ದಾವಣಗೆರೆ : ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಬಾಲಕನೊರ್ವ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಎಪಿಎಂಸಿ ಸಮೀಪದ ರೈಲ್ವೆ ಅಂಡರ್ ಪಾಸ್ ಬಳಿ ನಡೆದಿದೆ. ಮೃತ ಬಾಲಕನನ್ನು ನಗರದ ಸಮೀಪದ ಹಳೇ ಚಿಕ್ಕನಹಳ್ಳಿಯ ತರುಣ್ (16) ಎಂದು ಗುರುತಿಸಲಾಗಿದೆ.
ಏನೂ ಕೆಲಸವನ್ನೂ ಮಾಡದೇ ಮನೆಯಲ್ಲೇ ಇರುತ್ತಿದ್ದ ಬಾಲಕನಿಗೆ ಕೆಲಸಕ್ಕೆ ಹೋಗುವಂತೆ ಪೋಷಕರು ಗದರಿದ್ದರು. ಸುಮ್ಮನೆ ಹುಡುಗರ ಜೊತೆ ಸೇರಿ ಕೆಟ್ಟ ದಾರಿ ಹಿಡಿಯುವ ಬದಲು ಕೆಲಸಕ್ಕೆ ಹೋಗು ಎಂದು ತಿಳುವಳಿಕೆ ಹೇಳಿದ್ದರು. ಇದರಿಂದ ಮನನೊಂದು ತರುಣ್ ಮನೆ ಬಿಟ್ಟು ಹೋಗಿದ್ದ.
ಆತನಿಗಾಗಿ ಕುಟುಂಬಸ್ಥರು ರಾತ್ರಿ ಹುಡುಕಾಟ ನಡೆಸಿದ್ದರು. ಬೆಳಗ್ಗೆ ರೈಲುಹಳಿ ಮೇಲೆ ರುಂಡ ಮುಂಡ ಬೇರೆಯಾಗಿ ತರುಣ್ ಮೃತದೇಹ ಪತ್ತೆಯಾಗಿತ್ತು. ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.








