ಬೆಂಗಳೂರು: ಕೆಸೆಟ್ ಪರೀಕ್ಷೆ 2025 ಅನ್ನು ಪಾಸ್ ಮಾಡಿರುವಂತ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡುವ ಕುರಿತಂತೆ ಮಹತ್ವದ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೀಡಿದೆ. ಅದೇನು ಅಂತ ಮುಂದೆ ಓದಿ.
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025 (ಕೆಸೆಟ್-2025) ಅರ್ಹತಾ ಪರೀಕ್ಷೆಗೆ ಪ್ರಾಧಿಕಾರವು ದಿನಾಂಕ: 22.08.2025 ರಂದು ಅಧಿಸೂಚನೆ ಹೊರಡಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ದಿನಾಂಕ: 24.09.2025 ರವರೆಗೆ ಸ್ವೀಕರಿಸಲಾಗಿರುತ್ತದೆ. ಈ ಮಧ್ಯೆ ಸರ್ಕಾರವು ದಿನಾಂಕ 25.08.2025 ರಂದು ಆದೇಶ ಹೊರಡಿಸಿ ಪರಿಶಿಷ್ಟ ಜಾತಿಯಲ್ಲಿ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ ಸಿ ಎಂದು ವರ್ಗೀಕರಿಸಿ ಆದೇಶಿಸಲಾಗಿರುತ್ತದೆ ಹಾಗೂ ಶಿಕ್ಷಣ & ಉದ್ಯೋಗದಲ್ಲಿ ಅಳವಡಿಸಿಕೊಳ್ಳಲು ತಿಳಿಸಲಾಗಿರುತ್ತದೆ.
ಅದರಂತೆ ಪ.ಜಾತಿ ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ (ಪ.ಜಾತಿ ಪ್ರಮಾಣ ಪತ್ರದ RD ಸಂಖ್ಯೆ ನಮೂದಿಸಿರುತ್ತಾರೆ (ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು ನಮೂದಿಸದ) ಮತ್ತು ಆನ್ಲೈನ್ ಮೂಲಕ ಸದರಿ ಪ್ರಮಾಣ ಪತ್ರವನ್ನು ಪರಿಶೀಲಿಸಲಾಗಿರುತ್ತದೆ) ಸರ್ಕಾರದ ಆದೇಶ ಸಂಖ್ಯೆ: ಸಕಇ/8/ಎಸ್ಎಲ್ಪಿ/2024 ದಿನಾಂಕ 25.08.2025 ರಂತೆ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಮೀಸಲಾತಿಯಲ್ಲಿ ಅವಕಾಶ ನೀಡಲು (ಕಂದಾಯ ಇಲಾಖೆಯು ಇನ್ನೂ ಆನ್ಲೈನ್ ಪ್ರಮಾಣ ಪತ್ರ ವಿತರಣೆ ಆರಂಭಿಸಿಲ್ಲವಾದ್ದರಿಂದ) ದಿನಾಂಕ 24.10.2025 ರಂದು ಪರೀಕ್ಷೆ ಪ್ರವೇಶ ಪತ್ರ ಡೌನ್ಸ್ಡ್ ಮಾಡಲು ನೀಡಲಾಗಿದ್ದ ಲಿಂಕ್ನಲ್ಲಿ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಈ ಮೂರು ಪ್ರವರ್ಗಗಳಲ್ಲಿ ಅನ್ವಯಿಸುವ ಪ್ರವರ್ಗವನ್ನು ಅಯ್ಕೆ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಅದರಂತೆ ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್ಸ್ಡ್ ಮಾಡುವಾಗ ಅವರ ಲಾಗ್ಇನ್ನಲ್ಲಿ ಅವರಿಗೆ ಅನ್ವಯಿಸುವ ಪ್ರವರ್ಗ (ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ) ಘೋಷಿಸಿಕೊಂಡಿರುತ್ತಾರೆ.
