Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಜಗ್ ಲಾಡ್ಕಿ’ ಸುರಕ್ಷಿತ ಆಗಮನ: 80,800 ಟನ್ ಕಚ್ಚಾ ತೈಲದೊಂದಿಗೆ ಗುಜರಾತ್ ಬಂದರು ತಲುಪಿದ ಭಾರತೀಯ ಹಡಗು!

18/03/2026 9:13 AM

ಆಸ್ತಿ ಖರೀದಿ ಒಪ್ಪಂದವಾದರೂ `ರಿಜಿಸ್ಟ್ರೇಷನ್’ ಮಾಡಿಕೊಡದಿದ್ದರೆ ಜಸ್ಟ್ ಹೀಗೆ ಮಾಡಿ !

18/03/2026 9:09 AM

​’ನಾನು ಇನ್ನೂ ಜೀವಂತವಾಗಿದ್ದೇನೆ’: ಅಮೆರಿಕ ರಾಯಭಾರಿ ಜೊತೆ ವಿಡಿಯೋ ಹಂಚಿಕೊಂಡ ನೆತನ್ಯಾಹು | Watch video

18/03/2026 8:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಪಾರದರ್ಶಕ: ಸಚಿವ ಬಿ.ಎಸ್.ಸುರೇಶ್
KARNATAKA

ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಪಾರದರ್ಶಕ: ಸಚಿವ ಬಿ.ಎಸ್.ಸುರೇಶ್

By kannadanewsnow0908/12/2025 7:14 PM

ಬೆಳಗಾವಿ ಸುವರ್ಣಸೌಧ: ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿದ್ದು, ಸದ್ಯ ರಾಜ್ಯದಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವರಾದ ಬಿ ಎಸ್ ಸುರೇಶ ಹೇಳಿದರು.

ನಗರಾಭಿವೃದ್ಧಿ ಇಲಾಖೆಯಿಂದ ಹಂಚಿಕೆ ಮಾಡುವ ಸಿ.ಎ. ನಿವೇಶನಗಳಿಗೆ ಸಾರ್ವಜನಿಕರು ನಿರಾಸಕ್ತಿ ತೋರಿಸುತ್ತಿರುವ ಬಗ್ಗೆ ಹಾಗೂ ಗುತ್ತಿಗೆಯನ್ನು ವಿಸ್ತರಿಸುವ ಪ್ರಕ್ರಿಯೆಯಲ್ಲಿ ಇಲಾಖೆಯು ಸಮರ್ಪಕವಾದ ನೀತಿಯನ್ನು ಅನುಸರಿಸುತ್ತಿಲ್ಲ ಎಂದು ಸದಸ್ಯರಾದ ಡಿ ಎಸ್ ಅರುಣ್ ಅವರು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರ ಗಮನ ಸೆಳೆಯುವ ಸೂಚನೆಯ ಮೇಲೆ ಮಾತನಾಡಿದ ಸಚಿವರು, ರಾಜ್ಯದಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಮತ್ತು ನಗರ ಯೋಜನಾ ಪ್ರಾಧಿಕಾರಗಳಲ್ಲಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರೀಕ ಸೌಲಭ್ಯ ನಿವೇಶನ ಹಂಚಿಕೆ) ನಿಯಮಗಳು 1991 ರನ್ವಯ ಹಾಗೂ ಕರ್ನಾಟಕ ಯೋಜನಾ ಪ್ರಾಧಿಕಾರಗಳ (ನಾಗರೀಕ ಸೌಕರ್ಯ ನಿವೇಶನಗಳ ಹಂಚಿಕೆ) 2016 ರನ್ವಯ ಕ್ರಮವಾಗಿ ನಾಗರೀಕ ಸೌಲಭ್ಯ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ.

