ಮೈಸೂರು: ಹಣಕ್ಕಾಗಿ ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನ್ಯಾಪ್ ಮಾಡಿದ್ದ ಪ್ರಕರಣವನ್ನು ಪೊಲೀಸರು ಸಿನಿಮಿಯಾ ಶೈಲಿಯಲ್ಲಿ ಭೇದಿಸಿ ಕಿಡ್ನ್ಯಾಪ್ ಆದ ಕೆಲವೇ ಗಂಟೆಗಳಲ್ಲಿ ಅರೋಪಿಗಳ ಎಡೆಮುರಿಕಟ್ಟಿದ್ದಾರೆ.
ವಿಜಯನಗರದ ಹೆರಿಟೇಜ್ ಕ್ಲಬ್ ಬಳಿ ವಿಜಯನಗರ ಮೂರನೇ ಹಂತದ ನಿವಾಸಿ ಲೋಕೇಶ್ ಎಂಬವರನ್ನು, ಟಾಟಾ ಸುಮೋದಲ್ಲಿ ಬಂದ ಐದು ಮಂದಿ ಅಪಹರಣ ಮಾಡಿದ್ದರು. ಬಳಿಕ ಲೋಕೇಶ್ ಮೊಬೈಲ್‌ನಿಂದ ಅವರ ಪತ್ನಿಗೆ ಕರೆ ಮಾಡಿ ಆರೋಪಿಗಳು 30 ಲಕ್ಷ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಗಾಬರಿಗೊಂಡ ಲೋಕೇಶ್ ಪತ್ನಿ ವಿಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಅಲರ್ಟ್ ಆದ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಮೈಸೂರಿನಿಂದ 50 ಕಿ.ಮೀ. ದೂರದಲ್ಲಿ ಆರೋಪಗಳನ್ನು ಬಂಧಿಸಿ, ಅಪಹರಣವಾದ ಲೋಕೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಹದಿನೈದು ದಿನಗಳಿಂದ ನವೀನ್ ಚಲನವಲನ ಫಾಲೋ ಮಾಡುತ್ತಿದ್ದ ಆರೋಪಿಗಳು ಹೆರಿಟೇಜ್ ಕ್ಲಬ್‌ಗೆ ಹೋಗಿ ವಾಪಸ್ ಬರುವ ವೇಳೆ ಕಿಡ್ನ್ಯಾಪ್ ಮಾಡಿದ್ದರು.








