ಕಲಬುರ್ಗಿ : ಸುಮಾರು ಏಳು ವರ್ಷಗಳ ಹಿಂದೆ ನಡೆದಿದ್ದ ಕೊಲೆಯ ರಹಸ್ಯ ಒಂದು ವಿಡಿಯೋ ಮೂಲಕ ಬಯಲಾಗಿದ್ದು, ಸುಪಾರಿ ಕೊಟ್ಟು ಪತಿಯನ್ನೇ ಕೊಲೆ ಮಾಡಿಸಿದ್ದ ಪತ್ನಿಯನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಕಲಬುರ್ಗಿ ತಾಲೂಕಿನ ಕಣ್ಣಿ ಗ್ರಾಮದಲ್ಲಿ ಬೀರಪ್ಪ ಎನ್ನುವವನ ಕೊಲೆ ನಡೆದಿತ್ತು. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತ್ನಿ ಸುಪಾರಿ ಕೊಟ್ಟು ಬೀರಪ್ಪನನ್ನು ಕೊಲೆ ಮಾಡಿಸಿದ್ದಳು.
ಗಂಡನ ಕೊಲೆ ಮಾಡಿಸಿ ಸಹಜ ಸಾವಿನಂತೆ ಬಿಂಬಿಸಿ ಅಂತ್ಯಸಂಸ್ಕಾರ ಸಹ ಮಾಡಿದ್ದಳು. ಏಳು ವರ್ಷಗಳ ಬಳಿಕ ಇದೀಗ ಕೊಲೆಯ ರಹಸ್ಯ ಬಯಲಾಗಿದೆ. ಸುಪಾರಿ ದುಡ್ಡಿನ ವಿಚಾರದ ವಿಡಿಯೋ ವೈರಲ್ ಬಳಿಕ ಈ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಹಣ ಕೊಡದಿದ್ದಕ್ಕೆ ಆರೋಪಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆರೋಪಿ ಮಹೇಶ್ ಫೋನಲ್ಲಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಬೀರಪ್ಪನನ್ನು ಕೊಲೆ ಮಾಡಲು ಪತ್ನಿ ಶಾಂತ ಬಾಯಿಯಿಂದ ಆರೋಪಿಗಳು ಸುಪಾರಿ ಪಡೆದಿದ್ದರು.
ಬೀರಪ್ಪನ ಪತ್ನಿ ಶಾಂತಾಬಾಯಿ ಆರೋಪಿಗಳಿಗೆ ಸುಪಾರಿ ನೀಡಿದ್ದಳು. ಆರೋಪಿ ಮಹೇಶ್ ಮಹಿಳೆಯ ಜೊತೆಗೆ ಮಾತನಾಡಿರುವ ವಿಡಿಯೋ ಸದ್ಯ ವೈರಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಬೀರಪ್ಪನ ಸಹೋದರ ದೂರು ನೀಡಿದ್ದಾನೆ. ಫರತಾಬಾದ್ ಠಾಣೆ ಪೊಲೀಸ್ರಿಂದ ಇದೀಗ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಯಾದ ಬೀರಪ್ಪನ ಪತ್ನಿ ಶಾಂತಬಾಯಿ, ಮಹೇಶ್, ಸುರೇಶ್, ಸಿದ್ದು ಹಾಗೂ ಶಂಕರ್ ಎಂಬಾತನನ್ನು ಫರತಬಾದ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.








