Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ನಾಳೆ ನಿಗದಿಯಾಗಿದ್ದ ‘ರಾಜ್ಯ ಸಾರಿಗೆ ನೌಕರ’ರ ಅನಿರ್ದಿಷ್ಟಾವಧಿ ಮುಷ್ಕರ ವಾಪಸ್

ಯಾವುದೇ ಕೊರತೆಯಿಲ್ಲದೆ ದಾಖಲೆಯ 257.37 ಗಿಗಾವ್ಯಾಟ್ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಯಶಸ್ವಿಯಾಗಿ ಪೂರೈಸಿದ ಭಾರತ

ಸಾರ್ವಜನಿಕ ಆಡಳಿತ ಮಂಡಳಿಗಳು ಯಾವುದೇ ಒಂದು ಪಕ್ಷದ ಪರ ವಹಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ದೈವವೆಂಬ ದೀವಿಗೆ’ಯು ಎಲ್ಲರನ್ನು ಒಗ್ಗೂಡಿಸಿ, ಎಲ್ಲರೊಳಗೂ ಬೆಳಕು ತುಂಬಬಲ್ಲದು: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್
KARNATAKA

‘ದೈವವೆಂಬ ದೀವಿಗೆ’ಯು ಎಲ್ಲರನ್ನು ಒಗ್ಗೂಡಿಸಿ, ಎಲ್ಲರೊಳಗೂ ಬೆಳಕು ತುಂಬಬಲ್ಲದು: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್

By ವಸಂತ ಬಿ ಈಶ್ವರಗೆರೆ

ಮಂಗಳೂರು: ಜಾತಿ, ಧರ್ಮದ ಗಡಿಯೊಳಗೆ ಸಿಲುಕಿ ಮನುಷ್ಯರು ದ್ವೀಪವಾಗುತ್ತಿರುವ ಈ ತಲ್ಲಣದ ಹೊತ್ತಿನಲ್ಲಿ ‘ದೈವವೆಂಬ ದೀವಿಗೆ’ಯು ಎಲ್ಲರನ್ನು ಒಗ್ಗೂಡಿಸಿ, ಎಲ್ಲರೊಳಗೂ ಬೆಳಕು ತುಂಬಬಲ್ಲದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಉಮೇಶ್ ಪಂಬದ ಸನ್ಮಾನ ಸಮಿತಿ, ಜಾರಪ್ಪ ಪಂಬದ ಸಂಸ್ಮರಣಾ ಸಮಿತಿ ಮತ್ತು ಅರಸು ಧರ್ಮ ಜಾರಂದಾಯ, ಬಂಟ ಮತ್ತು ವಾರಾಹಿ ದೇವಸ್ಥಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಉಮೇಶ್ ಪಂಬದ ಮತ್ತಿತರರನ್ನು ಸನ್ಮಾನಿಸಿ ಮಾತನಾಡಿದರು.

ಬದುಕು ನೀಡುವ ಸಂಕಟ, ನೋವಿಗೆ ದೈವದ ನುಡಿಗಳು ಮದ್ದಾಗುತ್ತವೆ ಎಂಬುದು ಸದಾ ಕಾಲದ ನಂಬಿಕೆಯೇ ಆಗಿದೆ ಎಂದರು.

ಸರ್ಕಾರಿ ಕೆಲಸವನ್ನು ಬಿಟ್ಟು ಉಮೇಶ್ ಪಂಬದ ಅವರು ದೈವದ ಚಾಕರಿಗೆ ನಿಂತು, ದೈವವಾಡುವ ನುಡಿಗಳನ್ನಾಡುತ್ತಲೇ ಪರೋಕ್ಷವಾಗಿ ಹಲವು ಕುಟುಂಬಗಳಿಗೆ ಸಂತೈಸುವ ಶಕ್ತಿಯಾಗಿದ್ದಾರೆ. ಇಂಥವರನ್ನು ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಗುರುತಿಸಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಅತ್ಯಂತ ಔಚಿತ್ಯಪೂರ್ಣ ಸಂಗತಿ ಎಂದರು.

