Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಡಿಸಿಎಂ ಡಿಕೆಶಿ ಬಳಿಕ ಮಾರ್ಚ್ 16 ರಂದು ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ ಸಿಎಂ ಸಿದ್ದರಾಮಯ್ಯ!

13/03/2026 10:25 AM

ಯುದ್ಧದ ಕಿಚ್ಚಿಗೆ ನಲುಗಿದ ಜಾಗತಿಕ ಮಾರುಕಟ್ಟೆ: ಏಷ್ಯಾ ಷೇರುಗಳು ಪಾತಾಳಕ್ಕೆ, $100ರ ಸನಿಹದಲ್ಲೇ ತೈಲ ದರ!

13/03/2026 10:12 AM

BREAKING : ಕೋಮಾಗೆ ಜಾರಿದ ಇರಾನ್ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮನೈ, ಎರಡು ಕಾಲು ಸಹ ಕಟ್!

13/03/2026 10:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೆಸೆಟ್ ಪ್ರಮಾಣ ಪತ್ರ ಪಡೆದ ಬಸ್ ಕಂಡಕ್ಟರ್, ಪಾಲಿಕೆ ಮಾರ್ಷಲ್
KARNATAKA

ಕೆಸೆಟ್ ಪ್ರಮಾಣ ಪತ್ರ ಪಡೆದ ಬಸ್ ಕಂಡಕ್ಟರ್, ಪಾಲಿಕೆ ಮಾರ್ಷಲ್

By kannadanewsnow0529/11/2025 6:28 PM

ಬೆಂಗಳೂರು : ದಾಖಲೆ ಅವಧಿಯಲ್ಲಿ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್) ನಡೆಸಿ, ಫಲಿತಾಂಶ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಅಷ್ಟೇ ತ್ವರಿತವಾಗಿ ಅರ್ಹರ ದಾಖಲೆ ಪರಿಶೀಲಿಸಿ ಪ್ರಮಾಣ ಪತ್ರ ಕೊಡುವ ಕೆಲಸವನ್ನೂ ಶನಿವಾರ ಆರಂಭಿಸಿತು.

ನ.2ರಂದು ಕೆಸೆಟ್ ಲಿಖಿತ ಪರೀಕ್ಷೆ ಹಾಗೂ ನ.15ರಂದು ಫಲಿತಾಂಶ ಪ್ರಕಟಿಸಿತು. ನ.29ರಿಂದ ದಾಖಲೆ ಪರಿಶೀಲಿಸಿ, ಪ್ರಮಾಣ ಪತ್ರ ವಿತರಿಸುವ ಕೆಲಸಕ್ಕೂ ಚಾಲನೆ ನೀಡಿತು. ಕೆಇಎ ಕಚೇರಿಯ ನವೀಕೃತ ಸಭಾಂಗಣದಲ್ಲಿ ನಡೆದ ಪರಿಶೀಲನೆ ವೇಳೆ ಅರ್ಹರಾದ ಅಭ್ಯರ್ಥಿಗಳಿಗೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಸಾಂಕೇತಿಕವಾಗಿ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು.

ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ, ಕೆ-ಸೆಟ್ ಅಧ್ಯಕ್ಷರಾದ ವಿಶ್ರಾಂತ ಕುಲಪತಿ ಪ್ರೊ ಬಿ.ತಿಮ್ಮೇಗೌಡ ಅವರೂ ಈ ಸಂದರ್ಭದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಿ, ಶುಭ ಕೋರಿದರು. ಬೆಳಗಿನ ಸಮಯದಲ್ಲಿ ಕನ್ನಡ ಹಾಗೂ ಮಧ್ಯಾಹ್ನದ ನಂತರ ಮ್ಯಾನೇಜ್ಮೆಂಟ್ ವಿಷಯಗಳ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಯಿತು. ಬಳಿಕ ಅಲ್ಲೇ ದಾಖಲೆ ಸರಿ ಇದ್ದವರಿಗೆ ಪ್ರಮಾಣ ಪತ್ರ‌ ನೀಡಲಾಯಿತು.

ಶನಿವಾರ ಕೆಸೆಟ್ ಪ್ರಮಾಣ ಪತ್ರ ಪಡೆದವರಲ್ಲಿ ಬಿಎಂಟಿಸಿ ಕಂಡಕ್ಟರ್ ಜಯಮ್ಮ ಹಾಗೂ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಾರ್ಷಲ್ ಆಗಿ ಕಾರ್ಯನಿರ್ವಹಿಸುವ ಅರವಿಂದ ಅವರು ಸೇರಿದ್ದಾರೆ.

‘ನಮ್ಮಂತಹ ಬಡವರು ಕೂಡ ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರೆ ಅದಕ್ಕೆ ಕೆಇಎ ಅಳವಡಿಸಿಕೊಂಡಿರುವ ಪಾರದರ್ಶಕ ವ್ಯವಸ್ಥೆ ಕೂಡ ಕಾರಣ. ಕಷ್ಟಪಟ್ಟು ಓದಿದರೆ ಫಲ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ನಾವೇ ನಿದರ್ಶನ. ಉಪನ್ಯಾಸಕರಾಗಬೇಕೆನ್ನುವ ಕನಸು ನನಸಾಗುವ ಕಾಲ ಬಂದಿದೆ’ ಎಂದು ಇಬ್ಬರೂ ಕೆಇಎ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

