿದ್ದಾರೆ.

ಅವರು ವಿಧಾನ ಪರಿಷತ್ ನಲ್ಲಿ, ರಾಜ್ಯದಲ್ಲಿ ಮದ್ಯಪಾನ ಸೇವನೆ ಮಾಡುತ್ತಿರುವವರು ಲಿವರ್ ಸಿರೋಸಿಸ್/ಜಾಂಡೀಸ್ ಎಂಬ ಪಿತ್ತಕೋಶ ಖಾಯಿಲೆಯಿಂದ ಬಳಲುತ್ತಿದ್ದು, ಅವರುಗಳ ಉತ್ತಮ ಚಿಕಿತ್ಸೆಗಾಗಿ ಅಬಕಾರಿ ಇಲಾಖೆಯ ಆದಾಯದ ಕನಿಷ್ಠ ಶೇ.20ರಷ್ಟು ಮೊತ್ತವನ್ನು ವಿನಿಯೋಗಿಸುವ ಕುರಿತ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಅವರ ನಿಯಮ 330 ರ ವಿಷಯಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಸಾಲಿನಲ್ಲಿ ಬಿಯರ್ ಮಾರಾಟವು ಕಡಿಮೆ ಮಾರಾಟವಾಗುತ್ತಿದ್ದು, ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಿದ್ದು, ಅಲ್ಲದೇ ಶೀತ ವಾತಾವರಣ ಇರುವುದರಿಂದ ಬಿಯರ್ ಮಾರಾಟದಲ್ಲಿ ಕುಸಿತ ಉಂಟಾಗಿರುವುದಕ್ಕೆ ಪ್ರಮುಖ ಕಾರಣವಾಗಿರುತ್ತದೆ.

ಅಬಕಾರಿ ಇಲಾಖೆಯಿಂದ ಸಂಗ್ರಹವಾಗುವ ಅಬಕಾರಿ ಆದಾಯವನ್ನು ರಾಜ್ಯದ ಸಂಚಿತ ನಿಧಿಗೆ ಜಮೆಗೊಳಿಸಿ ಆಯವ್ಯದಲ್ಲಿ ಅನುಮೋದಿಸಿಲ್ಪಟಿರುವ ಕಾರ್ಯಕ್ರಮಗಳಿಗೆ ವೆಚ್ಚಗೊಳಿಸುತ್ತಿದೆ. ಯಾವುದಾದರೂ ಒಂದು ಇಲಾಖೆಯಿಂದ ಸಂಚಿತ ನಿಧಿಗೆ ಜಮೆಯಾಗಿರುವ ಅನುದಾನವನ್ನು ಯಾವುದೇ ಒಂದು ಉದ್ದೇಶಕ್ಕಾಗಿ ವೆಚ್ಚಗೊಳಿಸುವ ಪದ್ದತಿ ಯನ್ನು ಜಾರಿಯಲ್ಲಿರುವುದಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದ ಜನರ ಸರ್ವಾಂಗೀಣ ಆರೋಗ್ಯ ಮತ್ತು ಚಿಕಿತ್ಸೆಗಾಗಿ ರಾಜ್ಯ ಸರ್ಕಾರದಿಂದ ಹಲವಾರು ಉಪ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಮತ್ತು ನ್ಯಾಷನಲ್ ಹೆಲ್ತ್ ಮಿಷನ್ ಮುಂತಾದ ಯೋಜನೆಗಳಡಿ ರಾಜ್ಯದ ಸಾರ್ವಜನಿಕರಿಗೆ ಸಾರ್ವಜನಿಕ ಆರೋಗ್ಯ ಕೇಂದ್ರಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಮೂಲಕ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ಆಯ್ಕವ್ಯಯದಲ್ಲಿ ಅಗತ್ಯ ಅನುದಾನವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ಬೇಡಿಕೆಯಡಿ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ವಿಷಯದ ಕುರಿತಂತೆ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಸದಸ್ಯರಾದ ಕೆ.ಎಸ್. ನವೀನ್, ಸಿ. ಟಿ. ರವಿ, ಶಿವಕುಮಾರ್, ಬಿ. ಕೆ. ಹರಿಪ್ರಸಾದ್, ರಮೇಶ್ ಬಾಬು, ಭಾರತಿ ಶೆಟ್ಟಿ, ಹೇಮಲತಾ ನಾಯಕ್, ಮಾತನಾಡಿ, ರಾಜ್ಯದಲ್ಲಿ ಕಳಪೆ ಮದ್ಯ ಮಾರಾಟ ಹಾಗೂ ಹೊಸ ಮದ್ಯದ0ಗಡಿ ತೆರೆಯಲು ಅವಕಾಶ ನೀಡಬಾರದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು, ಪ್ರತಿ ಜಿಲ್ಲೆಯಲ್ಲಿ ಗ್ಯಾಸ್ಟ್ರೋ ಎಂಟರೋಲೋಜಿಸ್ಟ್ ವೈದ್ಯರನ್ನು ನೇಮಿಸಬೇಕೆಂದು ಆಗ್ರಹಿಸಿದರು.

