ನವದೆಹಲಿ : ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಪರಾರಿಯಾಗಿದ್ದ ದರೋಡೆಕೋರ ಅನ್ಮೋಲ್ ಬಿಷ್ಣೋಯ್’ನನ್ನ ಅಮೆರಿಕದಿಂದ ಗಡಿಪಾರು ಮಾಡಿದ ಬಳಿಕ ಬುಧವಾರ ದೆಹಲಿಯ ಐಜಿಐ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅವನನ್ನು ಎನ್‌ಐಎ ವಶಕ್ಕೆ ತೆಗೆದುಕೊಂಡು ಔಪಚಾರಿಕ ಕಾರ್ಯವಿಧಾನಗಳನ್ನ ಪೂರ್ಣಗೊಳಿಸಲಿದೆ. ಬಳಿಕ ಪಟಿಯಾಲ ನ್ಯಾಯಾಲಯಕ್ಕೆ ಕರೆದೊಯ್ಯಲಾಗುವುದು.
ಅನ್ಮೋಲ್ ಅವರ ಗಡೀಪಾರು ಪ್ರಕ್ರಿಯೆಯನ್ನು ಎನ್‌ಐಎ ಸಂಘಟಿಸಿತು. ಅಮೆರಿಕದಿಂದ ಸುಮಾರು 200 “ಅಕ್ರಮ” ವಲಸಿಗರನ್ನ ಕರೆದೊಯ್ಯುವ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಬಂದಿದ್ದಾನೆ.
ಬಾಬಾ ಸಿದ್ದಿಕಿ ಅವರ ಪುತ್ರ ಜೀಶನ್ ಸಿದ್ದಿಕಿ ಅವರು ಯುಎಸ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯಿಂದ (DHS) ಇಮೇಲ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದರು. ಗೌಪ್ಯ ಬಲಿಪಶು-ಅಧಿಸೂಚನೆ ವ್ಯವಸ್ಥೆಯಾದ DHS-VINE ಮೂಲಕ ಕಳುಹಿಸಲಾದ ಇಮೇಲ್‌ನಲ್ಲಿ, ಅನ್ಮೋಲ್ ಬಿಷ್ಣೋಯ್’ನನ್ನ ನವೆಂಬರ್ 18, 2025 ರಂದು “ಫೆಡರಲ್ ಸರ್ಕಾರವು ಅಮೆರಿಕದಿಂದ ಗಡಿಪಾರು ಮಾಡಿದೆ” ಎಂದು ಹೇಳಲಾಗಿದೆ.
SHOCKING : ವಿಪರೀತ ಚಳಿ ಸಹಿಸಲಾಗದೇ ಜನರೇಟರ್ ಒಳಗೆ ಹೋದ ವೃದ್ಧ `ಕರೆಂಟ್ ಶಾಕ್’ ನಿಂದ ಸಾವು.!








