ಬೆಳಗಾವಿ : ರಾಜ್ಯ ಕಾಂಗ್ರೆಸ್ ನಲ್ಲಿ ದಿನಕ್ಕೊಂದು ಭಾರಿ ಬೆಳವಣಿಗೆ ನಡೆಯುತ್ತಿದ್ದು, ಮಲ್ಕೊಡಿ ಸಿಎಂ ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಎಂದು ಪದೇಪದೇ ಹೇಳಿಕೆ ನೀಡುತ್ತಿದ್ದಾರೆ ಇನ್ನೊಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಪರವಾಗಿ ಕೆಲವು ಸಚಿವರಾಗೋ ಶಾಸಕರು ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ಜೊತೆ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತ ಇನ್ನೊಂದು ಕಡೆ ಸಂಪುಟ ಪುನಾರಚನೆಗೆ ಹಲವು ಆಕಾಂಕ್ಷಿಗಳು ನಮಗೂ ಮಂತ್ರಿ ಸ್ಥಾನ ಬೇಕು ಎಂದು ಆಗ್ರಹಿಸುತ್ತಿದ್ದು, ಇದೀಗ ಶಾಸಕ ಲಕ್ಷ್ಮಣ ಸವದಿ ಸಚಿವ ಸ್ಥಾನ ಬೇಡ ಅನ್ನೋದಕ್ಕೆ ನಾನೇನು ಸನ್ಯಾಸಿ ಅಲ್ಲ ಎಂದು ಅಥಣಿಯಲ್ಲಿ ತಿಳಿಸಿದರು. ಸಚಿವ ಸ್ಥಾನಕ್ಕೆ ನಾನು ಅಪೇಕ್ಷೆ ಪಟ್ಟಿಲ್ಲ ಆದರೆ ಸಚಿವ ಸ್ಥಾನ ನೀಡುವುದು ವರಿಷ್ಠರಿಗೆ ಬಿಟ್ಟ ವಿಷಯ. ಮಂತ್ರಿಗಿರಿ ಬೇಡ ಎನ್ನಲು ನಾನೇನು ಸನ್ಯಾಸಿಯಲ್ಲ ರಾಜಕಾರಣಿ. ಅಧಿವೇಶನ ಮುಗಿದ ನಂತರ ಸಂಪುಟ ಪುನಾರಚನೆ ಆಗಬಹುದು ಎಂದು ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ತಿಳಿಸಿದರು.








