Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೋಲಾರದ ಹೋಟೆಲ್‌ಗಳ ಮೇಲೆ ತಹಸೀಲ್ದಾರ್ ದಾಳಿ: ಅಕ್ರಮವಾಗಿ ಬಳಸುತ್ತಿದ್ದ 21 ಗೃಹಬಳಕೆ ಸಿಲಿಂಡರ್‌ಗಳ ಜಪ್ತಿ!

15/03/2026 6:20 PM

ಬೆಂಗಳೂರಿನಲ್ಲಿ ಗ್ಯಾಸ್ ಅಭಾವ: ಹೋಟೆಲ್ ಉದ್ಯಮಕ್ಕೆ 100 ಕೋಟಿ ರೂಪಾಯಿ ನಷ್ಟದ ಭೀತಿ!

15/03/2026 6:15 PM

ವಿಶ್ವ ಕಿಡ್ನಿ ದಿನಾಚರಣೆ: ಸ್ಪರ್ಶ್‌ ಆಸ್ಪತ್ರೆ ಆಯೋಜಿಸಿದ್ದ “ಆರೋಗ್ಯಕಿಡ್ನಿ ಓಟ”ದಲ್ಲಿ 7 ಸಾವಿರ ಮಂದಿ ಭಾಗಿ

15/03/2026 6:07 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಿಯಾಂಕ್ ಖರ್ಗೆ ಸುಳ್ಳುಗಳನ್ನು ಹೇಳುವುದರಲ್ಲಿ ನಿಸ್ಸೀಮ: ಛಲವಾದಿ ನಾರಾಯಣಸ್ವಾಮಿ
KARNATAKA

ಪ್ರಿಯಾಂಕ್ ಖರ್ಗೆ ಸುಳ್ಳುಗಳನ್ನು ಹೇಳುವುದರಲ್ಲಿ ನಿಸ್ಸೀಮ: ಛಲವಾದಿ ನಾರಾಯಣಸ್ವಾಮಿ

By kannadanewsnow0918/11/2025 3:49 PM

ಬೆಂಗಳೂರು: ಪ್ರಿಯಾಂಕ್ ಖರ್ಗೆಯವರು ಸುಳ್ಳುಗಳನ್ನು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರಿಸಿದರು. ಅವರು ಹೇಳಿರುವ ಮಾತುಗಳೆಲ್ಲವೂ ಅಪ್ಪಟ ಸುಳ್ಳು ಎಂದು ಟೀಕಿಸಿದರು. ತಮ್ಮ ಕ್ಷೇತ್ರ ಚಿತ್ತಾಪುರದಲ್ಲಿ ಪಥ ಸಂಚಲನ ಆಗಲು ಬಿಡುವುದಿಲ್ಲ ಎಂದು ಹೇಳಿದ್ದರು. ಆದರೆ, ಇವತ್ತು ಪಥ ಸಂಚಲನ ನಡೆದಿದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.

