Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಅಮೆರಿಕ ‘ಡೂಮ್ಸ್ ಡೇ ಕ್ಷಿಪಣಿ’ ಪರೀಕ್ಷೆ : ಇದು “ಭೂಮಿಯ ಯಾವುದೇ ಸ್ಥಳದ ಮೇಲೂ ದಾಳಿ” ಮಾಡಬಲ್ಲದು!

05/03/2026 4:16 PM

BREAKING : ಕರ್ನಾಟಕದ ಮುಂದಿನ ‘CM’ ಡಿಸಿಎಂ ಡಿಕೆ ಶಿವಕುಮಾರ್ : ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ

05/03/2026 4:11 PM

Watch Video: ರಂಗೋಲಿಯಲ್ಲಿ ಅರಳಿದ ‘ಸಿಎಂ ಸಿದ್ಧರಾಮಯ್ಯ ಭಾವಚಿತ್ರ’

05/03/2026 4:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಳಗಾವಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಅಮೆರಿಕ ನಾಗರಿಕರನ್ನು ವಂಚಿಸುತಿದ್ದ 33 ಸೈಬರ್ ವಂಚಕರು ಅರೆಸ್ಟ್!
KARNATAKA

ಬೆಳಗಾವಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಅಮೆರಿಕ ನಾಗರಿಕರನ್ನು ವಂಚಿಸುತಿದ್ದ 33 ಸೈಬರ್ ವಂಚಕರು ಅರೆಸ್ಟ್!

By kannadanewsnow0515/11/2025 1:31 PM

ಬೆಳಗಾವಿ : ಸಾಮಾನ್ಯವಾಗಿ ದೇಶದಲ್ಲಿ ಎಲ್ಲೇ ಸೈಬರ್ ವಂಚನೆ ಪ್ರಕರಣಗಳು ನಡೆದರೂ ಅದರ ಹಿಂದೆ ವಿದೇಶಿ ವಂಚಕರ ಕೈವಾಡ ಇರೋದು ಕೇಳಿದ್ದೇವೆ. ಆದರೆ ಇದೀಗ ಬೆಳಗಾವಿಯಲ್ಲೇ ಕುಳಿತು ಅಮೆರಿಕದ ನಾಗರಿಕರಿಗೆ ಮಂಕು ಬೂದಿ ಎರಚಿ ವಂಚನೆ ಎಸುಗುತ್ತಿದ್ದ 33 ಸೈಬರ್ ವಂಚಕರನ್ನು ಬೆಳಗಾವಿ ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು ಸಾಮಾನ್ಯವಾಗಿ ಕರ್ನಾಟಕದಲ್ಲಿ ಎಲ್ಲೇ ಸೈಬರ್‌ ವಂಚನೆ ನಡೆದರೂ, ಅದರ ಹಿಂದೆ ವಿದೇಶಿಗರ ಲಿಂಕ್‌ ಇರುತ್ತಿತ್ತು. ಆದ್ರೆ ಈಗ ಕುಂದಾನಗರಿಯಲ್ಲಿ ನಡೆದಿರೋದೇ ಬೇರೆ. ಬೆಳಗಾವಿಯಲ್ಲಿ ಕುಳಿತು ವಿಶ್ವದ ದೊಡ್ಡಣ್ಣ ಎನ್ನುವ ಅಮೆರಿಕದ ನಾಗರಿಕರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಕಾಲ್ ಸೆಂಟರ್ ಹೆಸರಿನಲ್ಲಿ ಅನುಮತಿ ಪಡೆದು ವಂಚಿಸುತ್ತಿದ್ದ ಸೈಬರ್‌ ವಂಚಕರನ್ನ ಬೆಳಗಾವಿ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

ಘಟನೆ ಬೆಳಕಿಗೆ ಬಂದಿದ್ದೆಗೆ?

ಆರೋಪಿಗಳು ಬೆಳಗಾವಿಯ ಅಜಮ್ ನಗರದ ಕುಮಾರ್ ಹಾಲ್‌ನಲ್ಲಿ ಬಾಡಿಗೆ ಮನೆ ಪಡೆದು ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಕಾಲ್‌ ಸೆಂಟರ್‌ ಹೆಸರಿನಲ್ಲಿ ದಂಧೆ ಶುರು ಮಾಡಿದ್ದರು. ಪ್ರತಿದಿನ ನೂರಾರು ಜನರಿಗೆ ಕರೆ ಮಾಡಿ ಯಾಮಾರಿಸುತ್ತಿದ್ದರು. ಬಳಿಕ ಅಮೆರಿಕದ ಹಿರಿಯ ನಾಗರಿಕರನ್ನ ಟಾರ್ಗೆಟ್‌ ಮಾಡಿದ್ದರು. ಡಾರ್ಕ್‌ ವೆಬ್‌ನಲ್ಲಿ ನಂಬರ್‌ ತೆಗೆದು ಕರೆ ಮಾಡುತ್ತಿದ್ದರು. ನಿಮ್ಮ ಹೆಸರಿನಲ್ಲಿ ಪಾರ್ಸಲ್‌ ಬಂದಿದೆ ಎಂದು ಹೇಳುತ್ತಿದ್ದರು.

