ಬೆಂಗಳೂರು : ರಾಜ್ಯ ರಾಜಕರಾಣದಲ್ಲಿ ಸಿಎಂ ಬದಲಾವಣೆ, ಅಧಿಕಾರ ಹಸ್ತಾಂತರದ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ನಡುವೆ ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಗದಗದ ರಾಚೋಟೇಶ್ವರ ನಗರದ ನಿವಾಸಿ, ಹುಲಿಗೆಮ್ಮ ದೇವಿಯ ಜೋಗತಿ ಭೈಲಮ್ಮ ಬಾಳಮಣ್ಣ ಭವಿಷ್ಯ ನುಡಿದಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಹೌದು ಅಭಿಮಾನಿಯೊಬ್ಬರು ಭವಿಷ್ಯ ಕೇಳಿರುವ ವಿಡಿಯೋ ವೈರಲ್ ಆಗಿದೆ.ಗದ್ದುಗೆ ಹಾಕಿ ದೇವಿ ಕೊಡ ಎತ್ತುವ ಮೂಲಕ ಜೋಗತಿ ಅಮ್ಮ ಭವಿಷ್ಯ ನುಡಿಸಿದ್ದಾರೆ. ಅಂದ ಹಾಗೇ ಹುಲಿಗೆಮ್ಮ ದೇವಿ ನೀಡಿರುವ ಭವಿಷ್ಯ ಸುಳ್ಳು ಆಗುವುದಿಲ್ಲ ಎನ್ನುವುದು ಈ ಭಾಗದಲ್ಲಿ ನಂಬಿಕೆ ಹೆಚ್ಚಾಗಿದೆ, ಹೀಗಾಗಿ ಹುಲಿಗೆಮ್ಮ ದೇವಿ ನೀಡಿರುವ ಭವಿಷ್ಯದ ಬಗ್ಗೆ ಎಲ್ಲರಲ್ಲಿ ಚರ್ಚೆ ಮಾಡುವಂತೆ ಮಾಡಿದೆ.
ಇನ್ನೂ ಇದೇ ವೇಳೆ ಜೋಗತಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು ಅವರು ಹುಲಿಗೆಮ್ಮ ದೇವಿ ನೀಡಿರುವ ಭವಿಷ್ಯ ಎಂದಿಗೂ ಕೂಡ ಸುಳ್ಳು ಆಗೋದಿಲ್ಲ. ಇನ್ನೂ ಒಂದುವರೆ ಎರಡು ತಿಂಗಳ ಒಳಗಾಗಿ ಡಿಕೆ ಶಿವಕುಮಾರ್ ಅವರು ಸಿಎಂ ಆಗ್ತಾರೆ. ಚಿಂತೆ ಮಾಡಬೇಡಿ ಅಂತ ಹೇಳಿದ್ದಾರೆ.
ಇದಲ್ಲದೇ ಖುಷಿ ಖುಷಿಯಿಂದ ಡಿಕೆಶಿಗೆ ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡುತ್ತಾರೆ. ಜೋಗತಿ ಭವಿಷ್ಯ ನುಡಿದಿರುವುದು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಲಾಗಿದೆ. ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಸದ್ಯ ಚಾಲ್ತಿಯಲ್ಲಿರುವ ಸಿಎಂ ಹುದ್ದೆ ಹಸ್ತಾಂತರದ ನಡುವೆ ಭವಿಷ್ಯ ನುಡಿದಿರುವುದು ಸರಿಯಾಗಲಿದ್ಯ ಎನ್ನುವುದನ್ನು ಕಾದು ನೋಡಬೇಕಾಗಿದೆ.








