Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

PCOS ಇನ್ಮುಂದೆ ‘PMOS’ : ಮಹಿಳೆಯರ ಈ ಹಾರ್ಮೋನ್ ಸಮಸ್ಯೆಯ ಹೆಸರು ಬದಲಾವಣೆ.!

Viral : ಮದುವೆ ಮಂಟಪಕ್ಕೂ ಎಂಟ್ರಿ ಕೊಟ್ಟ `ಸ್ವಿಗ್ಗಿ ಇನ್‌ ಸ್ಟಾಮಾರ್ಟ್’ : ವಿಡಿಯೋ ವೈರಲ್ | WATCH VIDEO

BREAKING : ತಮಿಳುನಾಡು ವಿಧಾನಸಭೆಯಲ್ಲಿ ಗೆದ್ದ ಸಿಎಂ ವಿಜಯ್ : `TVK’ ಪಕ್ಷಕ್ಕೆ ಬಹುಮತ ಸಾಬೀತು | TVK party majority

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗುರುಗಳು ಹೇಳಿದ ಆ ಮಾತು ಯುವಕನ ಮನಸ್ಸನ್ನೇ ಪರಿವರ್ತಿಸಿತು: ಕಷ್ಟವೆಂದು ಯೋಚಿಸೋ ಮುನ್ನ ಈ ಕತೆ ಓದಿ
KARNATAKA

ಗುರುಗಳು ಹೇಳಿದ ಆ ಮಾತು ಯುವಕನ ಮನಸ್ಸನ್ನೇ ಪರಿವರ್ತಿಸಿತು: ಕಷ್ಟವೆಂದು ಯೋಚಿಸೋ ಮುನ್ನ ಈ ಕತೆ ಓದಿ

By ವಸಂತ ಬಿ ಈಶ್ವರಗೆರೆ

ಒಬ್ಬ ಯುವಕನಿಗೆ ಬದುಕೇ ಬೇಸರವಾಗಿತ್ತು. ಯಾವುದರಲ್ಲೂ ಆಸಕ್ತಿಇಲ್ಲ. ಒಂಥರಾ ಖಿನ್ನತೆ. ಮನೆಯಲ್ಲಿ ಒಬ್ಬನೇ ಕುಳಿತಿರುತ್ತಿದ್ದ. ಸ್ನೇಹಿತರ ಜತೆಗೆ ಬೆರೆಯುವುದು ಕೂಡಾ ಬೇಡ ಅನಿಸುತ್ತಿತ್ತು. ಒಂದು ದಿನ ಆ ಊರಿಗೆ ಒಬ್ಬ ಗುರುಗಳು ಬಂದಿದ್ದಾರೆ ಎನ್ನುವ ಸುದ್ದಿ ಅವನಿಗೆ ಗೊತ್ತಾಯಿತು. ತನ್ನ ಸಮಸ್ಯೆಗೆ ಅವರ ಬಳಿ ಏನಾದರೂ ಪರಿಹಾರ ಇರಬಹುದಾ ಎಂದು ಯೋಚಿಸಿದ.
ಯುವಕ ಗುರುಗಳ ಬಳಿಗೆ ಹೋಗಿ, ʻʻಜೀವನದಲ್ಲಿ ನನಗೆ ಹಲವಾರು ಸಮಸ್ಯೆಗಳಿವೆ. ಹಾಗಾಗಿ ಸದಾ ಬೇಸರದಲ್ಲಿ ಕಾಲ ಕಳೆಯುತ್ತಿದ್ದೇನೆ. ನಾನು ಎಲ್ಲರ ಹಾಗೆ ಸಂತೋಷವಾಗಿರೋದು ಹೇಗೆ? ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿʼʼ ಎಂದು ಕೇಳಿದ.