ಪಾರ್ಸೆಲ್‌ ಬಂದಿಲ್ಲ ಅಂತ ಗ್ರಾಹಕರು ಪ್ರತಿಕ್ರಿಯಿಸಿದ್ರೆ, ಅದನ್ನ ಕ್ಯಾನ್ಸಲ್‌ ಮಾಡಿ ಅಂತ ಬೇರೆ ನಂಬರ್‌ ಕೊಡ್ತಿದ್ದರು. ಆ ನಂಬರ್‌ಗೆ ಕರೆ ಮಾಡಿದಾಗ ಯಾಮಾರಿಸಿ ಹಣ ಎಗರಿಸುತ್ತಿದ್ದರು. ಫೆಡರಲ್ ಟ್ರೆಡ್ ಕಮಿಷನರ್ ಅಂತಾ ಹೆಸರು ಹೇಳಿ ವಂಚನೆ ವಂಚನೆ ಮಾಡುತ್ತಿದ್ದರು. ಇದೇ ರೀತಿ ಒಬ್ಬೊಬ್ಬರಿಗೆ ಒಂದೊಂದು ಕಥೆ ಹೇಳಿ ವಂಚಿಸುತ್ತಿದ್ದರು. ಪೊಲೀಸರ ತಪಾಸಣೆ ಬಳಿಕ ಉತ್ತರ ಭಾರತ ಮೂಲದ 33 ಮಂದಿ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತರಿಂದ 37 ಲ್ಯಾಪ್ ಟಾಪ್, 37 ಮೊಬೈಲ್‌ಗಳ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : ಕರ್ನಾಟಕದ ಮುಂದಿನ ‘CM’ ಡಿಸಿಎಂ ಡಿಕೆ ಶಿವಕುಮಾರ್ : ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ

05/03/2026 4:11 PM1 Min Read

Watch Video: ರಂಗೋಲಿಯಲ್ಲಿ ಅರಳಿದ ‘ಸಿಎಂ ಸಿದ್ಧರಾಮಯ್ಯ ಭಾವಚಿತ್ರ’

05/03/2026 4:11 PM1 Min Read

ನಿಂತು ಹೋಗಿದ್ದ ರಕ್ತ ಪರಿಚಲನೆಗೆ ಸ್ಪರ್ಷ್ ಆಸ್ಪತ್ರೆಯಲ್ಲಿ ಮರು ಚಾಲನೆ: ಬಾಲಕನಿಗೆ ಜೀವದಾನ

05/03/2026 4:11 PM2 Mins Read
Recent News

BREAKING : ಅಮೆರಿಕ ‘ಡೂಮ್ಸ್ ಡೇ ಕ್ಷಿಪಣಿ’ ಪರೀಕ್ಷೆ : ಇದು “ಭೂಮಿಯ ಯಾವುದೇ ಸ್ಥಳದ ಮೇಲೂ ದಾಳಿ” ಮಾಡಬಲ್ಲದು!

05/03/2026 4:16 PM

BREAKING : ಕರ್ನಾಟಕದ ಮುಂದಿನ ‘CM’ ಡಿಸಿಎಂ ಡಿಕೆ ಶಿವಕುಮಾರ್ : ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ

05/03/2026 4:11 PM

Watch Video: ರಂಗೋಲಿಯಲ್ಲಿ ಅರಳಿದ ‘ಸಿಎಂ ಸಿದ್ಧರಾಮಯ್ಯ ಭಾವಚಿತ್ರ’

05/03/2026 4:11 PM

ನಿಂತು ಹೋಗಿದ್ದ ರಕ್ತ ಪರಿಚಲನೆಗೆ ಸ್ಪರ್ಷ್ ಆಸ್ಪತ್ರೆಯಲ್ಲಿ ಮರು ಚಾಲನೆ: ಬಾಲಕನಿಗೆ ಜೀವದಾನ

05/03/2026 4:11 PM
State News
KARNATAKA

BREAKING : ಕರ್ನಾಟಕದ ಮುಂದಿನ ‘CM’ ಡಿಸಿಎಂ ಡಿಕೆ ಶಿವಕುಮಾರ್ : ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ

By kannadanewsnow0505/03/2026 4:11 PM KARNATAKA 1 Min Read

ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ಸದ್ಯ ನಾಯಕತ್ವ ಬದಲಾವಣೆ ಚರ್ಚೆ ಮಧ್ಯ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ೧೭ನೇ ಬಜೆಟ್ ಮಂಡನೆ…

Watch Video: ರಂಗೋಲಿಯಲ್ಲಿ ಅರಳಿದ ‘ಸಿಎಂ ಸಿದ್ಧರಾಮಯ್ಯ ಭಾವಚಿತ್ರ’

05/03/2026 4:11 PM

ನಿಂತು ಹೋಗಿದ್ದ ರಕ್ತ ಪರಿಚಲನೆಗೆ ಸ್ಪರ್ಷ್ ಆಸ್ಪತ್ರೆಯಲ್ಲಿ ಮರು ಚಾಲನೆ: ಬಾಲಕನಿಗೆ ಜೀವದಾನ

05/03/2026 4:11 PM

ಪ್ರಾಮಾಣಿಕತೆಯೇ ಇವರ ಆಸ್ತಿ: ಬಸ್ಸಿನಲ್ಲಿ ಸಿಕ್ಕ ₹3 ಲಕ್ಷದ ಚಿನ್ನದ ಸರ ಮರಳಿಸಿ ಮಾದರಿಯಾದ ನಿರ್ವಾಹಕ ರಾಜೇಶ್ ಹೆಗ್ಡೆ!

05/03/2026 4:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.