ನಾಗರೀಕ ಸೌಲಭ್ಯ ನಿವೇಶನಗಳನ್ನು ಹಂಚಿಕೆ ಮಾಡಲು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರೀಕ ಸೌಲಭ್ಯ ನಿವೇಶನ ಹಂಚಿಕೆ) ನಿಯಮಗಳು 1991ರ ನಿಯಮ 7 ಉಪ ನಿಯಮ (3) ರನ್ವಯ ನಾಗರಿಕ ಸೌಲಭ್ಯಗಳುಳ್ಳ ನಿವೇಶನಗಳ ಹಂಚಿಕೆಯ ಸಮಿತಿಯನ್ನು ರಚಿಸಬಹುದಾಗಿದೆ. ಈ ಸಮಿತಿಯು ನಿಯಮ 7(1) ರಲ್ಲಿನ ಅಂಶಗಳೊಂದಿಗೆ ಪರಿಶೀಲಿಸಿ ನಾಗರೀಕ ಸೌಲಭ್ಯ ನಿವೇಶನ ಹಂಚಿಕೆ ಮಾಡಲು ಸಮಿತಿಯು ತೀರ್ಮಾನ ಕೈಗೊಳ್ಳುತ್ತದೆ. ಈ ತೀರ್ಮಾನವು ಪ್ರಾಧಿಕಾರದ ಅನುಮೋದನೆಗೆ ಒಳಪಟ್ಟಿರುತ್ತದೆ.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು-1991 ನಿಯಮ-8(1)ರ ರೀತ್ಯಾ ಉಪನೋಂದಣಾಧಿಕಾರಿಗಳ ಮಾರ್ಗಸೂಚಿ ಬೆಲೆಯನ್ನು ಅನುಸರಿಸಿ ಗುತ್ತಿಗೆ ಮೊತ್ತದ ದರವನ್ನು ನಿಗಧಿಪಡಿಸಬೇಕಾಗುತ್ತದೆ. ಅದರಂತೆ ಸಂಬAಧಪಟ್ಟ ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಯೋಜನಾ ಪ್ರಾಧಿಕಾರಗಳು ನಾಗರೀಕ ಸೌಕರ್ಯ ನಿವೇಶನಗಳನ್ನು ಗುತ್ತಿಗೆ ಆಧಾರದ ಮೇಲೆ 30 ವರ್ಷಗಳ ಅವಧಿಗೆ ನೀಡುತ್ತಿರುತ್ತದೆ.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು-1991 8(1) ರಂತೆ ಗುತ್ತಿಗೆ ಮೌಲ್ಯದ ಹೆಚ್ಚುವರಿ ಶೇ.50 ರಂತೆ ಗುತ್ತಿಗೆ, ಮೌಲ್ಯವನ್ನು ನಿಗಧಿಪಡಿಸಿ ನಿಯಮ-10 (14)ರನ್ವಯ ಸಿ.ಎ ನಿವೇಶನಗಳ ನವೀಕರಣವನ್ನು ಸರ್ಕಾರದ ಪೂರ್ವಾನುಮೋದನೆಯನ್ನು ಪಡೆದು ಮುಂದಿನ 30 ವರ್ಷಗಳ ಅವಧಿಗೆ ಗುತ್ತಿಗೆ ಅವಧಿಯನ್ನು ವಿಸ್ತರಿಸಬೇಕಾಗಿರುತ್ತದೆ.

ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಮತ್ತು ನಗರ ಯೋಜನಾ ಪ್ರಾಧಿಕಾರಗಳಿಗೆ ಸರ್ಕಾರದ ವತಿಯಿಂದ ಯಾವುದೇ ಅನುದಾನವನ್ನು ನೀಡುವುದಿಲ್ಲ. ಪ್ರಾಧಿಕಾರಗಳು ಸ್ವಂತ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಕಾರ್ಯ ನಿರ್ವಹಿಸುತ್ತವೆ.