ಅರ್ಜಿ ಸಲ್ಲಿಸಲಾದ ಎಲ್ಲಾ ಅಭ್ಯರ್ಥಿಗಳಿಗೆ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025 (ಕೆಸೆಟ್-2025) ನ್ನು ದಿನಾಂಕ 02.11.2025 ರಂದು ನಡೆಸಲಾಗಿದ್ದು, ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಅಭ್ಯರ್ಥಿಗಳಿಂದ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯ ಮೂಲಕ ಪರಿಶೀಲಿಸಿ, ತಜ್ಞರ ಸಮಿತಿಯ ವರದಿಯನ್ನು ಆಧಾರಿಸಿ ಅಂತಿಮ ಕೀ ಉತ್ತರಗಳನ್ನು ಮತ್ತು ತಾತ್ಕಾಲಿಕ ಅಂಕಪಟ್ಟಿಯನ್ನು ದಿನಾಂಕ 15.11.2025 ರಂದು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
#KSET-25: ದಾಖಲೆ ಅವಧಿಯಲ್ಲಿ ಕೆಸೆಟ್ ಪರೀಕ್ಷೆ ಮಾಡಿ, ತಾತ್ಕಾಲಿಕ ಫಲಿತಾಂಶ ಕೂಡ ಘೋಷಿಸಲಾಯಿತು.
ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಸಂಬಂಧಿಸಿದಂತೆ, ಅರ್ಜಿಯಲ್ಲಿ ದಾಖಲಿಸಿರುವ ಮೀಸಲಾತಿ ಸಂಬಂಧಿತ ಮೂಲ ದಾಖಲೆಗಳನ್ನು ಪರಿಶೀಲನೆ ವೇಳೆ ಹಾಜರುಪಡಿಸತಕ್ಕದ್ದು. ದಾಖಲೆಗಳನ್ನು ಪರಿಶೀಲಿಸಿ, ಸರಿ ಇದ್ದರೆ ಕೆಸೆಟ್-25 ಪ್ರಮಾಣ ಪತ್ರ… pic.twitter.com/xbBbspCgcS
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) November 26, 2025
ದಿನಾಂಕ 21.11.2025 ರಂದು ವಿಷಯವಾರು ತಾತ್ಕಾಲಿಕ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್ಲೋಡ್ ಮಾಡುವಾಗ ಪ.ಜಾತಿ – A, ಪ.ಜಾತಿ – B ಮತ್ತು ಪ.ಜಾತಿ – C ಎಂದು ಘೋಷಿಸಿಕೊಂಡಿರುವ ಆಧಾರದಲ್ಲಿ ಅಭ್ಯರ್ಥಿಗಳನ್ನು ತಾತ್ಕಾಲಿಕ ಅರ್ಹ ಪಟ್ಟಿಯಲ್ಲಿ ಪ್ರಕಟಿಸಲಾಗಿತ್ತು, ಆದರೆ ಹಲವು ಅಭ್ಯರ್ಥಿಗಳು ತಪ್ಪಾಗಿ ಪ್ರವರ್ಗಗಳ ಆಯ್ಕೆಯನ್ನು ಮಾಡಲಾಗಿದ್ದು ಅದನ್ನು ಸರಿಪಡಿಸುವಂತೆ ಪ್ರಾಧಿಕಾರಕ್ಕೆ ಮನವಿಗಳನ್ನು ಮಾಡುತಿದ್ದಾರೆ ಹಾಗು ಕೆಲವು ಸಂಘಟನೆಗಳು ಸಹ, ಕೆಲವರು ಉದ್ದೇಶಪೂರ್ವಕವಾಗಿ ತಪ್ಪು ಪ್ರವರ್ಗ ಘೋಷಿಸಿಕೊಂಡಿರುತ್ತಾರೆ ಎಂದು ದೂರಿರುತ್ತಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಿಸಿರುವ ಕೆಸೆಟ್-2025 ಪರೀಕ್ಷೆಯಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ ಎಲ್ಲಾ ಅಭ್ಯರ್ಥಿಗಳಿಗೆ (ಪ.ಜಾತಿ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಮೀಸಲಾತಿ ಕೋರಿರುವ ಅಭ್ಯರ್ಥಿಗಳೂ ಸೇರಿದಂತೆ) ಈ ಕೆಳಗಿನಂತೆ ಸ್ಪಷ್ಠಿಕರಣ ನೀಡಿದೆ.