ಗುರುಗಳು ಯುವಕ ಹೇಳಿದ್ದೆಲ್ಲವನ್ನೂ ಗಮನವಿಟ್ಟು ಕೇಳಿದರು. ಆದರೆ, ಏನೂ ಉತ್ತರ ನೀಡದೆ ಎದ್ದು ಒಳಗೆ ನಡೆದರು. ಯುವಕನಿಗೆ ಗೊಂದಲವಾಯಿತು. ʻʻನಾನೇನೋ ಇವರಾದರೂ ಪರಿಹಾರ ಹೇಳುತ್ತಾರೆ ಎಂದು ಇಲ್ಲಿಗೆ ಬಂದರೆ ಏನೂ ಹೇಳದೆ ಒಳಗೆ ಹೋಗಿಬಿಟ್ಟರಲ್ಲʼʼ ಅಂತ ಮನಸ್ಸಿನೊಳಗೇ ಹೇಳಿಕೊಂಡ. ಅಷ್ಟು ಹೊತ್ತಿಗೆ ಗುರುಗಳು ಹೊರಗೆ ಬಂದರು. ಅವರ ಒಂದು ಕೈಯಲ್ಲಿ ಒಂದು ಲೋಟ ನೀರು ಮತ್ತು ಒಂದು ಉಪ್ಪಿನ ಡಬ್ಬಿ ಇತ್ತು.

ʻʻಹುಡುಗಾ.. ಈ ಡಬ್ಬಿಯಿಂದ ಒಂದು ಮುಷ್ಟಿ ಉಪ್ಪು ತೆಗೆದು ಲೋಟದಲ್ಲಿರುವ ನೀರಿಗೆ ಹಾಕುʼʼ ಎಂದರು. ಯುವಕ ಹಾಗೇ ಮಾಡಿದ… ಉಪ್ಪು ಹಾಗೇ ನೀರಲ್ಲಿ ಕರಗಿತು. ಆ ಗುರುಗಳು ʻಅದನ್ನು ಕುಡಿʼ ಅಂದ್ರು. ಯವಕನಿಗೆ ಏನಪ್ಪಾ ಇದು ಅನಿಸಿತು.. ಆದರೆ, ಅಡ್ಡ ಮಾತು ಹೇಳಲಾಗದೆ ಒಂದು ಸಿಪ್‌ ಕುಡಿದ. ಅದಕ್ಕಿಂತ ಜಾಸ್ತಿ ಕುಡಿಯಲು ಆಗಲೇ ಇಲ್ಲ.

ಮುಖ ಸೊಟ್ಟಗೆ ಮಾಡಿದ ಯುವಕನಲ್ಲಿ ಗುರುಗಳು ಕೇಳಿದರು: ಹೇಗಿತ್ತಪ್ಪಾ ನೀರು?

ಹುಡುಗ ಹೇಳಿದ: ಕುಡಿಯಲು ಸಾಧ್ಯವೇ ಇಲ್ಲ ಗುರುಗಳೇ.. ಅಷ್ಟು ಉಪ್ಪಾಗಿದೆ.

ಗುರುಗಳು ನಕ್ಕು ಹೇಳಿದರು: ಆಯ್ತು ಬಿಡು.. ಈಗ ಒಂದು ಮುಷ್ಟಿ ಉಪ್ಪು ಹಿಡಿದುಕೊಂಡು ನನ್ನ ಜತೆಗೆ ಬಾ…

ಗುರುಗಳು ಯುವಕನನ್ನು ಒಂದು ಕೊಳದ ಬಳಿಗೆ ಕರೆದುಕೊಂಡು ಹೋದರು. ಕೈಯಲ್ಲಿರುವ ಉಪ್ಪನ್ನು ಕೊಳಕ್ಕೆ ಹಾಕು ಎಂದರು. ಹುಡುಗ ಹಾಕಿದ. ಈಗ ಒಂದು ಬೊಗಸೆ ನೀರು ಎತ್ತಿ ಕುಡಿ ಅಂದರು. ಯುವಕ ಕುಡಿದ.