ಸಭಾ ನಾಯಕರಾದ ಸಣ್ಣ ನಿರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಬೋಸರಾಜು ಮಾತನಾಡಿ, ಸರ್ಕಾರ ಮದ್ಯಪಾನ ಸೇವನೆಗೆ ಉತ್ತೇಜನ ನೀಡುತ್ತಿಲ್ಲ, ಮದ್ಯಪಾನ ಹಾನಿಕರ ಎಂಬುದನ್ನು ಎಲ್ಲೆಡೆ ಅರಿವು ಮೂಡಿಸಲಾಗುತ್ತಿದೆ, ಮದ್ಯಪಾನ ನಿಯಂತ್ರಣ ಕುರಿತಂತೆ ಸಾರ್ವಜನಿಕರಲ್ಲಿ ಸ್ವಯಂ ಪ್ರೇರಣೆ ಯಿಂದ ನಿಯಂತ್ರಣ ಆಗಬೇಕು ಎಂದರು.

ಶಾಲೆಗಳ ಮಾನ್ಯತೆ ನವೀಕರಣ ನಿಯಮಗಳ ಪರಿಷ್ಕರಣೆಗೆ ಸದನ ಸಮಿತಿ ರಚನೆ: ಸಚಿವ ಮಧು ಬಂಗಾರಪ್ಪ

ALERT : ನಿಮ್ಮ `ಮನೆಯಲ್ಲಿ `ಇನ್ವರ್ಟರ್’ ಬಳಸುತ್ತೀರಾ? ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ.!

Share. Facebook Twitter LinkedIn WhatsApp Email

Related Posts

ಕಾರ್ಮಿಕರಿಗೆ ಗುಡ್ ನ್ಯೂಸ್ : ಸರ್ಕಾರದ ಈ ಯೋಜನೆಯಡಿ ಪ್ರತಿ ತಿಂಗಳು ಸಿಗಲಿದೆ ₹3,000 ಪೆನ್ಷನ್ !

10/03/2026 12:30 PM2 Mins Read

BIG NEWS : ‘ಗೃಹಲಕ್ಷ್ಮೀ’ ಯೋಜನೆಯಲ್ಲು ಭಾರಿ ಗೋಲ್ಮಾಲ್ : ಇದುವರೆಗೂ ಮೃತರ ಖಾತೆಗೆ 12 ಕೋಟಿ ಜಮೆ!

10/03/2026 12:25 PM1 Min Read

ವಾಹನ ಸವಾರರೇ ಗಮನಿಸಿ : `RTO’ ಕಚೇರಿಗೆ ಹೋಗದೇ `DL’ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

10/03/2026 12:19 PM2 Mins Read
Recent News

ಭಾರತದಲ್ಲಿ ವಿವಾಹೇತರ ಸಂಬಂಧದ ಕ್ರೇಜ್: 40 ಲಕ್ಷ ದಾಟಿದ ಬಳಕೆದಾರರು! ಯಾವ ನಗರಕ್ಕೆ ನಂ.1 ಸ್ಥಾನ?

10/03/2026 12:32 PM

ಕಾರ್ಮಿಕರಿಗೆ ಗುಡ್ ನ್ಯೂಸ್ : ಸರ್ಕಾರದ ಈ ಯೋಜನೆಯಡಿ ಪ್ರತಿ ತಿಂಗಳು ಸಿಗಲಿದೆ ₹3,000 ಪೆನ್ಷನ್ !

10/03/2026 12:30 PM

BIG NEWS : ‘ಗೃಹಲಕ್ಷ್ಮೀ’ ಯೋಜನೆಯಲ್ಲು ಭಾರಿ ಗೋಲ್ಮಾಲ್ : ಇದುವರೆಗೂ ಮೃತರ ಖಾತೆಗೆ 12 ಕೋಟಿ ಜಮೆ!

10/03/2026 12:25 PM

UNSC ಸಭೆ: ಆಫ್ಘಾನಿಸ್ತಾನದಲ್ಲಿನ ವೈಮಾನಿಕ ದಾಳಿ ಮತ್ತು ವ್ಯಾಪಾರ ನಿರ್ಬಂಧಗಳ ಬಗ್ಗೆ ಭಾರತ ತೀವ್ರ ಕಳವಳ!

10/03/2026 12:21 PM
State News
KARNATAKA

ಕಾರ್ಮಿಕರಿಗೆ ಗುಡ್ ನ್ಯೂಸ್ : ಸರ್ಕಾರದ ಈ ಯೋಜನೆಯಡಿ ಪ್ರತಿ ತಿಂಗಳು ಸಿಗಲಿದೆ ₹3,000 ಪೆನ್ಷನ್ !

By kannadanewsnow5710/03/2026 12:30 PM KARNATAKA 2 Mins Read

ದೇಶದ ಅಸಂಘಟಿತ ವಲಯದ ಕೋಟ್ಯಂತರ ಕಾರ್ಮಿಕರ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರವು ಒಂದು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಅದೇ…

BIG NEWS : ‘ಗೃಹಲಕ್ಷ್ಮೀ’ ಯೋಜನೆಯಲ್ಲು ಭಾರಿ ಗೋಲ್ಮಾಲ್ : ಇದುವರೆಗೂ ಮೃತರ ಖಾತೆಗೆ 12 ಕೋಟಿ ಜಮೆ!

10/03/2026 12:25 PM

ವಾಹನ ಸವಾರರೇ ಗಮನಿಸಿ : `RTO’ ಕಚೇರಿಗೆ ಹೋಗದೇ `DL’ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

10/03/2026 12:19 PM

ನಿಮ್ಮ ಕುಟುಂಬದ ಮೇಲೆ ನೆರಹೊರೆಯವರ ಕಣ್ಣು ಬೀಳದಂತೆ ಮಾಡಲು ಹೀಗೆ ಮಾಡಿ.!

10/03/2026 12:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.