ಬೆಂಗಳೂರು; ರಾಜ್ಯದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಯೋಜನೆಯ ಅಡಿಯಲ್ಲಿ ಏನೆಲ್ಲಾ ಕಾಮಗಾರಿ ಕೈಗೊಳ್ಳಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. ಹಾಗಾದ್ರೇ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಪಟ್ಟಿ ಮುಂದಿದೆ ಓದಿ.
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಕೈಗೊಳ್ಳಬಹುದಾದಂತಹ ಕಾಮಗಾರಿಗಳ ಪಟ್ಟಿ
1. ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳು:
ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸಬಹುದಾಗಿದೆ.
1) ಶಾಲಾ ಕೊಠಡಿಗಳ ನಿರ್ಮಾಣ
2) ಕಾಂಪೌಂಡ್ ಗೋಡೆಗಳ ನಿರ್ಮಾಣ
3) ಆಟದ ಮೈದಾನಗಳ ಅಭಿವೃದ್ಧಿ
4) ಮೂಲಭೂತ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಗ್ರಂಥಾಲಯಗಳ ನಿರ್ಮಾಣ 5) ಸುಸಜ್ಜಿತ ಪ್ರಯೋಗಾಲಯಗಳ ನಿರ್ಮಾಣ
6) ಬಯಲು ರಂಗಮಂದಿರಗಳ ನಿರ್ಮಾಣ
7) ಸೈಕಲ್ ಸ್ಟ್ಯಾಂಡ್‌ಗಳ ನಿರ್ಮಾಣ
8) ಶಾಲೆಗಳ ಹತ್ತಿರ ಶಿಕ್ಷಕರಿಗೆ ವಸತಿ ಗೃಹಗಳ ನಿರ್ಮಾಣ
9) RO ಮಾದರಿಯ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು.
10) ಗಣಕಯಂತ್ರ ಮತ್ತು ಪ್ರಿಂಟರ್ ಇತ್ಯಾದಿಗಳನ್ನು ಒದಗಿಸುವುದು.
II) ಬೋಧನೋಪಕರಣಗಳು ಹಾಗೂ ಆಟೋಪಕರಣಗಳನ್ನು ಒದಗಿಸುವುದು.
2. ಉನ್ನತ ಶಿಕ್ಷಣ
ಸರ್ಕಾರಿ ಕಾಲೇಜುಗಳು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳು, ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಸರ್ಕಾರಿ ಔದ್ಯೋಗಿಕ ಸಂಸ್ಥೆಗಳಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸಬಹುದು.
1) ತರಗತಿ ಕೊಠಡಿಗಳ ನಿರ್ಮಾಣ
2) ಕಾಂಪೌಂಡ್ ಗೋಡೆಗಳ ನಿರ್ಮಾಣ
3) ಗ್ರಂಥಾಲಯ, ಪ್ರಯೋಗಾಲಯ ಹಾಗೂ ಶೌಚಾಲಯಗಳ ನಿರ್ಮಾಣ 4) ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳಿಗೆ ಉಪಕರಣಗಳನ್ನು ಒದಗಿಸುವುದು.
5) RO ಮಾದರಿಯ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು. 6) ಆವರಣದಲ್ಲಿ ರಸ್ತೆ, ಆಟದ ಮೈದಾನ ಮತ್ತು ಉಪಾಹಾರ ಮಂದಿರಗಳಂಥ ಮೂಲಸೌಕರ್ಯಗಳನ್ನು ಒದಗಿಸುವುದು.
3. ಕ್ರೀಡೆಗಳು ಮತ್ತು ಯುವಜನ ಸೇವೆಗಳು
1) ಕ್ರೀಡಾಂಗಣಗಳ ನಿರ್ಮಾಣ
2) ಕ್ರೀಡೆಗಳಿಗೆ ಸಂಬಂಧಿಸಿದ ಪರಿಕರಗಳ ಪೂರೈಕೆ
3) ಜಾಗಿಂಗ್ ಟ್ರ್ಯಾಕ್, ಟೆನ್ನಿಸ್ ಕೋರ್ಟ್, ಬಾಸ್ಕೆಟ್ ಬಾಲ್ ಕೋರ್ಟ್ ಮುಂತಾದವುಗಳ ಅಭಿವೃದ್ಧಿ
4. ಆರೋಗ್ಯ
1) ಪ್ರಾಥಮಿಕ ಆರೋಗ್ಯ ಕೇಂದ್ರ ಸಮೂದಾಯ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣ
2) ಆಸ್ಪತ್ರೆಗಳಿಗೆ ಕಾಂಪೌಂಡ್ ಗೋಡೆಗಳ ನಿರ್ಮಾಣ
3) ಆಸ್ಪತ್ರೆಗಳಿಗೆ ಬೇಕಾದ ಪರಿಕರಗಳನ್ನು ಪೂರೈಸುವುದು. 4) ರಕ್ತ ನಿಧಿಗಳ ಸ್ಥಾಪನೆ
5) ಆಂಬ್ಯುಲೆನ್ಸ್ ವಾಹನಗಳ ಖರೀದಿ
6) ಆಸ್ಪತ್ರೆಗಳಲ್ಲಿ ಶೌಚಾಲಯಗಳ ನಿರ್ಮಾಣ
7) ಆಸ್ಪತ್ರೆಗಳಲ್ಲಿ RO ಮಾದರಿಯ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು.
