ಬೀದರ್ : ಶಾರ್ಟ್ ಸರ್ಕ್ಯೂಟ್ ನಿಂದ 7 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುವ ಘೋರ ಘಟನೆ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಸಿದ್ದೇಶ್ವರ ಗ್ರಾಮದಲ್ಲಿ ನಡೆದಿದೆ.
ಸಿದ್ದೇಶ್ವರ ಗ್ರಾಮದ ರೈತ ಸಂಗಮೇಶ್ವರನಳ್ಳಿಗೆ ಸೇರಿದ 7 ಎಕರೆ ಕಬ್ಬು ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ವರ್ಷವಿಡಿ ಕಷ್ಟಪಟ್ಟು ಬೆಳೆದಿದ್ದ ಕಬ್ಬು ಬೆಳೆ ರೈತನ ಕಣ್ಣೆದುರೇ ಸುಟ್ಟು ಬಸ್ಮವಾಗಿದೆ ಏಳು ಎಕರೆ ಕಬ್ಬು ಬೆಳೆ, ಬೆಂಕಿಗೆ ಆಹುತಿಯಾಗಿದ್ದನ್ನು ಕಂಡು ರೈತ ಕಣ್ಣೀರು ಹಾಕಿದ್ದಾರೆ ಜೆಸ್ಕಾಂ ಅಧಿಕಾರಿಗಳ ವಿರುದ್ಧ ರೈತ ಸಂಗಮೇಶ್ ತರನಳ್ಳಿ ಆಕ್ರೋಶ ಹೊರಹಾಕಿದ್ದಾರೆ ಬೆಂಕಿಗೆ ಆಹುತಿಯಾದ ಕಬ್ಬು ಬೆಳೆಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.