ನಾಗರೀಕ ಸೌಲಭ್ಯ ನಿವೇಶನವನ್ನು ಗುತ್ತಿಗೆ ಆಧಾರದ ಮೇಲೆ ಸಂಘ ಸಂಸ್ಥೆಗಳಿಗೆ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ದರವನ್ನು ನಿಗಧಿಗೊಳಿಸಿ ಹಂಚಿಕೆ ಮಾಡಿದ್ದಲ್ಲಿ, ಪ್ರಾಧಿಕಾರಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರೀಕ ಸೌಲಭ್ಯ ನಿವೇಶನ ಹಂಚಿಕೆ) ನಿಯಮಗಳು, 1991 ರ ನಿಯಮ 8(4) ರಂತೆ ಹಾಗೂ ಯೋಜನಾ ಪ್ರಾಧಿಕಾರಗಳು (ನಾಗರೀಕ ಸೌಲಭ್ಯ ನಿವೇಶನ ಹಂಚಿಕೆ) ನಿಯಮಗಳು, 2016 ರ ನಿಯಮ 13(4) ರಂತೆ ವಿಕಲಚೇತನರು ಹಾಗೂ ಬುದ್ಧಿಮಾಂದ್ಯರ ಕಲ್ಯಾಣಕ್ಕಾಗಿ ಸ್ಥಾಪಿಸಲಾಗಿರುವ ಸಂಸ್ಥೆಗಳು, ಕೇವಲ ಕನ್ನಡ ಮಾಧ್ಯಮದಲ್ಲಿ ಶಾಲೆಯನ್ನು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗದ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳ ಇಲಾಖೆಗಳು ಮತ್ತು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ನಿಗಮ ಅಥವಾ ಯಾವುದೇ ಸಂಸ್ಥೆಗಳಿಗೆ ಪ್ರಾಧಿಕಾರವು ನಿಗಧಿಪಡಿಸಿದ ಗುತ್ತಿಗೆ ಹಣದ ಪೈಕಿ ಶೇ.50 ರಷ್ಟರ ದರದಲ್ಲಿ ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ.

ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆಗೆ ಸಂಬAಧಿಸಿದAತೆ ಒಂದಕ್ಕಿAತ ಹೆಚ್ಚು ಅರ್ಜಿದಾರರಿದ್ದಲ್ಲಿ ಲಾಟರಿ ಮುಖಾಂತರ ಹಂಚಿಕೆ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಗುತ್ತಿಗೆ ನವೀಕರಣಕ್ಕೆ ಸಂಬAಧಿಸಿದAತೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು, 1991 ಮತ್ತು ಕರ್ನಾಟಕ ಯೋಜನಾ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು, 2016 ರಲ್ಲಿ ಗುತ್ತಿಗೆಯನ್ನು ನವೀಕರಿಸಲು ಸ್ಪಷ್ಟ ಅವಕಾಶವಿರುತ್ತದೆ. ಆದುದರಿಂದ, ಈ ವಿಷಯದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದವಿರುವುದಿಲ್ಲ ಎಂದು ಸಚಿವರು ತಿಳಿಸಿದರು.

ಈಗ ಇರುವ ನಿವೇಶನಗಳಿಗೆ ಬೇಡಿಕೆಯಿಲ್ಲ. ಈಗ ನಿರ್ಮಿಸಿರುವ ನಿವೇಶನಗಳ ಹಸ್ತಾಂತರ ಪ್ರಕ್ರಿಯೆ ಮಾಡಿಲ್ಲ. ಸಿಎ ಸೈಟ್‌ಗಳನ್ನು ಎಸ್ಸಿ ಮತ್ತು ಎಸ್ಟಿಗಳಿಗೆ ಕಾಯ್ದಿರಿಸಬೇಕು ಎಂದು ಡಿ.ಎಸ್.ಅರುಣ ಅವರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಿಎ ಸೈಟ್‌ಗಳನ್ನು ಪರಬಾರೆ ಮಾಡಲು ಬರುವುದಿಲ್ಲ. ಎಸ್ಸಿ ಮತ್ತು ಎಸ್ಟಿಗಳಿಗೆ ಮಿತಿ ಹೇರಲು ಸಾಧ್ಯವಿಲ್ಲ. ಎಸ್ ಆರ್ ವ್ಯಾಲ್ಯು ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

Share. Facebook Twitter LinkedIn WhatsApp Email

Related Posts

ಆಸ್ತಿ ಖರೀದಿ ಒಪ್ಪಂದವಾದರೂ `ರಿಜಿಸ್ಟ್ರೇಷನ್’ ಮಾಡಿಕೊಡದಿದ್ದರೆ ಜಸ್ಟ್ ಹೀಗೆ ಮಾಡಿ !

18/03/2026 9:09 AM1 Min Read

ದೇಹದ ಉಸಿರಾಟದಿಂದ ಜೀರ್ಣಕ್ರಿಯೆಯವರೆಗೆ ಎಲ್ಲವನ್ನೂ ನಿಯಂತ್ರಿಸುತ್ತವೆ ಈ 10 ‘ಪ್ರಾಣ ವಾಯು’ಗಳು!

