ಬೆಂಗಳೂರು: ರೈತರಿಂದ ಪ್ರತಿ ಕ್ವಿಂಟಲ್‌ಗೆ 2400 ರೂ. ದರದಲ್ಲಿ ಮೆಕ್ಕೆಜೋಳ ಖರೀದಿಸಲು ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಮೆಕ್ಕೆ ಜೋಳ ಸೇರಿ ಧಾನ್ಯ ಆಧಾರಿತ ಎಥೆನಾಲ್ ಉತ್ಪಾದಿಸುವ ಡಿಸ್ಟಿಲರಿಗಳುನಾಫೆಡ್ ಬದಲಿಗೆ ಕರ್ನಾಟಕ ರಾಜ್ಯ ಸಹಕಾರಮಾರಾಟ ಮಹಾಮಂಡಳ (ಕೆಎಸ್‌ಸಿಎಂಎಫ್) ಮೂಲಕ ರೈತರಿಂದ ಪ್ರತಿ ಕ್ವಿಂಟಲ್‌ಗೆ 2400 ರೂ. ದರದಲ್ಲಿ ಮೆಕ್ಕೆಜೋಳ ಖರೀದಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಾರುಕಟ್ಟೆಯಲ್ಲಿ 1600 ರೂ.ಗಳಿಂದ 1900 ರೂ. ಪ್ರತಿ ಕ್ವಿಂಟಲ್‌ಗೆ ಧಾರಣೆ ಇದೆ. ಹೀಗಾಗಿ 2639ಗೆ ಖರೀದಿಸಿದರೆ ಸಮಸ್ಯೆಯಾಗುತ್ತದೆಂದು ಡಿಸ್ಟಿಲರಿ ಮಾಲೀಕರು ಸರ್ಕಾರಕ್ಕೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ 2400 ರೂ.ಗೆ ಖರೀದಿಸಲು ಅವಕಾಶ ಕಲ್ಪಿಸಿದೆ.