ನನ್ನ ಕೈಯಲ್ಲಿ ಅಧಿಕಾರವಿದ್ದರೆ ಇವತ್ತೇ ಆರೆಸ್ಸೆಸ್ ನಿಷೇಧಿಸುವುದಾಗಿ ಪ್ರಿಯಾಂಕ್ ಹೇಳಿದ್ದರು. ಅದು ಅವರಿಗೆ ಈ ಜನ್ಮದಲ್ಲಿ ಆಗಲಾರದ ವಿಷಯ ಎಂದು ಸವಾಲೆಸೆದರು. ನೀವು ಅನುಮತಿ ಕೊಟ್ಟಿದ್ದಾಗಿ ಹೇಳಿದ್ದೀರಿ; ಅದು ನಿಮ್ಮ ಅನುಮತಿಯಲ್ಲ; ಅದು ನ್ಯಾಯಾಲಯದಿಂದ ಸಿಕ್ಕಿದೆ ಎಂದು ಗಮನಕ್ಕೆ ತಂದರು.
ಸರಣಿ ಸುಳ್ಳು ಹೇಳುವ ಸುಳ್ಳುಗಾರ ಇದ್ದರೆ ಅದು ಪ್ರಿಯಾಂಕ್ ಖರ್ಗೆ ಎಂದರು. ಇರಲಾರದೆ ಇರುವೆ ಬಿಟ್ಟುಕೊಂಡು ಈಗ ಕಚ್ಚಿಸಿಕೊಂಡು ಓಡಾಡುತ್ತಿದ್ದಾರೆ; ಅವರಿಗೆ ಇರುವೆ ಬಹಳ ಕಚ್ಚಿದೆ ಎಂದು ತಿಳಿಸಿದರು.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಬಾಂಬ್ ಸ್ಫೋಟದ ವಿಷಯವನ್ನು ಧರ್ಮ- ಜಾತಿಗೆ ಹೋಲಿಕೆ ಮಾಡಬಾರದೆಂದು ಪದೇಪದೇ ಹೇಳುತ್ತೇವೆ. ಆದರೆ ಆಗಿದ್ದೇನು? ಸಂಸತ್ ಮೇಲೆ ದಾಳಿ, ಪುಲ್ವಾಮಾ ದಾಳಿ- ಒಂದು ಧರ್ಮದವರಿಂದ ನಡೆದಿದೆ. ದಾಳಿಯ ಹಿನ್ನೆಲೆ ಗಮನಿಸಿದರೆ ಅದು ಒಂದು ಧರ್ಮದವರೇ ಆಗಿದ್ದಾರೆ ಯಾಕೆ ಎಂದು ಕೇಳಿದರು. ಅವರೆಲ್ಲರನ್ನೂ ನಾವು ಹುತಾತ್ಮರು ಎಂದು ಕರೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು. ದೇಶಕ್ಕೆ ಆಪತ್ತು ಬಂದಾಗ ಅದನ್ನು ವಿರೋಧಿಸಿ ಹೋರಾಟ ಮಾಡಿ ಬಲಿದಾನ ಆದರೆ ಅದನ್ನು ಹುತಾತ್ಮರೆಂದು ಗುರುತಿಸಬಹುದು ಎಂದು ವಿಶ್ಲೇಷಿಸಿದರು. ಇಲ್ಲಿ ಸ್ವಾರ್ಥ ಸಾಧನೆಯ ಚಟುವಟಿಕೆಯಲ್ಲಿ ಬಲಿಯಾಗಿದ್ದಾರೆ ಎಂದರು.

ಕ್ರಿಮಿನಲ್ ಚಟುವಟಿಕೆ ನಡೆದಾಗ ತೆಪ್ಪಗಿರುವುದೇಕೆ?

