ಬೆಂಗಳೂರು : ನಿನ್ನೆ ಬೆಂಗಳೂರಲ್ಲಿ ರಾಜ್ಯದ ಇತಿಹಾಸದಲ್ಲೇ ಅತೀ ದೊಡ್ಡ ದರೋಡೆ ನಡೆದಿದ್ದು, 7.11 ಕೋಟಿ ನಗದು ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಂಧ್ರಪ್ರದೇಶದ ತಿರುಪತಿಯಲ್ಲಿ ದರೋಡೆಕೋರರ ಕಾರು ಪತ್ತೆಯಾಗಿದೆ.
ಹೌದು ಇನ್ನೋವಾ ಕಾರು ಆಂಧ್ರಪ್ರದೇಶದ ಚಿತ್ತೂರು ಬಳಿ ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ಬೆಂಗಳೂರು ಪೊಲೀಸರು ಸದ್ಯ ವಶಕ್ಕೆ ಪಡೆದಿದ್ದಾರೆ. ತಿರುಪತಿಯಲ್ಲಿ ಕಾರು ಬಿಟ್ಟು ಆರೋಪಿಗಳು ಪರಾರಿ ಆಗಿದ್ದಾರೆ. ದರೋಡೆಕೋರರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಕಾರಿನ ನಂಬರ ಪ್ಲೇಟ್ ಬದಲಿಸಿ, ಓಡಾಡುತ್ತಿದ್ದ ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಣಸವಾಡಿಯ ಕಲ್ಯಾಣ ನಗರದ ಇಬ್ಬರು ಸಿಸಿಬಿ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ ನಂಬರ್ ಪ್ಲೇಟ್ ಬದಲಿಸಿ ಇನೋವಾ ಕಾರಿನಲ್ಲಿ ಗ್ಯಾಂಗ್ ಎಸ್ಕೇಪ್ ಆಗಿತ್ತು ಯುಪಿ ನೊಂದಣಿಯ ಕಾರಣ ನಂಬರ್ ಪ್ಲೇಟ್ ಹಾಕಿಕೊಂಡು ಇದೀಗ ದರೋಡೆ ಗ್ಯಾಂಗ್ ಪರಾರಿ ಆಗಿದೆ ದರೋಡೆಯ ವೇಳೆ ಕರ್ನಾಟಕ ನೊಂದಣಿ ನಂಬರ್ ಹಾಕಿದ ಆರೋಪಿಗಳು. ಕಲ್ಯಾಣ ನಗರದ ಸ್ವಿಫ್ಟ್ ಕಾರ್ ನಂಬರ್ ಪ್ಲೇಟ್ ಅನ್ನು ಆರೋಪಿಗಳು ಬಳಸಿದ್ದಾರೆ, ಇದೀಗ ಸಿಸಿಟಿವಿ ಮತ್ತು ಲೊಕೇಶನ್ ಡಂಬನಿಂದ ಆರೋಪಿಗಳು ಲಾಕ್ ಆಗಿದ್ದಾರೆ. ಹಿಂದಿ ಮಾತನಾಡಿ ಆರೋಪಿಗಳು ದಾರಿ ತಪ್ಪಿಸುವ ಕೆಲಸ ಮಾಡಿದ್ದರು.








