ಬೆಂಗಳೂರು : ಮೈಸೂರು ಸಿಲ್ಕ್ ರೀತಿ ಕನಕಪುರ ಸಿಲ್ಕ್ ಆರಂಭಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಬೆಂಗಳೂರಿನ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಇಂದು ಸಂಜೆ ಶಕ್ತಿ ಸಂಜೆ-ಸೀರೆ ವಾಕಥಾನ್‌ಗೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಮಹಿಳೆಯರಿಗಾಗಿ ಮೂರು ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಈ ವಾಕಥಾನ್ ಕೇವಲ ಸೀರೆಯ ಆಚರಣೆಯಾಗಿರಲಿಲ್ಲ, ಇದು ಕರ್ನಾಟಕದ ಮಹಿಳೆಯರ ಸ್ಥಿತಿಸ್ಥಾಪಕತ್ವ, ಘನತೆ ಮತ್ತು ಶಕ್ತಿಯ ಆಚರಣೆಯಾಗಿತ್ತು. ಸಂಸ್ಕೃತಿ ಮತ್ತು ಆತ್ಮವಿಶ್ವಾಸದಿಂದ ಸುತ್ತುವರೆದ ನೂರಾರು ಜನರು ಒಟ್ಟಿಗೆ ನಡೆಯುವುದನ್ನು ನೋಡುವುದು, ಮಹಿಳಾ ಸಬಲೀಕರಣವು ಘೋಷಣೆಯಾಗಿಲ್ಲ, ಆದರೆ ದೈನಂದಿನ ವಾಸ್ತವವಾಗಿರುವ ರಾಜ್ಯವನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿತು ಎಂದು ಹೇಳಿದ್ದಾರೆ.
ಇನ್ನೂ ಇದೇ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸೌಮ್ಯಾ ರೆಡ್ಡಿ, ನಟಿ ಪೂಜಾಗಾಂಧಿ ಭರ್ಜರಿ ನೃತ್ಯ ಮಾಡಿದ್ದಾರೆ.
Flagged off the ಶಕ್ತಿ ಸಂಜೆ-ಸೀರೆ Walkathon this evening at Kittur Rani Chennamma Grounds, Jayanagar.
This walkathon was not just a celebration of the saree, it was a celebration of the resilience, dignity, and power of Karnataka’s women.
Seeing hundreds walk together, draped in… pic.twitter.com/oPxs2Cl2jE
— DK Shivakumar (@DKShivakumar) November 30, 2025
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ @Sowmyareddyr ಯವರು ಆಯೋಜಿಸಿರುವ ಸೀರೆ ವಾಕಥಾನ್ "ಮಹಿಳೆಯರ ನಡೆ ಪ್ರಗತಿಯ ಕಡೆ" ಹೆಸರಿನಲ್ಲಿ ಮಹಿಳಾ ಮಾರುಕಟ್ಟೆಗೆ ಬೃಹತ್ ವೇದಿಕೆ.
ಬನ್ನಿ ಜೊತೆಯಲ್ಲಿ ಹೆಜ್ಜೆ ಹಾಕೋಣ.#SareeWalkathon #womensupportingwomen #womeninbusiness #womenempowement pic.twitter.com/XO9wzCDDMf
— Karnataka Pradesh Mahila Congress (@KarnatakaPMC) November 29, 2025