* ಅಭ್ಯರ್ಥಿಗಳು ಆನ್ಲೈನ್ ಅರ್ಜಿಯಲ್ಲಿ ನೀಡಿರುವ ಮಾಹಿತಿ ಆಧರಿಸಿ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿರುತ್ತದೆ. ತಾತ್ಕಾಲಿಕ ಪಟ್ಟಿಯಲ್ಲಿ ಹೆಸರು ಬಂದ ಮಾತ್ರಕ್ಕೆ ತಮಗೆ ಕೆಸೆಟ್ 2025 ಅರ್ಹತಾ ಪ್ರಮಾಣ ಪತ್ರ ಖಾತ್ರಿಯಾಗಿದೆ ಎಂದರ್ಥವಲ್ಲ.
* ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಾಖಲೆ ಪರಿಶೀಲನೆಗೆ ಆಹ್ವಾನಿಸುವ ದಿನದಂದು ತಾವು ಅರ್ಜಿಯಲ್ಲಿ ಸಲ್ಲಿಸಿರುವ ಮಿಸಲಾತಿ ಸಂಬಂಧಿತ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ಹಾಜರುಪಡಿಸಬೇಕು, ಸರಿ ಇರುವ ಬಗ್ಗೆ ಪರಿಶೀಲಿಸಿದ ನಂತರ ಮಾತ್ರ ಕೆಸೆಟ್-2025 ಪ್ರಮಾಣ ಪತ್ರ ನೀಡಲಾಗುವುದು.
* ಕೆಸೆಟ್-2025 ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ (ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ರಡಿ ಅರ್ಹರಾಗಿರುವ) ಪ.ಜಾತಿ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಮೀಸಲಾತಿ ಕೋರಿರುವ ಅಭ್ಯರ್ಥಿಗಳು RD ಸಂಖ್ಯೆ ಇರುವ ತಹಶೀಲ್ದಾರರಿಂದ ವಿತರಿಸಲ್ಪಟ್ಟ ಪ್ರಮಾಣ ಪತ್ರವನ್ನು ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರು ಪಡಿಸಬೇಕು. ಹಾಜರು ಪಡಿಸಲು ವಿಫಲವಾದಲ್ಲಿ ಅವರಿಗೆ ಪ್ರಮಾಣ ಪತ್ರ ನೀಡಲಾಗುವುದಿಲ್ಲ ಹಾಗೂ ಆ ಪ್ರವರ್ಗಕ್ಕೆ ನಿಗದಿಯಾಗಿರುವ ಫ್ಲಾಟ್ಗಳನ್ನು ಭರ್ತಿಮಾಡಲು ಮುಂದಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿಯಮಾನುಸಾರ ಕ್ರಮವಹಿಸಲಾಗುವುದು.
ಗ್ರೀನ್ ಜೆಟ್ಸ್ ಕಂಪನಿ ರಾಜ್ಯಕ್ಕೆ ಬಂದರೆ ಪೂರ್ಣ ನೆರವು: ಸಚಿವ ಎಂ.ಬಿ.ಪಾಟೀಲ
ರಾಜ್ಯದ ಈ ಸುಪ್ರಸಿದ್ಧ ದೇವಾಲಯದಲ್ಲಿ ಇನ್ಮುಂದೆ ‘ಮದುವೆ’ಗಳು ನಿಷೇಧ ; ಕಾರಣವೇನು.?








