ಬೆಂಗಳೂರು : ಹೊಸ ವರ್ಷಕ್ಕೆ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಮ್ಆರ್ಸಿಎಲ್ ಸಿಹಿ ಸುದ್ದಿಯೊಂದನ್ನು ನೀಡಿದ್ದು ಹೊಸ ವರ್ಷಕ್ಕೆ 8 ರಿಂದ 10 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ. ಸದ್ಯ 15 ನಿಮಿಷಕ್ಕೊಂದು ಸಂಚರಿಸುವ ರೈಲುಗಳ ನಡುವಿನ ಸಮಯಾವಧಿ 8 ರಿಂದ 10 ನಿಮಿಷಕ್ಕೆ ಇಳಿಯಲಿದೆ. ಇದರಿಂದ ಸಮಸ್ಯೆ ಎದುರಿಸುತ್ತಿರುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಹೌದು ಯೆಲ್ಲೊ ಮಾರ್ಗದಲ್ಲಿ ನಿತ್ಯ ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಾರೆ. ಮಾರ್ಗ ಓಪನ್ ಆಗಿ ತಿಂಗಳುಗಳೇ ಕಳೆದರೂ ಪೂರ್ಣ ಪ್ರಮಾಣದ ರೈಲುಗಳಿಲ್ಲದೇ ಪ್ರಯಾಣಿಕರು ಕಷ್ಟನೋ ಸುಖನೋ ಅಡ್ಜಸ್ಟ್ ಮಾಡಿಕೊಂಡು ಹೋಗ್ತಿದ್ದಾರೆ. ಆದರೆ ಶೀಘ್ರದಲ್ಲೇ ಹೊಸ ರೈಲುಗಳು ಸೇರ್ಪಡೆಯಾಗಿ, ಪ್ರಯಾಣಿಕರಿಗೆ ಸುಲಭ ಸಂಚಾರ ನೀಡಲು ಮುಂದಾಗಿದೆ.
ಈಗಾಗಲೇ ಕೋಲ್ಕತ್ತಾದ ಟಿಟಾಗರ್ನಿಂದ 6 ರೈಲು ಬೆಂಗಳೂರಿನತ್ತ ಹೊರಟಿದೆ. ಮುಂದಿನ ವಾರ ಈ ರೈಲು ಬೆಂಗಳೂರು ಸೇರಿ, ಎಲ್ಲಾ ಪರೀಕ್ಷೆ ಪೂರ್ಣಗೊಳಿಸಿ ಡಿಸೆಂಬರ್ ಅಂತ್ಯಕ್ಕೆ ಟ್ರ್ಯಾಕ್ಗೆ ಇಳಿಯಲಿದೆ. ಅಲ್ಲದೇ ಮುಂದಿನ ತಿಂಗಳು ಅಂದರೆ ಡಿಸೆಂಬರ್ಗೆ ಮತ್ತೊಂದು ಸೆಟ್ ಕೂಡ ಬೆಂಗಳೂರು ಸೇರಲಿದೆ. 7ನೇ ರೈಲು ಜನವರಿ ಅಂತ್ಯಕ್ಕೆ ಟ್ರ್ಯಾಕ್ಗೆ ಇಳಿದು ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ.








