ಚಿತ್ರದುರ್ಗ : ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಫೋಕ್ಸೋ ಕೇಸ್ನ ವಾದ-ಪ್ರತಿವಾದ ಮುಕ್ತಾಯವಾಗಿದ್ದು, ಇದೀಗ ಪ್ರಕರಣದ ಮೊದಲ ಎಫ್ಐಆರ್ ಸಂಬಂಧ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದ್ದು,ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ಗಳಿಗೆ ಬಿಗ್ ರಿಲೀಫ್ ಸಿಕ್ಕಿದ್ದು ಮುರುಘಾ ಶ್ರೀಗಳ ಕೇಸ್ ಖುಲಾಸೆಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಈ ಹಿಂದಿನ ವಿಚಾರಣೆ ವೇಳೆ ಶ್ರೀಗಳ ಪರವಾಗಿ ಕೋರ್ಟ್ನಲ್ಲಿ ಖ್ಯಾತ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದಾರೆ. ಸ್ವಾಮೀಜಿ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಎಂದು ವಾದಿಸಿದ್ದಾರೆ. ಚಿತ್ರದುರ್ಗದ 2ನೇ ಅಪರ ಜಿಲ್ಲಾ ನ್ಯಾಯಾಲಯದಲ್ಲಿ ಕೇಸ್ನ ವಿಚಾರಣೆ ನಡೆದಿತ್ತು.ಕೋರ್ಟ್ ಹಾಲ್ ಗೆ ಮುರುಘಾ ಶ್ರೀಗಳು ಸಹ ಹಾಜರಾಗಿದ್ದರು.
ಕೇಸ್ ಖುಲಾಸೆ ಆದ ಬಳಿಕ ಕೋರ್ಟ್ ನಿಂದ ಶ್ರೀಗಳು ಕೋರ್ಟ್ ನಿಂದ ತೆರಳಿದ್ದಾರೆ. ಪ್ರಕರಣದಿಂದ ಶ್ರೀಗಳು ನಿರಾಳರಾಗಿದ್ದಾರೆ. ಮುರುಘಾ ಶರಣರು ಹಾಗು ಮತ್ತಿಬ್ಬರು ಆರೋಪಿಗಳಿಗೆ ರಿಲೀಫ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಮುರುಘಾ ಮಠಕ್ಕೆ ಒಳ್ಳೆಯದು ತರಲಿ. ಹಲವು ದಿನಗಳಿಂದ ಶ್ರೀಗಳು ಅನಾರೋಗ್ಯ ಪೀಡಿತರಾಗಿದ್ದರು. ನಾಳೆ ಶ್ರೀಗಳಿಗೆ ಮತ್ತೊಂದು ತಪಾಸಣೆ ಇದೆ. ಶ್ರೀಗಳಿಗೆ ನಿರ್ಬಂಧ ವಿಚಾರವಾಗಿ ಈಗ ಹೇಳಲ್ಲ ಮೊದಲ ಕೇಸ್ ನಲ್ಲಿ ರಿಲೀಫ್ ಸಿಕ್ಕಿದೆ. 2ನೇ ಕೇಸ್ ಹೈ ಕೋರ್ಟ್ ನಲ್ಲಿ ತಡೆಯಾಜ್ಞೆ ಇದೆ ಎಂದು ಶ್ರೀಗಳ ಪರ ವಕೀಲ ಕೆ.ಬಿ ಸ್ವಾಮಿ ಹೇಳಿಕೆ ನೀಡಿದರು.