ದೈವವೆಂಬುದು ಕುಟುಂಬದ ಬೆನ್ನಿಗೆ ಸದಾ ನಿಂತು ಸಂತೈಸುವ, ಮುನ್ನಡೆಸುವ ಶಕ್ತಿ. ಇಂಥ ‘ಮಾಯಕ’ ಶಕ್ತಿಯನ್ನು ಪಡೆದು, ಅದನ್ನು ಆರಾಧಿಸುತ್ತಿರುವುದು ದಕ್ಷಿಣದ ಕನ್ನಡದ ಹಿರಿಮೆಗಳಲ್ಲಿ ಒಂದಾಗಿದೆ ಎಂದರು.

ಇಂದಿಗೂ ದೈವದ ನುಡಿಯನ್ನು ಅಲ್ಲಗಳೆದು ಮುಂದಡಿ ಇಟ್ಟವರಿಗೆ ಉಳಿಗಾಲವಿಲ್ಲ ಎಂಬುದು ಈ ಭಾಗದಲ್ಲಿ ಜನಜನಿತ. ಸತ್ಯ, ನ್ಯಾಯ ಹಾಗೂ ಸಮಾನತೆಗೆ ಕಟ್ಟಿಬದ್ಧವಾಗಿರುವ ದೈವಗಳು ನಮ್ಮೊಳಗಿನ ಚೇತನಗಳು. ಈ ಚೇತನಗಳನ್ನು ಎಂದಾದರೂ ಮೀರಿ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

‘ನಾನಿದ್ದೇನೆ ಚಿಂತೆ ಬಿಡು’ ಎಂದು ದೈವವಾಡುವ ಮಾತು ಎಂಥ ಪರಿಸ್ಥಿತಿಯಲ್ಲಿದ್ದವರನ್ನೂ ಧೈರ್ಯಸ್ಥರನ್ನಾಗಿ ಮಾಡುತ್ತದೆ. ಹಿರಿಯರಿಲ್ಲದ, ಸಾಂತ್ವನಕ್ಕೆ ಹೆಗಲೇ ಇಲ್ಲದವರಿಗೂ ದೈವ ತಾನಿದ್ದೇನೆ ಎಂದು ಭರವಸೆ ಕೊಡುವುದು, ಅಸಹಾಯಕರ ಪರವಾಗಿ ನಿಲ್ಲುವುದರ ಹಿಂದೆಯೂ ಸಮಾನತೆ ಹಾಗೂ ಅಂತಃಕರಣದ ಆಶಯವೇ ಅಡಗಿದೆ ಎಂದರು.

ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜಾರಂದಾಯ ದೈವದ ನೇಮ ಕಟ್ಟುವ ಹಾಗೂ ಇತರ ಪ್ರಮುಖ ದೈವಸ್ಥಾನಗಳಲ್ಲಿ ದೈವ ಚಾಕರಿಯನ್ನು ಉಮೇಶ್ ಪಂಬದ ಅವರು ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದಾರೆ. ಅವರ ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಇಲ್ಲಿ ಸೇರಿರುವ ಜನರೇ ಸಾಕ್ಷಿ.

ಆಧುನೀಕರಣದ ಹಲವು ಒತ್ತಡಗಳ ನಡುವೆ ದೈವ ನರ್ತನವೆಂಬ ಕಲೆಗೆ ಯಾವ ಆಪತ್ತು ಒದಗಿ ಬಾರದಂತೆ ನೋಡಿಕೊಳ್ಳಬೇಕಿದೆ. ನೇಮ, ಕೋಲಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಮನಸ್ಸುಗಳಿರುವಾಗ, ದೈವ ನರ್ತಕರ ಬದುಕನ್ನು ಒಪ್ಪಗೊಳಿಸುವ ಕಾರ್ಯಕ್ಕೂ ಇಂಥ ಸಹೃದಯರ ನೆರವು ಪಡೆಯುವ ಕೆಲಸ ಆಗಬೇಕಿದೆ ಎಂದು ಕರೆ ನೀಡಿದರು.

ಪಂಬದ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿ ಆಗಿರುವ ರಿಷಬ್ ಶೆಟ್ಟಿ ನನಗೆ ಆತ್ಮೀಯರು. ಕಾಂತಾರ ಸಿನಿಮಾ ಮೂಲಕ ದೈವಾಚಾರಣೆಯತ್ತ ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿರುವ ಶ್ರೇಯ ರಿಷಭ್‌ ಶೆಟ್ಟಿ ಅವರಿಗೆ ಸಲ್ಲುತ್ತದೆ. ಹೀಗಾಗಲೂ ದೈವದ ಆಶೀರ್ವಾದವೇ ಕಾರಣವೆಂದು ರಿಷಭ್‌ ಹೇಳುತ್ತಾರೆ ಎಂದೂ ಗೊತ್ತಿದೆ. ದೈವ ಮತ್ತು ಶ್ರೀಸಾಮಾನ್ಯನಿಗಿರುವ ಸಂಬಂಧ, ತಾಯಿ ಹಾಗೂ ಮಗುವಿನ ಸಂಬಂಧದಂತೆ. ಇದು ಈ ತುಳುನಾಡಿನ ವಿಶೇಷತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

