ನವದೆಹಲಿ : ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆಯ ಹೊರಗೆ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗುರುವಾರ ನಾಲ್ವರು ಪ್ರಮುಖ ಶಂಕಿತರನ್ನ ಬಂಧಿಸಿದ್ದು, ಪ್ರಕರಣದಲ್ಲಿ ಒಟ್ಟು ಬಂಧನಗಳ ಸಂಖ್ಯೆ ಆರಕ್ಕೆ ತಲುಪಿದೆ.
ಪತ್ರಿಕಾ ಪ್ರಕಟಣೆಯಲ್ಲಿ, ಪಟಿಯಾಲ ಹೌಸ್ ನ್ಯಾಯಾಲಯದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ವಿಚಾರಣೆ ಆದೇಶದ ಮೇರೆಗೆ ನಾಲ್ವರನ್ನು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎನ್‌ಐಎ ತಿಳಿಸಿದೆ.
ಬಂಧಿತ ವ್ಯಕ್ತಿಗಳನ್ನು ಪುಲ್ವಾಮಾ (ಜೆ & ಕೆ) ದ ಡಾ. ಮುಜಮ್ಮಿಲ್ ಶಕೀಲ್ ಗನೈ, ಅನಂತನಾಗ್ (ಜೆ & ಕೆ) ದ ಡಾ. ಅದೀಲ್ ಅಹ್ಮದ್ ರಾಥರ್, ಲಕ್ನೋ (ಯುಪಿ) ದ ಡಾ. ಶಾಹೀನ್ ಸಯೀದ್ ಮತ್ತು ಶೋಪಿಯಾನ್ (ಜೆ & ಕೆ) ದ ಮುಫ್ತಿ ಇರ್ಫಾನ್ ಅಹ್ಮದ್ ವಾಗೆ ಎಂದು ಗುರುತಿಸಲಾಗಿದೆ.
BREAKING: ಸಂಚಾರ ನಿಯಮ ಉಲ್ಲಂಘನೆ: ಶೇ.50ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಗೆ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ
BREAKING: ದೆಹಲಿ ಕಾರು ಸ್ಫೋಟ ಕೇಸ್: ಮತ್ತೆ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ NIA | Delhi Red Fort Blast
BREAKING ; ಅಕ್ರಮ ಹಣ ವರ್ಗಾವಣೆ ಕೇಸ್ : ‘ರಾಬರ್ಟ್ ವಾದ್ರಾ’ ವಿರುದ್ಧ ‘ED’ ಹೊಸ ಚಾರ್ಜ್ಶೀಟ್