ನಮ್ಮ ಮೆಟ್ರೋಗೆ ಬಾಂಬ್ ಬೆದರಿಕೆ ಸುಳ್ಳಿರಬಹುದು; ನಿಜ ಇರಲೂ ಬಹುದು. ಆದರೆ, ಈಚೆಗೆ ಅದು ಹೆಚ್ಚಾಗುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಇದೆಲ್ಲದಕ್ಕೂ ಆಡಳಿತ ನಡೆಸುವ ಸರಕಾರವೇ ಕಾರಣ. ಆಡಳಿತ ಮಾಡುವ ಸರಕಾರವು ತಪ್ಪು ಮಾಡಿದವರಿಗೆ ಶಿಕ್ಷೆ ಸಿಗುವಂತೆ ವರ್ತಿಸಿದರೆ, ಇಂಥವನ್ನು ತಡೆಯಬಹುದು. ಸಾಮಾಜಿಕ ಜಾಲತಾಣದ ಪೋಸ್ಟ್‍ಗೆ ಸಂಬಂಧಿಸಿ ಪೊಲೀಸರನ್ನು ಕಳುಹಿಸಿ ಬಂಧಿಸುತ್ತಾರೆ; ಆದರೆ, ಈ ರೀತಿ ಕ್ರಿಮಿನಲ್ ಚಟುವಟಿಕೆ ನಡೆದಾಗ ಯಾಕೆ ಈ ಸರಕಾರ ತೆಪ್ಪಗಿರುತ್ತದೆ ಎಂದು ಪ್ರಶ್ನೆ ಹುಟ್ಟುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಹೈಕಮಾಂಡ್ ಎಂಬುದು ಸತ್ತು ಹೋಗಿದೆ. ಹೈಕಮಾಂಡ್ ಎಂದರೆ ಎಐಸಿಸಿ ಅಧ್ಯಕ್ಷರು ಇರಬೇಕು. ಕರ್ನಾಟಕದ ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷರೆಂದು ತಿಳಿದುಕೊಂಡೇ ಇಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಅವರು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರೆಂದು ಇವತ್ತಿಗೂ ತಿಳಿದುಕೊಂಡಂತಿದೆ ಎಂದು ಟೀಕಿಸಿದರು. ಬಿಹಾರದಲ್ಲಿ ಎಲ್ಲೂ ಕೂಡ ಎಐಸಿಸಿ ಅಧ್ಯಕ್ಷರ ಫೋಟೊಗಳೇ ಇರಲಿಲ್ಲ; ಅವರಿಗೆ ಅಲ್ಲಿ ಮಹತ್ವ ಇರಲಿಲ್ಲ; ರಾಹುಲ್ ಗಾಂಧಿಗೆ ಮಹತ್ವ ಇತ್ತು. ಅಂದರೆ ಹೈಕಮಾಂಡ್ ಯಾರು? ಮಾನ್ಯ ಖರ್ಗೆಯವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಗಾದೆಯ ಥರ ಕಾಂಗ್ರೆಸ್ಸಿನಲ್ಲಿ ಇದ್ದಾರೆ. ಅದರಿಂದಾಗಿ ಪರಿಸ್ಥಿತಿ ಹೀಗಾಗಿದೆ ಎಂದು ವಿವರಿಸಿದರು.

ಕಾಂಗ್ರೆಸ್ಸಿನವರು ಒಂದು ಕಡೆ ನಾಯಕತ್ವ ಬದಲಾವಣೆ ಆಗಬೇಕು ಎನ್ನುತ್ತಾರೆ. ಮತ್ತೊಂದು ಕಡೆ ಸಚಿವಸಂಪುಟ ಪುನಾರಚನೆ ಮಾತು ಕೇಳಿಸುತ್ತಿದೆ. ಗುಜರಾತ್‍ನಲ್ಲಿ ಬೆಳಿಗ್ಗೆ ರಾಜೀನಾಮೆ ಕೊಟ್ಟು ಎರಡನೇ ದಿನ ಬೆಳಿಗ್ಗೆ ಬೇರೆ ಸಚಿವಸಂಪುಟವೇ ರಚನೆ ಆಯಿತು. ಇಲ್ಲಿ ಒಂದು ವರ್ಷದಿಂದ ಸಚಿವಸಂಪುಟ ಪುನಾರಚನೆ ದೊಡ್ಡ ಕಾರ್ಯಕ್ರಮದಂತಿದೆ ಎಂದು ವ್ಯಂಗ್ಯವಾಗಿ ನುಡಿದರು.

‘ಬೆಂಗಳೂರು ಟೆಕ್‌ ಸಮ್ಮಿಟ್‌’ನಲ್ಲಿ ಕ್ವಾಂಟಮ್‌ ಟೆಕ್ನಾಲಜಿ ರೌಂಡ್‌ಟೇಬಲ್‌: ಸಚಿವ ಎನ್‌ ಎಸ್‌ ಭೋಸರಾಜು

Share. Facebook Twitter LinkedIn WhatsApp Email

Related Posts

ಕೋಲಾರದ ಹೋಟೆಲ್‌ಗಳ ಮೇಲೆ ತಹಸೀಲ್ದಾರ್ ದಾಳಿ: ಅಕ್ರಮವಾಗಿ ಬಳಸುತ್ತಿದ್ದ 21 ಗೃಹಬಳಕೆ ಸಿಲಿಂಡರ್‌ಗಳ ಜಪ್ತಿ!

15/03/2026 6:20 PM1 Min Read

ಬೆಂಗಳೂರಿನಲ್ಲಿ ಗ್ಯಾಸ್ ಅಭಾವ: ಹೋಟೆಲ್ ಉದ್ಯಮಕ್ಕೆ 100 ಕೋಟಿ ರೂಪಾಯಿ ನಷ್ಟದ ಭೀತಿ!

