ಉತ್ತರಕನ್ನಡ : ಉತ್ತರ ಕನ್ನಡದಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ಭಟ್ಕಳ ತಾಲೂಕಿನಲ್ಲಿ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿದ್ದು ಐದು ವರ್ಷದ ಬಾಲಕನೊಬ್ಬ ಸಾವನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.
ಭಟ್ಕಳದ ಜಾಲಿ ಬೀಚ್ ರೆಸಾರ್ಟ್ ನಲ್ಲಿ ಈ ಒಂದು ದುರಂತ ಸಂಭವಿಸಿದೆ ಮೃತ ಬಾಲಕನನ್ನು ಮೊಹಮ್ಮದ್ ಮುಸ್ತಕಿಂ (5) ಎಂದು ತಿಳಿದುಬಂದಿದೆ. ತಾಯಿ ಹಾಗೂ ತಮ್ಮನ ಜೊತೆಗೆ ತೆರಳಿದಾಗ ಈ ದುರಂತ ಸಂಭವಿಸಿದೆ.
ಮೃತ ಬಾಲಕನ ತಂದೆ ಸ್ಥಳೀಯ ಮದ್ರಸಾ ಶಾಲೆಯ ಶಿಕ್ಷಕ ಮೌಲಾನಿ ಶಾಹಿದುಲ್ಲಾ ಎನ್ನುವವರ ಮಗ ಎಂದು ತಿಳಿದುಬಂದಿದೆ. ತಾಯಿ ಹಾಗೂ ತಮ್ಮನ ಜೊತೆಗೆ ರೆಸಾರ್ಟ್ ಗೆ ಬಾಲಕ ತೆರಳಿದ್ದಾನೆ ಈ ವೇಳೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಾಲಕ ಬಿದ್ದಾಗ ತಕ್ಷಣ ತಾಯಿ ಆತನನ್ನು ಮೇಲಕ್ಕೆ ಎತ್ತಿದ್ದಾರೆ ಆದರೆ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಆತ ಸಾವನಪ್ಪಿದ್ದ ಭಟ್ಕಳ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