18/03/2026 8:52 AM2 Mins Read

‘LPG’ ಗ್ರಾಹಕರೇ ಗಮನಿಸಿ: ಗ್ಯಾಸ್ ಇಕೆವೈಸಿ (e-KYC) ಎಲ್ಲರಿಗೂ ಕಡ್ಡಾಯವೇ? ಇಲ್ಲಿದೆ ಅಸಲಿ ಮಾಹಿತಿ!

18/03/2026 8:36 AM1 Min Read
Recent News

​’ಜಗ್ ಲಾಡ್ಕಿ’ ಸುರಕ್ಷಿತ ಆಗಮನ: 80,800 ಟನ್ ಕಚ್ಚಾ ತೈಲದೊಂದಿಗೆ ಗುಜರಾತ್ ಬಂದರು ತಲುಪಿದ ಭಾರತೀಯ ಹಡಗು!

18/03/2026 9:13 AM

ಆಸ್ತಿ ಖರೀದಿ ಒಪ್ಪಂದವಾದರೂ `ರಿಜಿಸ್ಟ್ರೇಷನ್’ ಮಾಡಿಕೊಡದಿದ್ದರೆ ಜಸ್ಟ್ ಹೀಗೆ ಮಾಡಿ !

18/03/2026 9:09 AM

​’ನಾನು ಇನ್ನೂ ಜೀವಂತವಾಗಿದ್ದೇನೆ’: ಅಮೆರಿಕ ರಾಯಭಾರಿ ಜೊತೆ ವಿಡಿಯೋ ಹಂಚಿಕೊಂಡ ನೆತನ್ಯಾಹು | Watch video

18/03/2026 8:59 AM

ದೇಹದ ಉಸಿರಾಟದಿಂದ ಜೀರ್ಣಕ್ರಿಯೆಯವರೆಗೆ ಎಲ್ಲವನ್ನೂ ನಿಯಂತ್ರಿಸುತ್ತವೆ ಈ 10 ‘ಪ್ರಾಣ ವಾಯು’ಗಳು!

18/03/2026 8:52 AM
State News
KARNATAKA

ಆಸ್ತಿ ಖರೀದಿ ಒಪ್ಪಂದವಾದರೂ `ರಿಜಿಸ್ಟ್ರೇಷನ್’ ಮಾಡಿಕೊಡದಿದ್ದರೆ ಜಸ್ಟ್ ಹೀಗೆ ಮಾಡಿ !

By kannadanewsnow5718/03/2026 9:09 AM KARNATAKA 1 Min Read

ಆಸ್ತಿ ವ್ಯವಹಾರಗಳಲ್ಲಿ ‘ಅಗ್ರಿಮೆಂಟ್ ಆಫ್ ಸೇಲ್’ (ಮಾರಾಟದ ಒಪ್ಪಂದ) ಮಾಡಿಕೊಂಡ ನಂತರವೂ ಕೆಲವೊಮ್ಮೆ ಮಾರಾಟಗಾರರು ನೋಂದಣಿ (Registration) ಮಾಡಿಕೊಡಲು ಹಿಂದೇಟು…

ದೇಹದ ಉಸಿರಾಟದಿಂದ ಜೀರ್ಣಕ್ರಿಯೆಯವರೆಗೆ ಎಲ್ಲವನ್ನೂ ನಿಯಂತ್ರಿಸುತ್ತವೆ ಈ 10 ‘ಪ್ರಾಣ ವಾಯು’ಗಳು!

18/03/2026 8:52 AM

‘LPG’ ಗ್ರಾಹಕರೇ ಗಮನಿಸಿ: ಗ್ಯಾಸ್ ಇಕೆವೈಸಿ (e-KYC) ಎಲ್ಲರಿಗೂ ಕಡ್ಡಾಯವೇ? ಇಲ್ಲಿದೆ ಅಸಲಿ ಮಾಹಿತಿ!

18/03/2026 8:36 AM

ಪದೇ ಪದೇ ಸಂಚಾರ ನಿಯಮ ಉಲ್ಲಂಘನೆ: ನ್ಯಾಯಾಲಯದಿಂದ ಯುವಕನಿಗೆ ‘ವಿಭಿನ್ನ’ ಶಿಕ್ಷೆ!

18/03/2026 8:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.