15/03/2026 6:15 PM1 Min Read

ವಿಶ್ವ ಕಿಡ್ನಿ ದಿನಾಚರಣೆ: ಸ್ಪರ್ಶ್‌ ಆಸ್ಪತ್ರೆ ಆಯೋಜಿಸಿದ್ದ “ಆರೋಗ್ಯಕಿಡ್ನಿ ಓಟ”ದಲ್ಲಿ 7 ಸಾವಿರ ಮಂದಿ ಭಾಗಿ

15/03/2026 6:07 PM2 Mins Read
Recent News

ಕೋಲಾರದ ಹೋಟೆಲ್‌ಗಳ ಮೇಲೆ ತಹಸೀಲ್ದಾರ್ ದಾಳಿ: ಅಕ್ರಮವಾಗಿ ಬಳಸುತ್ತಿದ್ದ 21 ಗೃಹಬಳಕೆ ಸಿಲಿಂಡರ್‌ಗಳ ಜಪ್ತಿ!

15/03/2026 6:20 PM

ಬೆಂಗಳೂರಿನಲ್ಲಿ ಗ್ಯಾಸ್ ಅಭಾವ: ಹೋಟೆಲ್ ಉದ್ಯಮಕ್ಕೆ 100 ಕೋಟಿ ರೂಪಾಯಿ ನಷ್ಟದ ಭೀತಿ!

15/03/2026 6:15 PM

ವಿಶ್ವ ಕಿಡ್ನಿ ದಿನಾಚರಣೆ: ಸ್ಪರ್ಶ್‌ ಆಸ್ಪತ್ರೆ ಆಯೋಜಿಸಿದ್ದ “ಆರೋಗ್ಯಕಿಡ್ನಿ ಓಟ”ದಲ್ಲಿ 7 ಸಾವಿರ ಮಂದಿ ಭಾಗಿ

15/03/2026 6:07 PM

ದೇವರ ದೀಪಕ್ಕೆ ಎಳ್ಳೆಣ್ಣೆ ಉಪಯೋಗಿಸಿದರೆ ಕಷ್ಟಗಳು ದೂರ

15/03/2026 6:04 PM
State News
KARNATAKA

ಕೋಲಾರದ ಹೋಟೆಲ್‌ಗಳ ಮೇಲೆ ತಹಸೀಲ್ದಾರ್ ದಾಳಿ: ಅಕ್ರಮವಾಗಿ ಬಳಸುತ್ತಿದ್ದ 21 ಗೃಹಬಳಕೆ ಸಿಲಿಂಡರ್‌ಗಳ ಜಪ್ತಿ!

By kannadanewsnow0915/03/2026 6:20 PM KARNATAKA 1 Min Read

ಕೋಲಾರ: ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವದ ನಡುವೆಯೇ ಅಕ್ರಮ ಚಟುವಟಿಕೆಗಳು ಮುಂದುವರಿದಿವೆ. ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬದಲಿಗೆ…

ಬೆಂಗಳೂರಿನಲ್ಲಿ ಗ್ಯಾಸ್ ಅಭಾವ: ಹೋಟೆಲ್ ಉದ್ಯಮಕ್ಕೆ 100 ಕೋಟಿ ರೂಪಾಯಿ ನಷ್ಟದ ಭೀತಿ!

15/03/2026 6:15 PM

ವಿಶ್ವ ಕಿಡ್ನಿ ದಿನಾಚರಣೆ: ಸ್ಪರ್ಶ್‌ ಆಸ್ಪತ್ರೆ ಆಯೋಜಿಸಿದ್ದ “ಆರೋಗ್ಯಕಿಡ್ನಿ ಓಟ”ದಲ್ಲಿ 7 ಸಾವಿರ ಮಂದಿ ಭಾಗಿ

15/03/2026 6:07 PM

ದೇವರ ದೀಪಕ್ಕೆ ಎಳ್ಳೆಣ್ಣೆ ಉಪಯೋಗಿಸಿದರೆ ಕಷ್ಟಗಳು ದೂರ

15/03/2026 6:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.