8) ವೈದ್ಯಾಧಿಕಾರಿಗಳು ಮತ್ತು ANMಗಳಿಗೆ ವಸತಿಗೃಹಗಳ ನಿರ್ಮಾಣ
5. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ
1) ಅಂಗವಿಕಲರಿಗೆ ಪರಿಕರಗಳ ಪೂರೈಕೆ
2) ಅಂಗನವಾಡಿ ಕೇಂದ್ರಗಳ ನಿರ್ಮಾಣ
3) ಅಂಗನವಾಡಿ ಕೇಂದ್ರಗಳಿಗೆ ಕಾಂಪೌಂಡ್ ಗೋಡೆಗಳ ನಿರ್ಮಾಣ
4) RO ಮಾದರಿಯ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು.
5) ಅಂಗನವಾಡಿಗಳಿಗೆ ತಲಾ ರೂ.5,000/- ಗಳ ವರೆಗಿನ ಆಟದ ಉಪಕರಣಗಳ ಪೂರೈಕೆ 6) ವೃದ್ಧಾಶ್ರಮ, ಅನಾಥಾಶ್ರಮ, ನಿರ್ಗತಿಕರಿಗೆ ವಸತಿ ನಿಲಯ ಇತ್ಯಾದಿಗಳ ನಿರ್ಮಾಣ
6. ಸಮಾಜ ಕಲ್ಯಾಣ/ಹಿಂದುಳಿದ ವರ್ಗ/ಅಲ್ಪಸಂಖ್ಯಾತರು
1) ಸರ್ಕಾರಿ ಹಾಸ್ಟೆಲ್‌ಗಳ ನಿರ್ಮಾಣ
2) ಹಾಸ್ಟೆಲ್‌ಗಳಿಗೆ ಕಾಂಪೌಂಡ್ ಗೋಡೆಗಳ ನಿರ್ಮಾಣ
3) ಮೆಟ್ರಿಕ್ ನಂತರದ ವಿದ್ಯಾರ್ಥಿ/ವಿಧ್ಯಾರ್ಥಿನಿಯರ ಹಾಸ್ಟೆಲ್‌ನ ಗ್ರಂಥಾಲಯಕ್ಕೆ ಪುಸ್ತಕಗಳು ಮತ್ತು ಉಪಕರಣಗಳ ಪೂರೈಕೆ,
4) ಹಾಸ್ಟೆಲ್‌ಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು.
5) ಹಾಸ್ಟೆಲ್‌ಗಳಲ್ಲಿ ಶೌಚಾಲಯಗಳ ನಿರ್ಮಾಣ
7. ಪಶುಸಂಗೋಪನೆ
1) ಪಶುವೈದ್ಯಕೀಯ ಆಸ್ಪತ್ರೆ, ಪಶುವೈದ್ಯಕೀಯ ಔಷಧಾಲಯ ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೆಂದ್ರಗಳ ನಿರ್ಮಾಣ
2) ಪಶುವೈದ್ಯಕೀಯ ಆಸ್ಪತ್ರೆ, ಪಶುವೈದ್ಯಕೀಯ ಔಷಧಾಲಯ ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೆಂದ್ರಗಳಿಗೆ ಕಾಂಪೌಂಡ್ ಗೋಡೆಗಳ ನಿರ್ಮಾಣ
3) ಹಳ್ಳಿಗಳಲ್ಲಿ ಪಶು ಸಂತತಿ ಅಭಿವೃದ್ಧಿ ಕೇಂದ್ರಗಳಿಂದ ಮುಖ್ಯರಸ್ತೆಗೆ ಸೇರುವ ರಸ್ತೆ ನಿರ್ಮಾಣ
4) ಪಶು ವೈದ್ಯಕೀಯ ಆಸ್ಪತ್ರೆಯ ಸಿಬ್ಬಂದಿಗಳಿಗೆ ವಸತಿಗೃಹಗಳ ನಿರ್ಮಾಣ
5) ಕೃತಕ ಗರ್ಭಧಾರಣಾ ಕೇಂದ್ರಗಳ ಕಟ್ಟಡ ನಿರ್ಮಾಣ
8. ತೋಟಗಾರಿಕೆ
1) ನಗರ ಪ್ರದೇಶಗಳಲ್ಲಿ ಉದ್ಯಾನವನಗಳ ಅಭಿವೃದ್ಧಿ
2) ಮಾರುಕಟ್ಟೆ ಆವರಣಗಳಲ್ಲಿ ಗೋದಾಮುಗಳ ನಿರ್ಮಾಣ
9. ವಸತಿ
1) ಪೊಲೀಸ್ ಇಲಾಖೆಗೆ ಗರುಡ/ಹೊಯ್ಸಳ ಮಾದರಿಯ ವಾಹನಗಳನ್ನು ಒದಗಿಸುವುದು (ಚಾಲಕ ಮತ್ತು ನಿರ್ವಹಣೆ ವೆಚ್ಚ ಹೊರತುಪಡಿಸಿ)