BREAKING: ಬೆಂಗಳೂರು ದರೋಡೆ ಕೇಸ್: ಮತ್ತೆ ಮೂವರು ಆರೋಪಿಗಳು ಅರೆಸ್ಟ್

‘ಖಾಸಗಿ ಆಸ್ಪತ್ರೆ’ಗಳು ಈ ಚಿಕಿತ್ಸೆಗೆ ಮುಂಗಡ ಹಣಕ್ಕೆ ಒತ್ತಾಯಿಸಿದ್ರೆ ‘ಲೈಸೆನ್ಸ್’ ರದ್ದು; ರಾಜ್ಯ ಸರ್ಕಾರ ಎಚ್ಚರಿಕೆ

Share. Facebook Twitter LinkedIn WhatsApp Email

Related Posts

BREAKING: ನಾಳೆ ನಿಗದಿಯಾಗಿದ್ದ ‘ರಾಜ್ಯ ಸಾರಿಗೆ ನೌಕರ’ರ ಅನಿರ್ದಿಷ್ಟಾವಧಿ ಮುಷ್ಕರ ವಾಪಸ್

2 Mins Read

ತುಮಕೂರಿನ ಕಾಂಗ್ರೆಸ್ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ?: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ

2 Mins Read

ಜೂನ್.1ರಿಂದ ಶಾಲೆ ಆರಂಭ, ಮೊದಲ ದಿನವೇ ಉಚಿತ ಪಠ್ಯಪುಸ್ತಕ ವಿತರಣೆ: ಸಾಗರ ಬಿಇಓ ಸದಾನಂದ ಸ್ವಾಮಿ

1 Min Read
Recent News

BREAKING: ನಾಳೆ ನಿಗದಿಯಾಗಿದ್ದ ‘ರಾಜ್ಯ ಸಾರಿಗೆ ನೌಕರ’ರ ಅನಿರ್ದಿಷ್ಟಾವಧಿ ಮುಷ್ಕರ ವಾಪಸ್

ಯಾವುದೇ ಕೊರತೆಯಿಲ್ಲದೆ ದಾಖಲೆಯ 257.37 ಗಿಗಾವ್ಯಾಟ್ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಯಶಸ್ವಿಯಾಗಿ ಪೂರೈಸಿದ ಭಾರತ

ಸಾರ್ವಜನಿಕ ಆಡಳಿತ ಮಂಡಳಿಗಳು ಯಾವುದೇ ಒಂದು ಪಕ್ಷದ ಪರ ವಹಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ!

ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿಡಲು ಸಹಕರಿಸುವ 5 ದಿನನಿತ್ಯದ ಆಹಾರಗಳಿವು

State News
KARNATAKA

BREAKING: ನಾಳೆ ನಿಗದಿಯಾಗಿದ್ದ ‘ರಾಜ್ಯ ಸಾರಿಗೆ ನೌಕರ’ರ ಅನಿರ್ದಿಷ್ಟಾವಧಿ ಮುಷ್ಕರ ವಾಪಸ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯ ಸಾರಿಗೆ ನಿಗಮಗಳ ನೌಕರರ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ದಿನಾಂಕ 20.05.2026 ರಿಂದ ಹಮ್ಮಿಕೊಳ್ಳಲಾಗಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು…

ತುಮಕೂರಿನ ಕಾಂಗ್ರೆಸ್ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ?: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ

ಜೂನ್.1ರಿಂದ ಶಾಲೆ ಆರಂಭ, ಮೊದಲ ದಿನವೇ ಉಚಿತ ಪಠ್ಯಪುಸ್ತಕ ವಿತರಣೆ: ಸಾಗರ ಬಿಇಓ ಸದಾನಂದ ಸ್ವಾಮಿ

ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕೆಲಸವಾಗಲಿ: ಸಾಗರದಲ್ಲಿ ಮಾ.ಸ. ನಂಜುಂಡಸ್ವಾಮಿ ಕರೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.