ಗುರುಗಳು ʻಹೇಗಿದೆಯಪ್ಪಾ ನೀರುʼ ಎಂದು ಕೇಳಿದರು.
ಆಗ ಹುಡುಗ: ಚೆನ್ನಾಗಿದೆ ಗುರುಗಳೇ..
ಗುರುಗಳು ಕೇಳಿದರು: ಉಪ್ಪುಪ್ಪಾಗಿ ಏನಾದ್ರೂ ಇತ್ತಾ?
ಇಲ್ಲ ಗುರುಗಳೇ.. ಚೆನ್ನಾಗೇ ಇತ್ತು: ಎಂದ ಯುವಕ.

ಗುರುಗಳು ಕೊಳದ ಪಕ್ಕದಲ್ಲಿ ಯುವಕನನ್ನು ತನ್ನ ಜತೆ ಕೂರಿಸಿಕೊಂಡರು. ಅವನ ಕೈ ಹಿಡಿದುಕೊಂಡು ಹೇಳಿದರು: ಹುಡುಗಾ.. ಬದುಕಿನಲ್ಲಿ ನೋವು ಅನ್ನುವುದು ಉಪ್ಪಿದ್ದ ಹಾಗೆ. ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ಉಪ್ಪಿನ ಪ್ರಮಾಣವೂ ಒಂದೇ ಇರುತ್ತದೆ. ಆದರೆ, ನಾವು ಅದನ್ನು ಯಾವುದಕ್ಕೆ ಹಾಕುತ್ತೇವೆ ಅನ್ನುವುದರ ಮೇಲೆ ಅದರ ರುಚಿಯಲ್ಲಿ ವ್ಯತ್ಯಾಸವಾಗುತ್ತದೆ.

ಉಪ್ಪು ಇದೆ ಅಂತ ಅದನ್ನಷ್ಟೇ ತಿನ್ನುತ್ತಾ ಕಹಿಯೇ ಆಗುತ್ತದೆ. ಸ್ವಲ್ಪ ಉಪ್ಪನ್ನು ಸಾರಿಗೆ ಹಾಕು, ಸ್ವಲ್ಪ ಸಾಂಬಾರಿಗೆ, ಸ್ವಲ್ಪ ಮಜ್ಜಿಗೆಗೆ, ಇನ್ನು ಸ್ವಲ್ಪ ಚಟ್ನಿಗೆ ಹಾಕು. ಎಲ್ಲವೂ ಎಷ್ಟೊಂದು ರುಚಿ ಅನಿಸ್ತದೆ ನೀನೇ ನೋಡು.

ಅಂದ್ರೆ ನೀನು ನೋವು, ಬೇಸರ ಅಂತ ಮೂಲೆಯಲ್ಲಿ ಕೂತರೆ ಅಲ್ಲೇ ನರಳುತ್ತಾ ಇರ್ತೀಯಾ…. ಹೊರಗಡೆ ವಿಶಾಲವಾಧ ಜಗತ್ತಿದೆ.. ಈ ಕೊಳದ ಹಾಗೆ.. ಅದರ ಜತೆಗೆ ಬೆರೆತು ನೋಡು.. ನೋವು ಕೂಡಾ ಖುಷಿಯಾಗಿ ಬದಲಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಗುರುಗಳ ಕಾಲಿಗೆ ನಮಸ್ಕರಿಸಿ ಹೊರಟ ಯುವಕನಿಗೆ ನೆನಪಾಯಿತು.. ಓ ಇವತ್ತು ತಂಗಿಯ ಹುಟ್ಟಿದ ಹಬ್ಬ ಅಲ್ವಾ? ಹುರುಪಿನಿಂದ ಹೊರಟ.

Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಮತ್ತೊಂದು ದರೋಡೆ : ಹುಬ್ಬಳ್ಳಿಯ ಜೈನ ಮಂದಿರದಲ್ಲಿ 3 ಕೆಜಿಗೂ ಅಧಿಕ ಬೆಳ್ಳಿ, ಚಿನ್ನಾಭರಣ ಕಳ್ಳತನ!