10.ಮೂಲಭೂತ ಸೌಕರ್ಯ ಅಭಿವೃದ್ಧಿಗಳು
1) ರಸ್ತೆ ಸಂಪರ್ಕ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಎಲ್ಲಾ ಹವಾಮಾನಕ್ಕೆ ಹೊಂದಿಕೊಳ್ಳುವಂತಹ ರಸ್ತೆಗಳು
2) ತಾಲ್ಲೂಕು ಮಟ್ಟದಲ್ಲಿ ಸಾರ್ವಜನಿಕ ವಿದ್ಯುತ್ ಚಿತಾಗಾರ ಮತ್ತು ಸ್ಮಶಾನಗಳಿಗೆ ಭೂಮಿ ಒದಗಿಸುವುದು.
3) ಕಾಲು ಸೇತುವೆಗಳ ನಿರ್ಮಾಣ
4) ಬಸ್ ತಂಗುದಾಣಗಳ ನಿರ್ಮಾಣ
5) ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ: ಘನ ತ್ಯಾಜ್ಯ ವಸ್ತುಗಳ ನಿರ್ವಹಣಾ ಕೇಂದ್ರಗಳ ವಿಕೇಂದ್ರೀಕರಣ
11. ಕೊಳಚೆ ಪ್ರದೇಶಗಳಿಗೆ ಒದಗಿಸಬಹುದಾದ ಸೌಲಭ್ಯಗಳು
1) ಕೊಳಚೆ ಪ್ರದೇಶಗಳ ಕುಶಲಕರ್ಮಿಗಳಿಗೆ ಸಾಮಾನ್ಯ ಶೆಡ್ ಒದಗಿಸುವುದು.
2) ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಗುಂಪು ವಸತಿ ಯೋಜನೆ ಅಡಿ ನಿರ್ಮಿಸಲಾದ ವಸತಿ ಪ್ರದೇಶಗಳಲ್ಲಿ ಮೂಲ ಸೌಕರ್ಯ ಒದಗಿಸುವುದು.
12.ಹಳ್ಳಿಗಳಲ್ಲಿ RO ಮಾದರಿಯ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು.
13.ಪ್ರವಾಸೋದ್ಯಮ
1) ಪ್ರವಾಸಿ ಸ್ಥಳಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವುದು.
2) ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳ ಸೌಂದರ್ಯ ರಕ್ಷಣೆಗೆ ಸಂಬಂಧಿಸಿದ ಕಾಮಗಾರಿಗಳು
14.ಸಮುದಾಯ ಭವನಗಳ ನಿರ್ಮಾಣ
15.ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣ ಮತ್ತು ಸಂಚಾರಿ ಗ್ರಂಥಾಲಯಗಳನ್ನು ಒದಗಿಸುವುದು.
ಕಾಮಗಾರಿಗಳನ್ನು ಸರ್ಕಾರಿ ಏಜೆನ್ಸಿಗಳಾದ ಲೋಕೋಪಯೋಗಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದಂಥ ಕೆಆರ್‌ಐಡಿಎಲ್ ಮತ್ತು ನಿರ್ಮಿತಿ ಕೇಂದ್ರಗಳ ಮೂಲಕ ಅನುಷ್ಟಾನಗೊಳಿಸುವುದು.


BREAKING: ಜಾತಿ ನಿಂದನೆ ಪ್ರಕರಣದಲ್ಲಿ ರಮೇಶ್ ಕತ್ತಿಗೆ ನಿರೀಕ್ಷಣಾ ಜಾಮೀನು ಮಂಜೂರು
ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಇನ್ಮುಂದೆ ಕೆರೆಗಳಲ್ಲಿ ಮೀನುಗಾರಿಕೆಗೆ ಅವಕಾಶ