‘ಕೆಇಎ ನಡೆಸಿದ ಪರೀಕ್ಷೆಯಿಂದಲೇ ಕಂಡಕ್ಟರ್ ಉದ್ಯೋಗ ಸಿಕ್ಕಿತು. ಈಗ ಕೆ-ಸೆಟ್ ಆಗಿದೆ. ಮುಂದೊಂದು ದಿನ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಉತ್ತೀರ್ಣರಾಗುವ ವಿಶ್ವಾಸ ಇದೆ’ ಎನ್ನುತ್ತಾರೆ ಜಯಮ್ಮ. ‘ತ್ಯಾಜ್ಯ ವಿಲೇವಾರಿ ಘಟಕದ ಬಳಿಯೂ ಸಮಯ ಸಿಕ್ಕಾಗ ಓದುತ್ತಿದ್ದೆ. ಅದು ನನ್ನ ಕೈಹಿಡಿಯಿತು. ಕಷ್ಟಗಳೇ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಒಟ್ಟಿನಲ್ಲಿ ನನ್ನಾಸೆ ಈಡೇರಿದೆ ಎಂದು ಅರವಿಂದ ಹರ್ಷ ವ್ಯಕ್ತಪಡಿಸುತ್ತಾರೆ.

#KSET-25: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ #BMTC #conductor ಜಯಮ್ಮ ಅವರಿಗೆ #KEA ಕಡೆಯಿಂದ ಅಭಿನಂದನೆಗಳು.

ಬೆಂಗಳೂರಿನವರೇ ಆದ ಅವರು ಕನ್ನಡ ವಿಷಯದಲ್ಲಿ ಕೆಸೆಟ್ ಪರೀಕ್ಷೆ ತೆಗೆದುಕೊಂಡು, ಅರ್ಹರಾಗಿ ಮಹಾತ್ಸಾಧನೆ ಮಾಡಿದ್ದಾರೆ.

ನಮ್ಮಂತಹವರೂ ಪರೀಕ್ಷೆಯಲ್ಲಿ ಅರ್ಹತೆ ಪಡೆಯಬಹುದು ಎನ್ನುವುದಕ್ಕೆ #KEA… pic.twitter.com/ZakDi5jfFm

— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) November 29, 2025

Share. Facebook Twitter LinkedIn WhatsApp Email

Related Posts

BREAKING : ಡಿಸಿಎಂ ಡಿಕೆಶಿ ಬಳಿಕ ಮಾರ್ಚ್ 16 ರಂದು ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ ಸಿಎಂ ಸಿದ್ದರಾಮಯ್ಯ!

13/03/2026 10:25 AM1 Min Read

ಊಟವಾದ ತಕ್ಷಣ ಈ ತಪ್ಪು ಮಾಡುತ್ತಿದ್ದೀರಾ? ಎಚ್ಚರ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು!

13/03/2026 10:04 AM2 Mins Read

ನಿಮಗೆ ‘ಸ್ತ್ರೀ ಶಾಪ’ದಿಂದ ಆಗುವ ಸಮಸ್ಯೆಗಳೇನು.? ಇಲ್ಲಿದೆ ಮಾಹಿತಿ ಓದಿ!

13/03/2026 10:02 AM3 Mins Read
Recent News

BREAKING : ಡಿಸಿಎಂ ಡಿಕೆಶಿ ಬಳಿಕ ಮಾರ್ಚ್ 16 ರಂದು ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ ಸಿಎಂ ಸಿದ್ದರಾಮಯ್ಯ!

13/03/2026 10:25 AM

ಯುದ್ಧದ ಕಿಚ್ಚಿಗೆ ನಲುಗಿದ ಜಾಗತಿಕ ಮಾರುಕಟ್ಟೆ: ಏಷ್ಯಾ ಷೇರುಗಳು ಪಾತಾಳಕ್ಕೆ, $100ರ ಸನಿಹದಲ್ಲೇ ತೈಲ ದರ!

13/03/2026 10:12 AM

BREAKING : ಕೋಮಾಗೆ ಜಾರಿದ ಇರಾನ್ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮನೈ, ಎರಡು ಕಾಲು ಸಹ ಕಟ್!

13/03/2026 10:10 AM

ಊಟವಾದ ತಕ್ಷಣ ಈ ತಪ್ಪು ಮಾಡುತ್ತಿದ್ದೀರಾ? ಎಚ್ಚರ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು!

13/03/2026 10:04 AM
State News
KARNATAKA

BREAKING : ಡಿಸಿಎಂ ಡಿಕೆಶಿ ಬಳಿಕ ಮಾರ್ಚ್ 16 ರಂದು ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ ಸಿಎಂ ಸಿದ್ದರಾಮಯ್ಯ!

By kannadanewsnow0513/03/2026 10:25 AM KARNATAKA 1 Min Read

ಬೆಂಗಳೂರು : ಇತ್ತೀಚಿಗೆ ಕಾಂಗ್ರೆಸ್ ಪಕ್ಷದಲ್ಲಿ ಡಿನ್ನರ್ ಪಾಲಿಟಿಕ್ಸ್ ಹೆಚ್ಚಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನ ಸಚಿವರಿಗೆ…

ಊಟವಾದ ತಕ್ಷಣ ಈ ತಪ್ಪು ಮಾಡುತ್ತಿದ್ದೀರಾ? ಎಚ್ಚರ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು!

13/03/2026 10:04 AM

ನಿಮಗೆ ‘ಸ್ತ್ರೀ ಶಾಪ’ದಿಂದ ಆಗುವ ಸಮಸ್ಯೆಗಳೇನು.? ಇಲ್ಲಿದೆ ಮಾಹಿತಿ ಓದಿ!

13/03/2026 10:02 AM

ALERT : ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

13/03/2026 9:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.