1 Min Read

Vastu Tips: ಮನೆಯಲ್ಲಿ ದಿಢೀರ್‌ ದುರ್ವಾಸನೆ ಬರುತ್ತಿದೆಯೇ? ಹಾಗಿದ್ದರೆ ಈ ವಾಸ್ತು ದೋಷಗಳೇ ಕಾರಣವಿರಬಹುದು!

1 Min Read

BIG NEWS : ಕರ್ನಾಟಕದ `MLC’ಗಳಿಗಿರುವ ವೇತನ, ಸೌಲಭ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ | Karnataka MLC

2 Mins Read
Recent News

PCOS ಇನ್ಮುಂದೆ ‘PMOS’ : ಮಹಿಳೆಯರ ಈ ಹಾರ್ಮೋನ್ ಸಮಸ್ಯೆಯ ಹೆಸರು ಬದಲಾವಣೆ.!

Viral : ಮದುವೆ ಮಂಟಪಕ್ಕೂ ಎಂಟ್ರಿ ಕೊಟ್ಟ `ಸ್ವಿಗ್ಗಿ ಇನ್‌ ಸ್ಟಾಮಾರ್ಟ್’ : ವಿಡಿಯೋ ವೈರಲ್ | WATCH VIDEO

BREAKING : ತಮಿಳುನಾಡು ವಿಧಾನಸಭೆಯಲ್ಲಿ ಗೆದ್ದ ಸಿಎಂ ವಿಜಯ್ : `TVK’ ಪಕ್ಷಕ್ಕೆ ಬಹುಮತ ಸಾಬೀತು | TVK party majority

BREAKING : ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ವಿಜಯ್ ನೇತೃತ್ವದ ಸರ್ಕಾರಕ್ಕೆ ಗೆಲುವು : `DMK’ ವಾಕೌಟ್ ನಡುವೆ ಬಹುಮತ ಸಾಬೀತು

State News
KARNATAKA

BREAKING : ರಾಜ್ಯದಲ್ಲಿ ಮತ್ತೊಂದು ದರೋಡೆ : ಹುಬ್ಬಳ್ಳಿಯ ಜೈನ ಮಂದಿರದಲ್ಲಿ 3 ಕೆಜಿಗೂ ಅಧಿಕ ಬೆಳ್ಳಿ, ಚಿನ್ನಾಭರಣ ಕಳ್ಳತನ!

By ಸುರೇಶ್‌ KARNATAKA 1 Min Read

ಹುಬ್ಬಳ್ಳಿ : ರಾಜ್ಯದಲ್ಲಿ ಮತ್ತೊಂದು ಬೃಹತ್ ದರೋಡೆ ನಡೆದಿದ್ದು, ಹುಬ್ಬಳ್ಳಿಯ ಜೈನ ಮಂದಿರದಲ್ಲಿ ತಡರಾತ್ರಿ ಕಳ್ಳರು ನುಗ್ಗಿ ಸುಮಾರು 3…

Vastu Tips: ಮನೆಯಲ್ಲಿ ದಿಢೀರ್‌ ದುರ್ವಾಸನೆ ಬರುತ್ತಿದೆಯೇ? ಹಾಗಿದ್ದರೆ ಈ ವಾಸ್ತು ದೋಷಗಳೇ ಕಾರಣವಿರಬಹುದು!

BIG NEWS : ಕರ್ನಾಟಕದ `MLC’ಗಳಿಗಿರುವ ವೇತನ, ಸೌಲಭ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ | Karnataka MLC

Passenger Alert : ರೈಲಿನಲ್ಲಿ ಆಹಾರ, ನೀರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ದೂರು ನೀಡುವುದು ಹೇಗೆ? ಇಲ್ಲಿದೆ ಮಾಹಿತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.