ಕಲಬುರ್ಗಿ : ಸದ್ಯ ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಗಿ ಹಾಕಿ ಸಿಎಂ ಸಿದ್ದರಾಮಯ್ಯ ಬಣ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣದ ನಡುವೆ ಬಿಗ್ ಫೈಟ್ ನಡೆಯುತ್ತಿದೆ, ಇದರ ಮಧ್ಯ ದಲಿತ ಸಿಎಂ ಕೂಗು ಸಹ ಕೇಳಿಬರುತ್ತಿದೆ. ಈ ವಿಚಾರವಾಗಿ ಬಿಜೆಪಿ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಇವರ ಕಿತ್ತಾಟದ ನಡುವೆ ದಲಿತರ ಹಾಗು ಮುಸ್ಲಿಮರನ್ನು ಕಡೆಗಣಿಸುತ್ತಿದ್ದಾರೆ .ದೇಶದ ಏಕತೆಗೆ ಮುಸ್ಲಿಮರು ನಮ್ಮ ಪಕ್ಷಕ್ಕೆ ಬರಬೇಕು ಅವರು ರಾಜ್ಯದ ಮುಖ್ಯಮಂತ್ರಿ ಆದರೆ ಸ್ವಾಗತ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ಕಲ್ಬುರ್ಗಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮೂರು ಗುಂಪುಗಳು ಸೃಷ್ಟಿಯಾಗಿವೆ. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಲಿಂಗಾಯತ ಗುಂಪುಗಳಿವೆ. ಇಬ್ಬರ ಕುರ್ಚಿಕ ಕಚ್ಚಾಟದಲ್ಲಿ ಈ ಸರ್ಕಾರ ಬಿದ್ದು ಹೋಗುತ್ತದೆ. ಕಾಂಗ್ರೆಸ್ ನಲ್ಲಿ ದಲಿತರು ಮತ್ತು ಮುಸ್ಲಿಮರನ್ನು ಕಡೆಗಣಿಸಲಾಗಿದೆ. ಯಾರ ಬಾಯಿಂದ ಕೂಡ ಮುಸಲ್ಮಾನರು ಸಿಎಂ ಆಗಲಿ ಅಂತ ಬರುತ್ತಿಲ್ಲ. ಮುಸ್ಲಿಮರು ಏಕೆ ಸಿಎಂ ಮಾಡುತ್ತಿಲ್ಲ? ಎಂದು ಗೋವಿಂದ್ ಕಾರಜೋಳ ಪ್ರಶ್ನಿಸಿದರು.
ಸಿಎಂ ಇಬ್ರಾಹಿಂ ಅವರನ್ನು ಬಳಸಿಕೊಂಡು ಜೋಕರ್ ಮಾಡಿದರು. ರಾಜ್ಯದಲ್ಲಿ ಮುಸ್ಲಿಂ ಸಮುದಾಯದವರು ಸಿಎಂ ಆದರೆ ಸ್ವಾಗತ ಮುಸ್ಲಿಂ ನಾಯಕರು ನಮ್ಮ ಪಕ್ಷಕ್ಕೂ ಬರಬೇಕು. ದೇಶದ ಏಕತೆಗೆ ಮುಸ್ಲಿಮರು ನಮ್ಮ ಜೊತೆಗೆ ಬರಬೇಕು ಮೋದಿಯವರು ಮುಸ್ಲಿಮರಿಗೆ ಅನ್ಯಾಯ ಮಾಡಿಲ್ಲ. ದಲಿತರು ಮುಸ್ಲಿಮರನ್ನು ಕೇವಲ ಕಾಂಗ್ರೆಸ್ ವೋಟ್ ಬ್ಯಾಂಕ್ ಮಾಡಿಕೊಂಡಿದೆ. 70 ವರ್ಷದಿಂದ ಓಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಎಂದು ಕಲಬುರ್ಗಿಯಲ್ಲಿ ಬಿಜೆಪಿ ಸಂಸದ ಗೋವಿಂದ ಕಾರಜೋಳ್ ಹೇಳಿಕೆ ನೀಡಿದರು.








